ಸಾವು;
ಇದು ಏನೇನೂ ಅಲ್ಲ;
ಬರಿಯ ಭ್ರಮೆಯಷ್ಟೇ
ಬೆಳ್ಳಿ ಬೆಳಕು ಸರಿದು ಬಂದು ನಿಂತಾಗ
ಚೆಲ್ಲುವಳು ನಿಸರ್ಗದಬ್ಬೆಯು
ದೂರದಾ ಬೆಳ್ಳಿ ಬೆಟ್ಟದಾ ಮಾಯೆಯ ನಮ್ಮಡಿಗಡಿಗೆ;
ತಾವರೆಯಾ ಎಸಲಿನಂಥಾ ಕಷ್ಟವನ್ನು.
ತುಂಬುಗಂಣ್ಗಳಿಂದ ಬೀಳ್ಕೊಡಿಸುವಳು
ಹೋದವರನೆಂದಾದರೂ ನೆನೆಯುವಂತೆ ಮಾಡುವಳು
ಮನದ ತಿಳಿಗೊಳ ಕದಡಿಸುವಳು
ನೆನಪುಗಳ ಮರುಕಳಿಸುವಳು
ಬಾಳಿನಾ ತುದಿಯ ದಾಟಿ ನಡೆದವರ
ಗುರುತನಾದರೂ ಕೊಂಚ ಬಿಟ್ಟುಬಿಡುವಳು.
No comments:
Post a Comment