Wednesday, May 20, 2009

ನನಸು

ಮನದ ಕನಸು ನನಸಾಗಲೆಂದು,
ಸುರಿಯುತಿದೆ ಬಾನು ಪನ್ನೀರಿನ ಹನಿಗಳಾಗಿ;
ಕಾರ್ಮೋಡ ಕರಗಿ ಬಾನು ತಿಳಿಯಾಗಲು ಜದತ್ವವು ಸೊರಗಿ;
ದೈವ ಪನ್ನೀರು ಚಿಮುಕಿಸಿದೆ ಹರಸಲೆಂದು.
ಶ್ರದ್ಧೆ ತೋರೆಂದು ಗುಡುಗುತಿದೆ ಬಾನು,
ಸಾಧಿಸಿದರೆ ಹೀಗೆ ಬೀಗುವೆಯೆಂದು ತೋರಿಸಿದೆ ಮಿಂಚು ತಾನು.
ಇದಕೆಲ್ಲ ಅರ್ಥವು ನಾನು ಗೆದ್ದಾಗಲೇ ಏನು?

No comments: