Saturday, August 1, 2020

Shakuntala Devi



P.S:

Shakuntala Devi: A world-renowned mathematician, known for her scientifically inexplicable master-brain with numbers, with no formal education had always kept me amazed, but from a great emotional distance.
I knew her as a human computer, and that's that. So much for an Indian personality known world-wide!

Through this movie, with a brilliant screenplay and direction, Anu Menon and dialogue writer Ishita Moitra have spun a magic wand of bringing Shakuntala Devi's personal life back from the dead.  

I sometimes wonder how would it be to lead a life being child prodigy. This lady did, and it was difficult foregoing the childhood for she never let success get ahead of her. The screenplay in the movie has added bit of spice to pump up life into her story, but her own life as is was never less of any!

This movie will leave the viewer with a feeling of watching a great life's story and stay amazed at the personal touch it has. Grey patches exist in everyone's life here and there, and they are real, no matter how successful you are, or how publicly loved you are. Handling each challenging circumstance depend on the head-weight of the person in question, the baggage that the person carries, and the experiences that one learns from deep scratches on one's leg of thoughts.

Vidya Balan as Shakuntala Devi on screen is full of life, math and laughter, Sanya Malhotra as Anupama Banerjee, her daughter, leaves us keep wondering about how the life of a kid with informal education due to prodigy parent turns out a roller coaster ride of choices and these two casts in the movie seem very well-weighed and created on screen. 

Being woman is not only about having a family, doing house-hold chores and raising kids, but also a balance that is hard to strike with what a woman wants in her life. Each movie is an experience and this one is not the one to be missed!
Four Stars for sure!

Saturday, May 2, 2020

Thappad: A Review ⭐⭐⭐1/2

PC: https://www.imdb.com/title/tt10964430/

Thappad- Hindi movie looks like it could run in theatres farther, if lockdown wasn't imposed. It is a kind of movie where I cannot say that it is an amazing movie, but if one is looking for a movie that can leave an impact, this is a must watch. 

Story line: Tapsi Pannu in lead role, taking on her husband for a slap.

Seems a bleak one liner, isn't it? What do you think is the line of limit for a relationship? When do you know that a relationship has totally worn-out? When the word 'relationship' itself is so relative to how much two people are bonded to each other, how do you decide when it could end? 

They say bond breaks without a snapping sound. This movie is a reflection of how differently each of us with a variety of perceptions see a cross-over in a relationship. What may seem ok to one, may seem a blunder to the other. Relationship lies in relying on the delicate balance that keeps both personalities in the bond involved, yet feeling respectful of themselves.

As the movie progresses, it has tried to portray us how first-time slapping one's own wife is pursued as an okay act by many relatives. 

To a girl who has left everything that she ever loved, and who has accepted a new way of life by reconsidering and compromising so many of her priorities after marriage, it becomes a matter of reconciliation, with whatever she perceives as her line of limit. 

The takeaway for viewer here is a retrospection of the past events in their life with their loved ones, for sure. But it is an eye-opener to not get entangled in any relationship so much that we lose our identity in it. Any individual has their priorities in life before getting married, and each one of us slowly realise that we have changed so much in life after our marriage, with umpteen adjustments that gradually eat up our likes, we must just make sure that we do not let the parasitic adjustments eat up our Lives!!!

Psst! you can watch it on Amazon now.

Sunday, March 29, 2020

ಪುಸ್ತಕ ವಿಚಾರ- ಅಂಚು: ಎಸ್ ಎಲ್ ಭೈರಪ್ಪ

ಜೀವನದ ಮೇಲಿನ ಆಸ್ಥೆ-ಸಾವಿನ ಬಗೆಗಿನ ಆಕರ್ಷಣೆಯ ಅಂಚಿನಲ್ಲಿ ನಡೆಯುತ್ತ, ಇತ್ತ ಮುಗಿಸದೆ, ಅತ್ತಲೂ ನಿಲ್ಲದೆ ಹೆಣಗುವ, ಕಥಾವಸ್ತು - ಅಂಚು. ಇದರ ಕಥಾ ಹಂದರವನ್ನು ಮೊದಲು ತಿಳಿಸಿದರೆ, ಮುಂದೆ ಹೇಳುವ ಅಂಶಗಳಿಗೆ ಅದೇ ಬೆನ್ನೆಲುಬಾಗುತ್ತದೆಂದೆನಿಸುತ್ತದೆ. 

ಡಾಕ್ಟರ್ ಅಮೃತಾ ಪಿ.ಎಚ್.ಡಿ ಪದವೀಧರೆ, ಉಪನ್ಯಾಸಕಿ. ತಂದೆ - ತಾಯಿ ಇಲ್ಲದ ಈಕೆ ತನ್ನ ಆಸ್ತಿವಿಚಾರದಲ್ಲಿ ಸ್ವಂತ ಚಿಕ್ಕಮ್ಮನಿಂದಲೇ ಚಿಕ್ಕಂದಿನಿಂದಲೂ ನಯವಂಚನೆಗೊಳಗಾಗಿ, ಆಕೆಯ ತಮ್ಮನನ್ನೇ ಮದುವೆಯಾಗಿ, ತಾನು ಮೋಸಕ್ಕೊಳಗಾದದ್ದು ಬೋಧೆಯಾದಾಗಿಂದ ಗಂಡನಿಂದ ದೂರವಿರುವ ಎರಡು ಮಕ್ಕಳ ತಾಯಿ. ಆಗಾಗ ತನ್ನ ಅಸ್ತಿತ್ವದ ಬಗ್ಗೆ ಕಾಡುವ ಶೂನ್ಯಭಾವ ಸದಾ ಆಕೆಯನ್ನು ಸಾವಿನೆಡೆಗೆ ಆಕರ್ಷಿಸುತ್ತಿರುತ್ತದೆ. ಈ ಮಧ್ಯೆ ಸೋಮಶೇಖರನೆಂಬ ಆರ್ಕಿಟೆಕ್ಟ್ ನೊಂದಿಗಿನ ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿಯಾಗಿ ಬಲಿತು ಗೋಜಲಾಗುವ ಕಥೆ. 

ಪುಸ್ತಕದ ಹಲವಾರು ಭಾಗಗಳಲ್ಲಿ ಕಥೆಯೇ ಮಾಸುವಷ್ಟು ಸಂಭಾಷಣೆ- ತಗಾದೆ- ಭಾವನೆಗಳ ವಿಸ್ತಾರ ಇರುವುದರಿಂದ ಒಡನೆಯೇ ಈ ಕಥೆಯ ವಿಸ್ತಾರ ಅರಿವಾಗುವುದು ಸುಲಭಸಾಧ್ಯವಲ್ಲ. ಈ ಕಾರಣಕ್ಕಾಗಿಯೇ ಎಸ್ ಎಲ್ ಭೈರಪ್ಪನವರ ಇತರೆ ಹಲವು ಕಾದಂಬರಿಗಳನ್ನೋದಿದವರೂ ಅಂಚುವನ್ನು ತಡವಾಗಿ ಓದಿರುತ್ತಾರೆ - ಅಥವಾ ಮಧ್ಯದಲ್ಲೇ ನಿಲ್ಲಿಸಿರಲಿಕ್ಕೂ ಸಾಕು; ನನ್ನ ಹಾಗೆ. 

ಏಳು ವರ್ಷಗಳ ಹಿಂದೆ ಓದಲು ತಂದಿಟ್ಟುಕೊಂಡೂ, ಓದದೇ ಅರ್ಧದಲ್ಲೇ ಕೈಬಿಟ್ಟಿದ್ದ ಪುಸ್ತಕ - ಎಸ್ ಎಲ್ ಭೈರಪ್ಪನವರ "ಅಂಚು". ಸಂಕಲ್ಪವಿದ್ದರೂ ಸಂಕಲ್ಪವನ್ನು ಹಸಿರಾಗಿಟ್ಟು ಪುಸ್ತಕದ ಉದ್ದಗಲವನ್ನೂ ಓದುವ, ಓದಿದ್ದನ್ನು ವಿಶ್ಲೇಷಿಸಿ ಅರಗಿಸಿಕೊಳ್ಳುವ ಭಾವ ಬಹುಶಃ ಬಲಿತಿರದ ದಿನಗಳವು. ಬಸುರಿನಲ್ಲಿ ಹಿಡಿದ ಈ ಪುಸ್ತಕದ ಅಭಿವ್ಯಕ್ತಿಯ ಧ್ವನಿ, ಸನ್ನಿವೇಶಗಳ ಪೋಣಿಸುವಿಕೆ ನನ್ನ ತಾಯ್ತನದ ಹೊಸ್ತಿಲಿನ ದಿನಗಳಲ್ಲಿ ಅತಿ ಭಾವುಕತೆಯನ್ನು ತಂದು ಪಾತ್ರಗಳ ನೋವಿನೊಡನೆ  ಸಮೀಕರಿಸಿಕೊಳ್ಳುವ ಮನಸ್ಥಿತಿಯೊಡೆದು ಪಕ್ಕಕ್ಕಿಟ್ಟಿದ್ದೆ; ದೂರವಿಟ್ಟು ಮರೆತಿದ್ದೆ. ವರ್ಷಗಳ ನಂತರ, ಇದೇ ಲೇಖಕರ "ಯಾನ" ಸಂವಾದವನ್ನು ಶತಾವಧಾನಿ ಗಣೇಶರು ನಡೆಸಿಕೊಡುವಾಗ ಪ್ರಶ್ನೋತ್ತರ ಸಮಯದಲ್ಲಿ ಶ್ರೋತೃಗಳೊಬ್ಬರು "ಅಂಚು"ವಿನಲ್ಲಿ ನಾಯಕಿ ಆತ್ಮಹತ್ಯೆಯ ಪ್ರಯತ್ನವನ್ನು ಇಡೀ ಪುಸ್ತಕದಲ್ಲಿ ಇಪ್ಪತ್ತೊಂದೋ ಇಪ್ಪತ್ಮೂರೋ ಸಲ ಮಾಡಿಕೊಳ್ಳುತ್ತಾಳೆ ಅನ್ನುವ ಅಂಶ ಚರ್ಚೆಗೆ ಬಂದಾಗ ಗಣೇಶರು ಹೇಳಿದ್ದ ಉತ್ತರದ ಭಾಗವೊಂದು ನಿಜಕ್ಕೂ ಚಕಿತಗೊಳಿಸಿತ್ತು - ಅಂಚು ಕಾದಂಬರಿ ಮದುವೆಯನ್ನೊಳಗೊಂಡ ನಂಬಿಕೆಯನ್ನು ಕಳೆಯುವಂಥದಲ್ಲ, ಮದುವೆಯಾಗಲು ಪ್ರೇರೇಪಿಸುವಂಥದ್ದು, ಮದುವೆಯ ತಳಹದಿಯಲ್ಲಿ ನಂಬಿಕೆಯನ್ನು ಗಟ್ಟಿಮಾಡುವಂಥದ್ದು ಅಂದದ್ದು ಮನಸ್ಸಿನಲ್ಲಿ ಉಳಿದಿತ್ತು. 

ಕೊರೋನಾ ಮಹಾಮಾರಿಯ ದೆಸೆಯಿಂದ ದೇಶಕ್ಕೆಲ್ಲಾ lockdown ಸೂಚನೆ ಹೊರಟ ನಂತರ ಬಿಡುವಿನ ಸಮಯದಲ್ಲಿ ಓದಲು ಆರಿಸಿಕೊಂಡದ್ದು - "ಅಂಚು" ಕಾದಂಬರಿಯನ್ನು. 

ಅಂಚುವಿನ ಅಮೃತಾ ಉತ್ತಮ ಅಧ್ಯಾಪಕಿ- ಅಪನಂಬಿಕೆಯ ನಂಜುಂಡರೂ ಆಕೆಯ ಚಿಕ್ಕಮ್ಮ ಮತ್ತು ಮನೆಯವರಿಗೆ ಮನದೆಲೆಲ್ಲೋ ಕಿತ್ತೊಗೆಯಲಾಗದ ಅಸಹಾಯಕ ಆರ್ದ್ರತೆ. ಇನ್ನು ತನ್ನೆರಡು ಮಕ್ಕಳಿಗೆ ಒಳ್ಳೆಯ ತಾಯಿಯಾದರೂ, ತಾನು ಸೆಳೆಯಲ್ಪಟ್ಟಿರುವ ಸೋಮಶೇಖರನೊಂದಿಗೆ ಮಾತ್ರ ಅದ್ವಿತೀಯ ಲಹರಿಯವಳು. ಒಮ್ಮೊಮ್ಮೆ ನಿರಾತಂಕ ಪ್ರೀತಿ, ಹಿಂದೇ ಸುತ್ತಿ ಕವುಚಿಬರುವ ಮೌನ- ಶೂನ್ಯತೆ! ಶೂನ್ಯತೆಯ ಪರಮಾವಧಿ ಅಕಾರಣ ಸಿಟ್ಟಿನತ್ತ ಹಲವೊಮ್ಮೆ ಎಳೆದೊಯ್ದರೆ, ಕೆಲವೊಮ್ಮೆ ಮುಗಿಸಿಕೊಂಡುಬಿಡಬೇಕೆನ್ನುವ ಆತ್ಮಹತ್ಯಾ ತುಡಿತ, ಇನ್ನು ಕೆಲವೊಮ್ಮೆ ಪ್ರೀತಿಸಿದವನ ಮೇಲೆ ಕ್ರೌರ್ಯಕ್ಕೂ ತಿರುಗುವ ಮೌಢ್ಯ! ಈ ಭಾವನೆಗಳ ಅಲಗು ಮೊನೆಗಳ ಮೇಲಿನ ಹೊಯ್ದಾಟದಲ್ಲೇ ಕಥೆ ಸಾಗುತ್ತದೆ.  

ಕಥಾನಾಯಕಿ ಅಮೃತಾಳಂತಹಾ ಪಾತ್ರವನ್ನು ನಾವು ನಿಜಜೀವನದಲ್ಲೂ ನೋಡಿರಬಹುದು; ಕೆಲವರು ಇಡೀ ಜಗತ್ತಿಗಿದ್ದಷ್ಟು ಉದಾರವಾಗಿ, ತಮ್ಮವರೊಡನೆ, ತಮಗೆ ಕಷ್ಟ-ಸುಖಗಳಲ್ಲಿ ಸಮಪಾಲು ಇರುವವರೊಡನೆ ಭಾವ ಕಳೆದವರಂತಿರುತ್ತಾರೆ. ಹೊರಗಿನವರೆನಿಸಿಕೊಂಡ ಬೇರೆಲ್ಲರೊಂದಿಗೂ ನಗುನಗುತ್ತ ಬೆರೆತಂತಿದ್ದು ತಮ್ಮ ಮೇಲೆ ಭಾವುಕವಾಗಿ ಅವಲಂಬಿತರಾದವರ ಮೇಲೆ ಕೊಂಕುಗೆದರಿಸುತ್ತ ತಪ್ಪಿತಸ್ಥ ಭಾವ ಮೂಡಿಸುತ್ತಲೋ, ಆಪಾದನೆ ಹೊರಿಸುತ್ತಲೋ ಇದ್ದುಬಿಡುತ್ತಾರೆ. ಅವರ ಅಭಿವ್ಯಕ್ತಿ ತಮ್ಮವರೆನಿಸಿಕೊಂಡವರ ಮೇಲಾಗಲಿ, ಕಾರಣ ಏನೇ ಇರಲಿ, ಕ್ರೌರ್ಯ, ಆತ್ಮಾವಹೇಳನ, ಕೊಂಕಿನ ಮೂಲ- ಇವೆಲ್ಲ ನಿಲುಕಿಗೂ ಸಿಕ್ಕದ ಅಂತರದಲ್ಲೆಲ್ಲೋ ಹೂತುಹೋಗಿರುತ್ತದೆ. ಆಳದಲ್ಲೆಲ್ಲೋ ಆದ ವ್ರಣ ಮೇಲುಮೇಲಿನ ಸಿಡುಕು - ದ್ವಂಧ್ವಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. 

ತೀವ್ರ ಭಾವಸ್ಪಂದನ, ಅದರಿಂದುಂಟಾಗುವ ದಣಿವು - ಸೋಮಶೇಖರನಿಗೆ ಹಿಂಸೆಯೆನಿಸಿದಷ್ಟೂ, ಬಿಡಿಸಿಕೊಳ್ಳಬೇಕೆನಿಸಿದಷ್ಟೂ ತೊರೆಯಲಾರದ ಅಂಟಾಗಿ, ಬಂಧವಾಗಿ, ಆಕರ್ಷಣೆಯಾಗಿ, ಕಡೆಗೆ ವೃತ್ತಿಗಿಂತಲೂ ಮುಖ್ಯವಾಗಿ ವೃತ್ತಿಯಲ್ಲಿ ಸೋಲುತ್ತ ಬಂದು, ಅಮೃತಾಳನ್ನು ಕಳೆದುಕೊಳ್ಳುವ ಸಂಕಲ್ಪವೇ ಭಯತರಿಸಿ, ಈ ಬಂಧವನ್ನು ನಿಭಾಯಿಸಿಯೇ ತೀರುವೆನೆಂಬ ಸ್ಪೂರ್ತಿಯಾಗಿ ಮಜಲು ಮಜಲಾಗಿ ಬಿಡಿಸಿಕೊಳ್ಳುವುದು ಕಾಣುತ್ತದೆ.

ಇಲ್ಲಿ ಸೋಮಶೇಖರನಂಥಾ ತಾಳ್ಮೆಯುಳ್ಳವರ ಪ್ರೀತಿ-ಕಾಳಜಿಯ ಇಂಧನ ಯಾವುದು? ಪ್ರೀತಿಸಿದವರನ್ನು ಪಡೆದೇ ತೀರಬೇಕೆಂಬ ಹಂಬಲವೋ, ಪ್ರೀತಿಸಿದವರು ಸಂತೋಷವಾಗಿಯೇ ಬದುಕಬೇಕೆಂಬ ಛಲವೋ? ಕೋಮಲ ಹೃದಯಿಯಾದ ಅಮೃತಾಳ ನಾಡಿಹಿಡಿಯಲಾರದ, ಭಾರ ಬಲಿಯದೆಯೂ ಇಕ್ಕೆಲಗಳಿಗೆ ಯಾವ ಮುನ್ಸೂಚನೆಯೂ ಇಲ್ಲದೆ ತೂಗಾಡುವ ತಕ್ಕಡಿಯಂಥಾ ಸ್ವಭಾವಕ್ಕಿರುವ ತಲ್ಲಣದಲ್ಲಿ- ಪ್ರಸ್ತುತದ ಕ್ಷುಲ್ಲಕ ಕಾರಣಗಳು ಸತ್ಯವೋ, ಅಥವಾ ಜೀವನದಲ್ಲಿ ಹಿಂದೆಲ್ಲೋ ಮನಸ್ಸಿಗೆ ಬಿದ್ದ ಪೆಟ್ಟು ತಾಳಲಾರದ ಏಟುಗಳೋ? ಇವೆಲ್ಲ ಪದರಗಳೊಳಗೂ ಜೀಕುತ್ತ ಸಾಗುವುದು - "ಅಂಚು". 

ಶತಾವಧಾನಿ ಗಣೇಶರು ಹೇಳಿದಂತೆ, ವಿವರಣೆಗಳಿಗೆ ಮಾತ್ರ ಪಕ್ಕಾಗದೆ ಪ್ರೀತಿ, ಸಂಬಂಧ, ವಿವಾಹದ ಮೂಲಧನಕ್ಕೊಂದು ಧಾತು - "ಅಂಚು". 

Friday, February 7, 2020

ಅವಸಾನ: ಸಹನಾ ವಿಜಯಕುಮಾರ್

ಸಹನಾ ವಿಜಯಕುಮಾರ್ ರವರ "ಕಶೀರ" ಪುಸ್ತಕವನ್ನು ಬಹು ತಡವಾಗಿ ಓದಿದ್ದ ನಾನು, ಕಾಶ್ಮೀರದಂಥಾ ಬೃಹತ್ ವಿಷಯದ ಬಗ್ಗೆ ಮೊದಲ ಬಾರಿ ಓದಿದ್ದರಿಂದ ವಿಮರ್ಶೆಯೇನನ್ನೂ ಬರೆಯಲಾಗಲಿಲ್ಲ. ಆಗಿನಿಂದ ಕಾಡಿದ್ದು, ಅವರ ಮುಂದಿನ ಪುಸ್ತಕವನ್ನು ಬಿಡದೇ, ಬಿಡುಗಡೆಯಾದ ಕೂಡಲೇ ಅವರ ಮೊದಲ ಕಾದಂಬರಿ - "ಕ್ಷಮೆ" ಯನ್ನೋದಿದ ಹಾಗೆ ಓದಿಬಿಡಬೇಕು ಅಂತ. ಕಾದಂಬರಿಯೊಂದು ಮಹತ್ತರವಾದುದಾಗಬೇಕೆಂದರೆ ವಿಷಯ ವಸ್ತು ಎಷ್ಟು ಮುಖ್ಯವೋ, ಸುಲಭಗ್ರಾಹ್ಯವಾಗಿ ಅದನ್ನು ಓದುಗರ ಮುಂದಿಡುವುದೂ ಅಷ್ಟೇ ಪ್ರಮುಖವಾಗುತ್ತದೆ. ಮಹತ್ತರವಾದ ವಸ್ತು ವಿಷಯವು ಕಶೀರದಲ್ಲಿದ್ದರೆ, ಹದವಾಗಿ ಹರವಿದ ವಿಚಾರಗಳನ್ನು ಮಂಡಿಸಿರುವ ರೀತಿ "ಅವಸಾನ" ದಲ್ಲಿ ಬಹು ಆಪ್ತವಾಗುತ್ತದೆ.

ತಂದೆಯೊಬ್ಬನ ಅವಸಾನದ ದಿನಗಳಲ್ಲಿನ ಕಥನ - ಅವಸಾನ. 
ಕಥೆಯ ಎಳೆ ಇಷ್ಟು- ಅಸ್ಪಷ್ಟ ಮಾತೊಂದನ್ನು ಬಿಟ್ಟು ಬೇರೊಂದು ಮಾಡಲಾಗದ ಪಾರ್ಶ್ವವಾಯು ಪೀಡಿತ ಬಾಬುರಾಯರು. ಆರು ವರ್ಷಗಳಿಂದ ಅಹೋರಾತ್ರಿ ಮಗುವಿನಹಾಗೆ ಗಂಡನನ್ನು ಲಾಲಿಸುತ್ತಿರುವ ಗಂಗಾಬಾಯಿ. ತಮ್ಮದೇ ಕಂಪನಿಯಲ್ಲಿ ಗಂಡನ ಸಮಕ್ಕೂ ದುಡಿಯುತ್ತಿರುವ, ಮದುವೆಯಾದ ಏಳುವರ್ಷಗಳ ಮೇಲೆ ಗರ್ಭಿಣಿಯಾಗಿರುವ ಸೊಸೆ ಸುಲಭಾ. ಯಶಸ್ಸಿನ ಹಿಂದೆ ಹಠ-ಛಲಗಳ ಬೆನ್ನೇರಿ ಹೊರಟಿರುವ ಮಗ ವಿನೋದ್. 
ಇವರೆಲ್ಲರೊಡನೆ ಮನೆಗಂಟಿಕೊಂಡಿರುವ ಕಚೇರಿಯ ಕೆಲಸದ ಸಂದರ್ಶನಕ್ಕೆಂದು ಬಂದು ಮನೆಮಗನಿಗಿಂತ ಹೆಚ್ಚಾಗುವ ಸತ್ಯ, ಹಾಗು ಬಾಬುರಾಯರನ್ನು ಕಕ್ಕುಲಾತಿಯಿಂದ ನೋಡಿಕೊಳ್ಳುವ ಆಳು ಮೋಟಾರಾಮ್ - ಇವರೆಲ್ಲರ ಸುತ್ತ...... ಇವರೆಲ್ಲರೊಳಗೆ ಘಟಿಸುವ ಕಥೆ - "ಅವಸಾನ". 

ಕಥೆಯು ಬರಿಯ ಕಥೆಯಾಗುಳಿಯದೆ, ಪ್ರತಿಯೊಂದು ಪಾತ್ರದ ಮನಮಂಥನವಾಗಿ ಹೊಮ್ಮುತ್ತದೆ. ಒಬ್ಬಬ್ಬರೂ ತಾವು ಬೆಳೆದ ಪರಿಸ್ಥಿತಿ, ಪರಿಸರಕ್ಕನುಗುಣವಾಗಿ ರೂಪಿಸಿಕೊಂಡ ಅಭಿಪ್ರಾಯ, ನಡವಳಿಕೆಗಳು- ಅವರವರ ಮಟ್ಟಿಗೆ ಸರಿಯೆಂದೇ ಕಾಣುತ್ತ ಹೋಗುತ್ತದೆ. ಪ್ರತಿಯೊಂದು ಪಾತ್ರವೂ ತನಗೆ ಬಾಲ್ಯದಿಂದ ಸಿಕ್ಕ ಸಂಸ್ಕಾರದಿಂದ ಹೇಗೆ ಮತ್ತು ಎಷ್ಟು ಪ್ರಭಾವಿತವಾಗುತ್ತದೆ? ಅನ್ನುವುದು ಪುಟಪುಟವೂ ಬಿಡಿಸಿಕೊಳ್ಳುತ್ತ ಹೋಗುತ್ತದೆ. ಪಾತ್ರಗಳೆಲ್ಲ ತಂತಮ್ಮ ಜಾಗೆಗಳಲ್ಲಿ ಸಶಕ್ತವಾಗಿರುವುದರಿಂದಲೇ ಪುಸ್ತಕಕ್ಕೆ ತೂಕ ಹೆಚ್ಚು.

ಇನ್ನು ಕಥೆಯೆಂಬ ಅರಿವೆಯ ಕೆಲ ಹೊಳಹುಗಳನ್ನು ಹರವಲು ಪ್ರಯತ್ನಿಸುತ್ತೇನೆ.

ಪೀಡಿತರೆಂಬ ರಿಯಾಯಿತಿ ಸದಾ ರೋಗಿಗಿದ್ದರೆ, ರೋಗಿಯನ್ನು ಸದಾ ನೋಡಿಕೊಳ್ಳುವ ಜೀವಕ್ಕಾಗಿ ಮರುಗುವವರು ಕಾಣಸಿಗುವುದೇ ಕಷ್ಟ. ತನ್ನಮ್ಮನ ನಿತ್ಯದ ಗೋಳನ್ನು ನೋಡಲಾಗದೆ ಮರುಗುವ ಮಗ ತನ್ನ ಪಾಲಿಗೆ, ತನ್ನ ಮನಃ ಸ್ಥಾನದಲ್ಲಿ, ತನ್ನ ಹೆಂಡತಿಯ ಪಾಲಿಗೂ ಕೊನೆಗೆ ಸರಿ; ಆದರೆ ತನ್ನ ತಾಯಿಗೆ, ಆತ ಹೃದಯಹೀನ. ಇಲ್ಲಿ ಮುಖ್ಯವಾಗುವುದು ಯಾವುದು? ಗಂಡನ ಕರುಣಾಜನಕ ಸ್ಥಿತಿಯೋ? ಕಳೆದ ಒಳ್ಳೆಯ ಕ್ಷಣಗಳ ನೆನಪೋ? ಅಥವಾ ಪತಿಗೆ ಹೀಗಾದ ನಂತರದಲ್ಲಿ ಇನ್ನಷ್ಟು ಬಿರುಸಾಗಿ ಕಾಣುತ್ತಿರುವ ಮಗನ ನಡವಳಿಕೆಯೋ?
ಮಗನ ಪಾಲಿಗೆ ಅವನ ತಾಯಿ ಬರಿಯ ನೊಂದ ಜೀವ; ಮುಂಚಿನಿಂದಲೂ, ಇಡಿಯ ಮನೆಯಲ್ಲವಳೊಬ್ಬಳು ಕೆಲಸದಾಳಿನಂತೆ ದುಡಿದು, ಸುಖವೆಂಬುದೇನನ್ನೂ ಕಾಣದೆ, ಕೊನೆಗೆ ತಾಯಿ-ಮಗುವೆಂಬ ಮಮತೆಯನ್ನೇ ಬದಿಗಿಟ್ಟು ಪತಿ ಮತ್ತು ಆತನ ವಿಸ್ತರಿತ ಕುಟುಂಬದ ಸಮಯಪಾಲಕಿ. ಇನ್ನು ತಂದೆ? ಮಗನ ಪಾಲಿಗೆ ಎಂದೆಂದಿಗೂ ಪ್ರೀತಿಯನ್ನೇ ತೋರದ, ತೋರಲಾರದೇ ಹೋಗಿ, ಕೊನೆಗೆ ಉಳಿದಿರುವ ಒಂದಿಷ್ಟು ಗೌರವವನ್ನೂ ತನ್ನ ವ್ಯವಹಾರ ವೈಫಲ್ಯದ ಜೊತೆ ಕಳೆದುಕೊಂಡ ಕೈಲಾಗದವ. ತನ್ನ ರೆಕ್ಕೆಗಳು ವಿಸ್ತರಿಸಿದಷ್ಟೂ, ಯಶಸ್ಸು ಗಳಿಸಿಕೊಂಡಷ್ಟೂ "ಮೊಂಡಾದರೂ ಏನೀಗ? ಸರಿಯಾದರಷ್ಟೇ ಸಮ" ಎಂದುಕೊಳ್ಳುವ ಮಗನ ದಾರ್ಷ್ಯ ಹೆಚ್ಚಾದಷ್ಟೂ, ಹೆತ್ತ ತಂದೆ-ತಾಯಿಗಳು ಅವಲೋಕನಕ್ಕೆ ಸಿಲುಕಿಬಿಡುತ್ತಾರೆ.

ಇನ್ನು ಸಂಸ್ಕಾರದ ಮಾತು. ಸಂಸ್ಕಾರ ಹುಟ್ಟಿನಿಂದ ಬರಬೇಕಾದದ್ದೋ? ಅದರಲ್ಲಿ ವಾತಾವರಣದ ಪಾಲೆಷ್ಟು? ಮುಂಬೈನ ಕಾಮಾಠಿಗರ ಕಾಮಾಠಿಪುರದ ಗಲ್ಲಿಯಿಂದ ಬಂದ ಮುನ್ನಾ "ಸತ್ಯ"ನಾಗುವ ಕಥೆಯಲ್ಲಿನ ಹಿನ್ನೆಲೆ ಸ್ವಾರಸ್ಯಕರ. ಲೈಂಗಿಕ ಕಾರ್ಯಕರ್ತೆಯಾದ ತಾಯಿ ಆತನನ್ನು ಕೆಸರೊಳಗಿನ ಕಮಲದಂತೆ ಬೆಳೆಸುವಾಗ ಇದ್ದಕ್ಕಿದ್ದಂತೆ ಮುನ್ನಾನನ್ನು ಕಾಡುವ ಕುಟುಂಬವೆಂದರೇನು? ಎಂಬ ಜಿಜ್ಞಾಸೆ - ಕುಟುಂಬದಲ್ಲಿ ತಂದೆಯೊಬ್ಬನಿರಬೇಕಲ್ಲವೇ? ಅವನೆಲ್ಲಿ? ನನ್ನ ಕುಟುಂಬದ ಚಿತ್ರ ಸಂಪೂರ್ಣವಾಗುವುದು ಯಾವಾಗ ಅನ್ನುವ ಪ್ರಶ್ನೆ ವಯಸ್ಸಾದವರ ಸೇವೆಯಲ್ಲಿ ತನ್ನ ತಂದೆತಾಯಿಯ ರೂಪ ಕಾಣುವಲ್ಲಿ ಸಮಾಧಾನಿಸಿಕೊಳ್ಳುವ ಸತ್ಯ.

ಇನ್ನೊಂದು ಎಳೆ ಮೋಟಾರಾಮನದ್ದು. ಆತ ಕೆಲವು ಕಡೆ ಅಸಹಾಯಕರ ಸಹಾಯಕನಾಗಿ ಕೆಲಸ ಮಾಡುತ್ತಿರುತ್ತಾನೆ. ವೈಯುಕ್ತಿಕ ವಿಚಾರಗಳಿಂದ ದೂರವುಳಿಯುವ ಪ್ರಯತ್ನದಲ್ಲೇ ಈ ಎಲ್ಲ ಎಳೆಗಳಲ್ಲೂ ಸಿಲುಕಿಕೊಳ್ಳುತ್ತ ಹೋಗುತ್ತಾನೆ. ತನಗನಿಸಿದ್ದನ್ನು ತನ್ನ ಬುದ್ಧಿ-ತರ್ಕಕ್ಕೆ ನಿಲುಕುವ ಮಟ್ಟಿಗೆ ಯೋಚಿಸುತ್ತ ,ಕೈಲಾದ ಮಟ್ಟಿಗೆ ಸಹಾಯ ಮಾಡುತ್ತ ಉಳಿಯುತ್ತಾನೆ.

ಕುಟುಂಬಕ್ಕಾಗಿ ಹಂಬಲಿಸುವ ಮುನ್ನಾ, ಕಾಮಾಠಿಪುರದ ಗಲ್ಲಿಯಲ್ಲಿನ ಮುನ್ನಾನನ್ನು ಆಶ್ರಮವೊಂದು "ಸತ್ಯ" ನನ್ನಾಗಿಸುವ ಬಗೆ, ಆತನ ಫಂಡರಾಪುರದ ಯಾತ್ರೆಯ ಸಂದರ್ಭ, ಆತನೊಳಗೆ ತಾನು ಏಳಿಗೆ ಕಾಣಬೇಕೆಂಬ ಶ್ರದ್ಧೆ, ನಿಜವನ್ನೇ ಹೇಳಬೇಕೆಂಬ ನಂಬುಗೆ, ಅದಕ್ಕಾಗಿ ಏನನ್ನಾದರೂ ಪಣವಾಗಿಡುವ ಸತ್ಯನ ಬದ್ಧತೆ ಆತನ ಪಾತ್ರವನ್ನು ಆಪ್ತವಾಗಿಸುತ್ತದೆ.

ಮೂಲ ಪ್ರಶ್ನೆ ಉದ್ಭವವಾಗುವುದು, ಯಾರೇ ಆಗಲೀ, ಯಾಕೆ ತಮಗನಿಸಿದ್ದನ್ನು ಸಮರ್ಥಿಸಿಕೊಳ್ಳುತ್ತಾರೆ? ತಂತಮ್ಮ ಮನಸ್ಥಿತಿಗಳಿಗೆ ಸ್ಪಂದಿಸುತ್ತ ಸ್ಪಂದನೆಯು ವ್ಯಕ್ತಿತ್ವದೊಡನೆ ಮಿಳಿತವಾಗುವ ಗೆರೆ ಎಷ್ಟು ಅಸ್ಪಷ್ಟ? ಈ ಆಯಾಮದಲ್ಲಿ ಕಥೆ ಸಾಗುತ್ತ ಪೂರಕ ಸಂದರ್ಭಗಳಿಗೆ ಪುಷ್ಟಿಕೊಡುತ್ತ, ಓದುಗರನ್ನು ಆಲೋಚನೆಗೆ ದೂಡುತ್ತಾ ಸಾಗುತ್ತದೆ.

ಒಮ್ಮೆ ಓದಲು ಶುರುವಿಟ್ಟು ಸೆಳೆವಿನಲ್ಲಿ ಸಿಕ್ಕಿಹೋದರೆ ಪುಸ್ತಕ ಮುಗಿಯುವವರೆಗೆ ಬಿಡದ ಸೆಳೆತ - "ಅವಸಾನ". ನನ್ನ ಪತಿ ಮಧ್ಯರಾತ್ರಿ ೩ ಗಂಟೆಯವರೆಗೂ ಪುಸ್ತಕ ಕೆಳಗಿಡದೆ ಓದುತ್ತಿದ್ದು, ಕಾಮಾಠಿಪುರದ ಮಗುವಿನ ಬವಣೆಗಳಿಗೆ ನಾನು ದುಃಖಿಸಿಕೊಂಡು ಅಳುತ್ತಿರುವುದು ಗಮನಿಸಿ, - "ಟ್ವೀಟ್ ಮಾಡ್ತೀನಿ @sahanavijayakumar, you have messed with my wife's brain" ಎನ್ನುವಾಗ ನನ್ನ ಮುಖದಲ್ಲಿ ಮಂದಹಾಸ  😍 😁

ತುಂಬಾ ದಿನಗಳ ನಂತರ ಹಿಡಿದೊಂದು ಪುಸ್ತಕದ ಕಥೆಯಲ್ಲಿ ಮನುಷ್ಯ ಸ್ವಭಾವಗಳಿಗೆ ಇಷ್ಟೊಂದು ಒಳನೋಟ ಸಿಕ್ಕ ಸಂತೋಷ.