Wednesday, July 30, 2014

ಮೊಬೈಲ್ ಪುರಾಣ!

ಬಂದು ಬಿಟ್ಟೆ ಮೊಬೈಲ್ ಬಿಟ್ಟೆ
ಮನೆಯಲದಾವ ಸಂದಿಯಲಿದೆಯೋ
ಮರೆತಳು ಅಂತ ಅಳುತ್ತಲಿದೆಯೋ

ಛೆ ಛೆ ಎಂಥ ಮರೆವೆಯದು
ಮಾತಾಡಲಾಗದು ಮೆಸೇಜ್ ಕುಟ್ಟಲಾಗದು
ಕೈಲದು ಕಾಣದೆ ಬೇಸರವಿಹುದು

ಯಾರ ಗೋಡೆಗೆ ಯಾರು ಗೀಚಿದರೋ
ಯಾರೆಷ್ಟೆಷ್ಟು ಲೈಕು ಕುಟ್ಟಿದರೋ
ಯಾವೆಲ್ಲ ಕಥೆ-ಕವನ ಮಿಸ್ಸಾಗಿ ಬಿಟ್ಟವೋ

ಎಷ್ಟು ಸ್ನೇಹಿತರು ಮೆಸ್ಸೇಜು ಅಟ್ಟಿದರೋ
ಎಷ್ಟು ಕ್ಯಾಂಡಿ ರಿಕ್ವೆಸ್ಟ್ ಉಳಿದವೊ
ಒಂದೆ ದಿನಕೇಕಿಷ್ಟು ಬೇಸರ
ಕೇಳಿಕೊಂಡರೆನಗೆ ಸಿಗದಲ್ಲ ಉತ್ತರ !!!