Thursday, September 29, 2016

Pink:Movie Review

It takes a nerve to make a movie which exactly represents the life of this generation. Major cities have been income magnets to attract a majority of learned women into them. Either due to lack of opportunity or due to lucrative income and scope of work, educated women land up in larger cities. And they mingle with everyone with an open mind and adjust to new lives with new compromises, and new routines, scaling their necessities up and down.
This movie is an eye-opener for people with prejudices for women. Also a representative of how uncalculated risks can go sore. Knowingly or unknowingly, many of us in Indian society very soon brand women by their social appearance and behaviour. We hold up so-called "Values" and brandish the rules against women quickly to demean them and to make conclusive opinions about them.
The ladies in this movie get caught in an assault case. Pink is more about how they tackle the situation, more than how they tackle the case. While we all expect the final verdict to be made, the way in which Amitabh Bachchan handles the case and argues is a worth watch. And of course, you will get to know that self-defense is a valid and a must to do when in distress.
The narrative is captivating and the screenplay. Kudos to Aniruddha Roy Chowdhury, writer Ritesh Shah and the team to have made a movie which is a must watch by not just pinks, but also mustached blues. Bottomline is, "It's a no when a girl tells a no. Try to persuade, and you rot beneath your own soul; be it anyone. A stranger, a friend, girlfriend or be it your own wife".

Thursday, September 8, 2016

ಕಾವೇರಿ ನೀರು ಸಮರ!

ಮಹದಾಯಿ ಹೋರಾಟವಿನ್ನೂ ಹಸಿಯಾಗಿರುವಾಗಲೇ ಕಾವೇರಿ ನೀರಿಗಾಗಿ ಮತ್ತೊಮ್ಮೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಮರ ಶುರುವಾಗಿದೆ. ನೆನ್ನೆಯಿಂದ whatsapp ನಲ್ಲಿ ಮತ್ತೆ ಕುಹಕಗಳು, ರಾಜಕಾರಣಿಗಳ ಕುರಿತ ವಕ್ರೋಕ್ತಿಗಳು ಹರಿದಾಡುತ್ತಿವೆ. ನಮ್ಮ ಮನೆಯ ಮಕ್ಕಳು ಹಸಿದಿರುವಾಗ ಪಕ್ಕದ ಮನೆಯವರಿಗೆ ಉಣಿಸಲು ಬಡಿದಾಡಬೇಕಾಗಿರುವ ಹೀನತನ ನೋಡಿ ರೈತರಿಗೆಲ್ಲ ಕಣ್ಣೀರಿನ ಬದಲು ಸರ್ಕಾರ, ಆಡಳಿತ, ನ್ಯಾಯಾಲಯದೆಡೆಗಿನ ತಿರಸ್ಕಾರವೇ ಹೆಚ್ಚಾಗಿ ಬಂಡಾಯವೇಳುವಂತೆ ಮಾಡಿದೆ.

ಪೂರ್ಣಚಂದ್ರ ತೇಜಸ್ವಿಯವರು ಎಂದೋ ಹೇಳಿದ "ಯಾವುದೇ ಭೂಭಾಗಕ್ಕೆ ಅದರದ್ದೇ ಆದ ಅನುಕೂಲ ಹಾಗು ಅನಾನುಕೂಲಗಳಿರುತ್ತವೆ. ಅಲ್ಲಿಯ ನೈಸರ್ಗಿಕ ಸಂಪತ್ತಿನ ಒಡೆತನ ಮತ್ತು ಅದರ ಮೊದಲ ಬಳಕೆಯ ಹಕ್ಕು ಆಯಾ ಪ್ರದೇಶದ ಜನ ಸಮುದಾಯದ್ದಾಗಿರುತ್ತದೆ. ಭೂಮಿಯೊಳಗಿನ ಖನಿಜ ಸಂಪತ್ತು, ಭೂಮಿಯ ಮೇಲಿನ ಅರಣ್ಯ ಉತ್ಪನ್ನಗಳು ಹೇಗೆ ಆಯಾ ಸರ್ಕಾರದ ಆಸ್ತಿಯೋ ಹಾಗೆಯೇ ಆಯಾ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ಹರಿಯುವ ನೀರಿಗೂ ಆ ಪ್ರದೇಶದ ಜೀವ ವೈವಿಧ್ಯವೇ ಪ್ರಥಮ ಹಕ್ಕುದಾರನಾಗಿರುತ್ತಾನೆ. ಹಾಗಾಗಿ ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ಮೇಲಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ" ಎಂಬ ಮಾತು ಸುಪ್ರೀಂ ಕೋರ್ಟ್ ಮನಗಾಣಲು ಇನ್ನೆಷ್ಟು ಕಾಲ ಬೇಕೋ ತಿಳಿಯೆವು.

ಏತನ್ಮಧ್ಯೆ ಏಳುವ ಪ್ರಶ್ನೆಯೆಂದರೆ- ಮೈಸೂರು, ಮಂಡ್ಯ, ಬೆಂಗಳೂರಿನವರೆಗಿನ ಜನರೆಲ್ಲಾ ತಮಗೆ ಉಪಯೋಗಿಸಿಕೊಳ್ಳಲು ದಕ್ಕುತ್ತಿರುವ ಕಾವೇರಿ ನೀರನ್ನು ಸಮರ್ಥವಾಗಿ ಪೋಲಾಗದಂತೆ ಬಳಸಿಕೊಳ್ಳುತ್ತಿದ್ದಾರೆಯೇ? ಅನ್ನುವುದು. ನದಿಯ ನೀರುಬಳಕೆ ಬಿಡಿ, ತಮಗೆ ಬೆಳೆ ಬೆಳೆಯಲು ನೀರು ಸಾಲುತ್ತಿಲ್ಲವೆನ್ನುತ್ತಿರುವ ಎಷ್ಟು ರೈತರು ತಂತಮ್ಮ ಹೋಬಳಿ, ತಾಲ್ಲೂಕುಗಳಲ್ಲಿ ನೆರೆಹೊರೆಯ ರೈತರನ್ನು ಒಗ್ಗೂಡಿಸಿಕೊಂಡು ನೀರು ಸಂಗ್ರಹಣಾ ಪ್ರದೇಶಗಳಲ್ಲಿ (catchment area)  ಮಳೆನೀರು ಹಾಗು ಪೋಲಾಗುವ ಕಾಲುವೆ ನೀರನ್ನು ಉಳಿಸಲು ಪುಟ್ಟ ಕೆರೆಗಳಂಥಾ ಪ್ರಯತ್ನ ಕೈಗೊಂಡಿದ್ದಾರೆ ಎನ್ನುವುದು. ಈ ಮಳೆ ಕುಯ್ಲು ರೈತರು ಹಾಗು ಸರ್ಕಾರ ಇಬ್ಬರೂ ಕೈಜೋಡಿಸಿ ಮಾಡಬೇಕಾಗಿರುವಂಥದ್ದು. ರೈತ ಸಮುದಾಯವೊಂದಕ್ಕೇ ಇದು ಅಸಾಧ್ಯ. ಎಲ್ಲೆಲ್ಲಿ ತಗ್ಗು ಪ್ರದೇಶಗಳಿವೆಯೋ ಅವನ್ನು ಗುರುತಿಸಿ ಅಲ್ಲೆಲ್ಲ ನೀರು ಸಂಗ್ರಹಣೆಗೆ ಕ್ರಮ ತೆಗೆದುಕೊಳ್ಳಬೇಕಾದದ್ದು ಅತ್ಯವಶ್ಯ.

ಇದರೊಡನೆ, ಕೃಷಿ ಅಧಿಕಾರಿಗಳಿಗೆ ರಸಗೊಬ್ಬರ, ರಾಸಾಯನಿಕಗಳನ್ನು ಇಂತಿಷ್ಟು ಮಾರಲೇ ಬೇಕೆಂಬ ಟಾರ್ಗೆಟ್ ಬದಿಗೊತ್ತಿಸಿ ನೀರು ಹಾಗು ಇತರೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಬೇಕಾದ್ದು ಅನಿವಾರ್ಯ;ಅವಶ್ಯ.

ನೀರು ಕಾಪಾಡಿಕೊಳ್ಳುವತ್ತ ನಮ್ಮ ಆಸ್ಥೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಆಸ್ಥೆ ಇರುವ ಸಂಪನ್ಮೂಲಗಳ ಬಳಕೆಗೆ ನೀಡಬೇಕಾಗಿದೆ. ಕಾವೇರಿ ಹೋರಾಟವನ್ನ ರಾಜಕೀಯಕ್ಕೆ ಮಾತ್ರ ಬಳಸಿಕೊಂಡು ಕಡೆಗೆ ರೈತ ಮತ್ತೆ ನಿರ್ಲಕ್ಷಿತನಾಗದೇ ಇರಲಿ. ಸುಪ್ರೀಂ ಕೋರ್ಟಿಗಲೆಯುವುದು ಮಾತ್ರ ವಕೀಲರ ಕೆಲಸವಾಗದೆ ಶೀಘ್ರ ತೀರ್ಪಾಗುವತ್ತ ಗಮನ ಕೊಟ್ಟರೆ ಒಳ್ಳೆಯದೇನೋ. ಎಲ್ಲರೂ ಬಂಗಾರಪ್ಪನವರನ್ನು ನೆನೆಸಿಕೊಂಡು ಆಗ ಸುಗ್ರೀವಾಜ್ಞೆ ಹೊರಡಿಸಿ ತಮಿಳು ನಾಡಿಗೆ ಸುಖಾಸುಮ್ಮನೆ KRS ಬತ್ತಿದ್ದರೂ ಮೆಟ್ಟೂರು ಜಲಾಶಯಕ್ಕೆ ನೀರು ಹರಿಸುವುದನ್ನು ಧಿಕ್ಕರಿಸಿದನ್ನು ಕೊಂಡಾಡುವಾಗ ಸರ್ಕಾರದ ಜವಾಬ್ದಾರಿ ಕಣ್ಣಿಗೆ ರಾಚುತ್ತಿದೆ. ಬಂದ್ ನಂತರ ಮುಂದಿನ ಪರಿಣಾಮ ಏನಾಗುತ್ತದೆ, ಕಾದು ನೋಡುವುದೊಂದೇ ಮಾರ್ಗ!