Friday, July 29, 2016

ಕ್ಷಮೆ: ಸಹನಾ ವಿಜಯಕುಮಾರ್

ಇಂಗಿತ, ಆಸ್ಥೆ-ಆಸೆಗಳನ್ನು, ಕೊನೆಗೆ ತನ್ನತನವನ್ನೂ ಜೀವನದ ಬಾಹ್ಯ ಗೆಲುವುಗಳ ವಾಂಛಲ್ಯಕ್ಕಾಗಿ ಬುದ್ಧಿಗೆ ನಿಲುಕದಂತೆ ಬೀಗ ಹಾಕಿ ಯಾಂತ್ರಿಕ ಬದುಕಿಗೆ ಹೊಂದಿಕೊಂಡುಬಿಟ್ಟಿರುವ ಕಥಾನಾಯಕಿ-ಪಲ್ಲವಿ. ಚಿಗುರಿನಲ್ಲೇ ಮಗನೊಂದಿಗೆ ಅಂತರವನ್ನು ಅಳಿಸಿಹಾಕಲು ಪ್ರಯತ್ನಿಸದೆ ಅಂತರ್ಮುಖಿಯಾಗಿ ತನ್ನೊಳಗೇ ಉಳಿದುಹೋದ ತಂದೆ. ಚಿಕ್ಕಂದಿನಲ್ಲೇ ದೂರವಾದ ತಾಯಿ. ತಾನಾಯಿತು-ತನ್ನ ಕೆಲಸವಾಯಿತೆಂದು ಕರ್ತವ್ಯದಾಚೆಗಿನ ಪ್ರೀತಿಯ, ಅನುಭೂತಿಯ, ಸ್ನೇಹದ, ಸಲುಗೆಯ ಆಕರ್ಷಣೆಯತ್ತ ತಾನಾಗಿ ಹಾತೊರೆಯದ ಗಂಡ-ರಘು. ತಂದೆಯನ್ನು ಅವರ ತಪ್ಪಿನಿಂದಾಚೆಗೆ ಎಳ್ಳುಮಾತ್ರವೂ ನೋಡದೇ ಹಳಿಯುವ ಅಣ್ಣ.


ಪಲ್ಲವಿಗೆ ಆರಂಕಿ ಸಂಬಳದ ಬಹುರಾಷ್ಟ್ರೀಯ ಕಂಪನಿಯ ಜವಾಬ್ದಾರಿಯುತ ಸಾಫ್ಟ್ ವೇರ್ ಕೆಲಸ. ತನ್ನ ಕಡೆ ಯಾರಿಗೂ ಕಾಳಜಿಯೇ ಇಲ್ಲವೇನೋ ಅಂತ ಸುಲಭವಾಗಿ ಅನ್ನಿಸಿಬಿಡುವಂಥಾ ಸಂದರ್ಭ ಹಳೆಯ ಗೆಳೆಯ ಚೇತು ಸಿಕ್ಕಾಗ ಸ್ಥಾಯಿಯಾಗಿಬಿಡುತ್ತದೆ. ಅಲ್ಲಿಂದಾಚೆಗೆ ಪಲ್ಲವಿಗೆ ತನ್ನ ಜೀವನದ ಹೊಂದಾಣಿಕೆಗಳು ಬೃಹತ್ತಾಗಿ ಕಾಣತೊಡಗುತ್ತವೆ. ರಘುವಿನ ಪ್ರತಿ ಮಾತನ್ನೂ ನಡೆಯನ್ನೂ ಚೆತುವಿನೊಂದಿಗೆ ತುಲನೆ ಮಾಡುತ್ತಾ ನೆಮ್ಮದಿಯಿಂದ ದೂರವಾಗುತ್ತಾಳೆ ಪಲ್ಲವಿ. ಜೀವನ ನಿರಾಸೆಯ ಅಲೆಗಳ ಮೇಲಿರುವಾಗ ತಂಗಾಳಿಯಂತೆ ಮತ್ತೆ ಬರುತ್ತಾನೆ ಚೇತು.

ಮುಂದೆ ಆಕೆಯ ತುಮುಲಗಳು ಏನು? ಎಂದಿಗೋ ಕಳೆದುಕೊಂಡ ತನ್ನತನವನ್ನು ಹುಡುಕುತ್ತ ಆಕೆಯ ನಡೆಗಳೇನು? ಇಲ್ಲಿ ಎಷ್ಟೋ ವರ್ಷ ಕಳೆದು ಸಿಕ್ಕ ಗೆಳೆಯನ ಹತ್ತಿರ ಬಾಲ್ಯವನ್ನು ಕಂಡುಕೊಳ್ಳುವ ಪ್ರಯತ್ನ, ಚೇತುವಿನಲ್ಲೇ ತನ್ನ ಜೀವನದ ಅಷ್ಟೂ ಪಾತ್ರಗಳನ್ನು ಕಾಣುವ ಪಲ್ಲವಿ, ತನ್ನ ಜೀವನವನ್ನ ವಿಶ್ಲೇಷಿಸಿಕೊಳ್ಳುವತ್ತ ಸಾಗುವ ದಾರಿ- ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದಾರೆ ಲೇಖಕಿ.

“ಕ್ಷಮೆ”- ಲೇಖಕಿಯ ಮೊದಲನೆಯ ಕಾದಂಬರಿ ಅಂತ ಕೊಂಚಮಾತ್ರವೂ ಅನ್ನಿಸದಿರುವ ಪುಸ್ತಕ. ಲೇಖಕಿಯ ವಿಚಾರ ಪ್ರಬುದ್ಧತೆ ಓದುತ್ತ ಓದುತ್ತ ಸ್ಪಷ್ಟವಾಗುತ್ತ ಹೋಗುತ್ತದೆ. ಎಲ್ಲಿಯೂ ಎಳೆಯದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ- ಕ್ಷಮೆ. ಎಂದಿಗೂ ಕನ್ನಡ ಪುಸ್ತಕವನ್ನೇ ಓದಿರದವರೂ ಭಾಷಾ ಪ್ರವೇಶಕ್ಕಾಗಿ, ಕಾದಂಬರಿ ಪ್ರಪಂಚದ ಪ್ರವೇಶಕ್ಕಾಗಿ ಓದುವಂತೆ ಮಾಡಬಲ್ಲ ಭಾಷೆ, ವಿಚಾರ ಎರಡೂ ಇದೆ ಈ ಕಾದಂಬರಿಯಲ್ಲಿ.

ಭೈರಪ್ಪನವರಿಂದ ತಿದ್ದಲ್ಪಟ್ಟವರು ಅಂದ ಕೂಡಲೇ ಕುತೂಹಲದಿಂದ ಪುಸ್ತಕ ಬಿಡುಗಡೆಗೇ ಹೋಗಿ ಕೊಂಡ ಪುಸ್ತಕ- ಭಾಷೆಯಲ್ಲೇ ಆಗಲೀ, ವಿಚಾರದಲ್ಲೇ ಆಗಲಿ ನಿರಾಸೆ ಮಾಡಲಿಲ್ಲ. ಇನ್ನಷ್ಟು ವಿಸ್ತಾರವನ್ನು ಬಯಸಿದ್ದುದಕ್ಕೆ ಮಾತ್ರ ಕೊಂಚ ತಣ್ಣೀರೆರೆಚಿದಂತಾಯ್ತು. ರಘು ಹಾಗು ಪಲ್ಲವಿಯ ತಂದೆ-ತಾಯಿಯ ವ್ಯಕ್ತಿತ್ವಕ್ಕೆ ಇನ್ನೂ ವೇದಿಕೆ ಹಾಗು ಒಳನೋಟ ಕೊಡಬಹುದಿತ್ತೇನೋ. ಪಲ್ಲವಿಯ ಪರಿಭಾಷೆಯಲ್ಲಿಯೇ ಇಡೀ ಪುಸ್ತಕವಿರುವುದರಿಂದ ಆ ಅವಕಾಶವಾಗಿಲ್ಲ ಅಂತ ದಟ್ಟವಾಗಿ ಅನ್ನಿಸುತ್ತದೆ. ಬರುವ ಎಲ್ಲ ಪಾತ್ರಗಳ ಮನೋಗತಗಳನ್ನೂ, ಭಾವನೆಗಳನ್ನೂ ವಿವರಿಸಿದ್ದರೆ ಕಥೆ ಇನ್ನಷ್ಟು ಸ್ಪಷ್ಟತೆ ಪಡೆಯುತ್ತಿತ್ತೇನೋ. ಖಂಡಿತವಾಗ್ಯೂ ಕನ್ನಡ ಕಾದಂಬರಿಗಳಲ್ಲಿ ಮುಂಚೂಣಿಗೆ ಸಾಗಬಹುದಾದ ಲೇಖಕಿ- ಸಹನಾ ವಿಜಯಕುಮಾರ್.

ಗುಡ್ ರೀಡ್.. ಕಾದಂಬರಿಪ್ರಿಯರು ಓದಿ ನೋಡಬೇಕಾದ ಪುಸ್ತಕ. ನಾನಂತೂ ಹಿಡಿದಾಗಿನಿಂದ ಕೆಳ ಬಿಡದೆ ಮುಗಿಸಿರುವ ಪುಸ್ತಕ. 

Sunday, July 24, 2016

Sialkot Saga: Ashwin Sanghi

1947 witness more blood than 1857's Sepoy Mutiny had seen. Not because of the war, not since the patriots were martyred; but due to the partition of Pakistan and the anarchy that resulted at India-Pakistan border. Hindus and Sikhs of Pakistan left their home, ancestral lands, and fled for lives. Hindus in the western part of India, now Pakistan wanted to stay with their religion and unfortunately that was least encouraged. Muslims of India had now found their solace in dividing their country for the want of land for themselves. The resultant communal outrage was supernumerary deaths and blood shed all along the borders.

Ashwin Sanghi has woven the story starting from Sialkot and in the backdrop of the changing Indian scenario after independence, till recently. Arbaaz, underworld mafia with his own principles who turns into a respectable businessman, and Arvind, the Marwari businessman who believes in buying and selling businesses and is of dual morality when it comes to business, make it to the list of top 20 richest in India.


Sometimes while reading the book, I started feeling that the characters Arbaaz and Arvind are just a means to show the post-Independence scenario of India and its political ups and downs within. Many political changes and the economic growth, along with the great scams of India post-independence are put across in the story, such that the fiction is not lost either.


Along with that is the story of Asoka and the nine unknown men, and is randomly spread and time-spaced across the past kingdoms that ruled India. The unresolved mystery of how few kings could assimilate more wealth than their capacity is attempted a possible reasoning.

This style of writing is gripping. While the reader would be interested in reading about the lives and shrewdness of Arvind-Arbaaz duo, the reader will also be enlightened about many important turns of events in Independent India. Be it Lal-Bahadur Shastri's death, operation blue star, Indira's death, Bofors scam, Rajiv' death, fodder scam, terror attacks, ups and downs of each elected government are dealt in detail. It is definitely a brush up for the forgotten public memory. The real events are intertwined with the story that Ashwin wants us to read.

I personally felt, that the climax of the story was dramatic and a little dampening. But the book is definitely one of the good reads. Sialkot saga book is a knowledge-giving storyteller. Kudos Ashwin Sanghi!

ಅದ್ಭುತ ಯಾನ - ಕೊನ್ ಟಿಕಿಯ ಯಶೋಗಾಥೆ : ಪ್ರದೀಪ ಕೆಂಜಿಗೆ

ಅದ್ಭುತ ಯಾನ - ಥಾರ್ ಹೈಡ್ರಾಲ್ ಎಂಬ ಸಂಶೋಧಕ ಇನ್ನೈದು ಸಾಹಸಿಗಳೊಡನೆ ಸಿದ್ಧಾಂತವೊಂದನ್ನು ಸಾಬೀತುಪಡಿಸಲು ಪೆಸಿಫಿಕ್ ಮಹಾಸಾಗರದಲ್ಲಿ ಬಾಲ್ಸಾ ಮರದ ದಿಮ್ಮಿಗಳ ತೆಪ್ಪದಲ್ಲಿ ೪೩೦೦ ಮೈಲಿ ಕ್ರಮಿಸಿದ ಯಶೋಗಾಥೆ.

ಪಾಲಿನೇಷ್ಯಾ ದ್ವೀಪವೊಂದರಲ್ಲಿದ್ದಾಗ ಬರುವ ಅಲೆಗಳನ್ನು ವಿರಾಮದಲ್ಲಿ ನೋಡುತ್ತಾ ಕೂತ ಹೈಡ್ರಾಲ್ ಪೂರ್ವದಿಂದ ಪಶ್ಚಿಮಕ್ಕೆ ಸಾಗುತ್ತಿದ್ದ ಅಲೆಗಳನ್ನು ನೋಡುತ್ತಾ ಹೊಳೆದ ವಿಚಾರ ಆತನನ್ನು ತನ್ನ ವೃತ್ತಿಗೆ ವಿದಾಯ ಹೇಳಿ, ಪಾಲಿನೇಷ್ಯಾ ಜನರ ಮೂಲ ಹುಡುಕುತ್ತ ಹೊರಡುವಂತೆ ಮಾಡುತ್ತದೆ. ಪಾಲಿನೇಷ್ಯಾ ದ್ವೀಪಗಳ ಬುಡಕಟ್ಟು ಜನಾಂಗ ಹನ್ನೊಂದನೇ ಶತಮಾನದಲ್ಲಿ ವಲಸೆ ಬಂದವರೆಂದು ಕುರುಹುಗಳಿದ್ದರೂ, ಎಲ್ಲಿಂದ ಬಂದವರೆಂದು ಯಾರೂ ಸ್ಪಷ್ಟವಾಗಿ ಪ್ರತಿಪಾದಿಸಿಲ್ಲದ ಕಾರಣ ಸಂಶೋಧಿಸುತ್ತಾ ಹೊರಟ ಹೈಡ್ರಾಲ್ ಹಲವು ಕುರುಹು, ಸಾಕ್ಷಿಗಳನ್ನು ಎಡತಾಕುತ್ತಾನೆ. ಎಲ್ಲವೂ ಪಾಲಿನೇಷ್ಯಾ ಜನರು ೪೩೦೦ ಮೈಲಿ ದೂರದ ದಕ್ಷಿಣ ಅಮೆರಿಕೆಯಿಂದಲೇ ಬಂದವರೆಂಬತ್ತ ಬೆರಳು ಮಾಡುತ್ತವೆ. ಅಲ್ಲಿನ ಶಿಲೆಗಳಿಗೂ, ದಕ್ಷಿಣ ಅಮೆರಿಕೆಯ ಶಿಲೆಗಳಿಗೂ ಇರುವ ಹೋಲಿಕೆ, ೧೧ನೇ ಶತಮಾನದವರೆಗೆ ಲೋಹ ಬಳಸದೆ ಕಲ್ಲಿನ ಆಯುಧದ ಉಪಯೋಗ, ಟಿಕಿ ಎನ್ನುವ ರಾಜನ ಹೆಸರಿನ ತಳಕು, ಇವೆಲ್ಲವೂ ಹೈಡ್ರಾಲ್ ನನ್ನು ಇದೇ ಸಿದ್ಧಾಂತದೆಡೆಗೆ ಸೆಳೆಯುತ್ತವೆ. ಆದರೆ ಈ ಸಿದ್ಧಾಂತವನ್ನು ಸಂಶೋಧಕರು ಹಾಗೂ ಜಗತ್ತು ನಂಬಬೇಕಾದರೆ ಆಗಿನ ಕಾಲಕ್ಕೆ ಏಕೈಕ ಮಾರ್ಗವಾಗಿದ್ದ ಬಾಲ್ಸಾ ಮರದ ದಿಮ್ಮಿಯಿಂದ ಮಾಡಬಹುದಾದ ತೆಪ್ಪಗಳ ಮೇಲೆಯೇ ವಲಸೆ ಹೋದದ್ದೆಂದು ಸಾಧಿಸಬೇಕಾಗುತ್ತದೆ. ಈ ಪ್ರಮುಖ ಸಂಗತಿಯನ್ನು ಸಾಬೀತುಪಡಿಸಲು ನಡೆಯುವ ಸಾಹಸಯಾತ್ರೆಯೇ ಕೊನ್ ಟಿಕಿ - ತೆಪ್ಪದ ಪ್ರಯಾಣ.
ನೂರು ದಿನಗಳಿಗಿಂತ ಹೆಚ್ಚಾದ ಪ್ರಯಾಣದಲ್ಲಿ ಹೈಡ್ರಾಲ್ , ಹರ್ಮನ್ (ಎಂಜಿನೀರ್), ಎರಿಕ್ (ನಾವಿಕ), ಬೆಂಟ್ (ಸ್ಪ್ಯಾನಿಷ್ ಅನುವಾದಕ ಹಾಗೂ ವಲಸೆ ಸಿದ್ಧಾಂತದ ಪ್ರತಿಪಾದಕ), ನಟ್  ಹಾಗೂ ಟಾರ್ಸ್ಟೀನ್(ರೇಡಿಯೋ ತಜ್ಞರು)- ಹಲವಾರು ಸವಾಲುಗಳನ್ನು ಎದುರಿಸುತ್ತ, ಸಾಗರ ಜೀವಿಗಳಲ್ಲಿ ತಮ್ಮದೂ ಒಂದು ಜೀವನದ ಹಾಗೆ ಬೆರೆತುಹೋಗುತ್ತಾರೆ. ಕೊನ್ ಟಿಕಿಯ ತಳದಲ್ಲಿಯೇ ಹಾದುಹೋಗುವ ಶಾಂತ ದೈತ್ಯ ನೀಲಿ ತಿಮಿಂಗಲ, ಬೆಳಗಾಗುವಷ್ಟರಲ್ಲಿ ಕೊನ್ ಟಿಕಿಯ ಸದಸ್ಯರ ಊಟಕ್ಕಾಗಿಯೇನೋ ಅನ್ನುವ ಹಾಗೆ ಬಿದ್ದಿರುವ ಹಾರುವ ಮೀನುಗಳು, ಕೆಲವೊಮ್ಮೆ ಬಿದ್ದಿರುವ ಭಯಜನಕ ಪುಟ್ಟ ಪುಟ್ಟ ಆಕ್ಟೋಪಸ್ ಗಳು,  ಯಾನ ಸುಖವೆನ್ನಿಸಿದಾಗೆಲ್ಲ ಎಚ್ಚರ ನೆನಪಿಸುವಂತೆ ಬರುವ ಬಿರುಗಾಳಿ, ದೊಡ್ಡ ಅಲೆಗಳ ಮೇಲೆ ನೃತ್ಯಗೈದರೂ ಪವಾಡದಂತೆ ಗಟ್ಟಿತನ ಕಾಯ್ದುಕೊಳ್ಳುವ ಕೊನ್ ಟಿಕಿ, ಶಾರ್ಕ್ ಗಳನ್ನು ಬೇಟೆಯಾಡುವ ಹುಂಬತನ, ಕೊನ್ ಟಿಕಿಗೆ ಕಟ್ಟಿದ ರಬ್ಬರ್ ಡಿಂಜಿಯಮೇಲೆ ತೆಪ್ಪದಿಂದ ದೂರ ಸಾಗಿ ವಾಪಸಾಗುವ ಸಂದರ್ಭಗಳು... ಈ ಅದ್ಭುತ ಯಾನ ಎಂಬ ಪುಟ್ಟ ಪುಸ್ತಕದ ತುಂಬೆಲ್ಲ ಕಟ್ಟಿದ ಸಾಗರ ಯಾನದ ರೋಮಾಂಚಕ ಚಿತ್ರಣ. ಕೊನ್ ಟಿಕಿ ಕಡೆಗೆ ಪಾಲಿನೇಷ್ಯಾ ತಲುಪುವಷ್ಟರಲ್ಲಿ ಛಿದ್ರ ಛಿದ್ರವಾದರೂ ಎಲ್ಲರನ್ನೂ ಸುರಕ್ಷಿತವಾಗಿ ದಡ ಸೇರಿಸಿ ದಕ್ಷಿಣ ಅಮೇರಿಕೆಯಿಂದ ತೆಪ್ಪದ ಮೇಲೆ ಪ್ರಯಾಣ ಸಾಧ್ಯವಿತ್ತೆಂದು ತೋರಿಸಿಕೊಟ್ಟಾಗ ಬುದ್ಧಿ ಈಗಷ್ಟೇ ನೀರಿನ ಮೇಲೆ ಮುಳುಗೇಳುವ ದೋಣಿಯೊಂದರಿಂದ ಕೆಳಗಿಳಿದ ಅನುಭವ.

ಈ ಸಾಹಸಗಾಥೆ ಪ್ರಕೃತಿಯಲ್ಲಿ ಬೆರೆಯುವ ಮನುಷ್ಯ ಸದಾ ಸುರಕ್ಷಿತ ಹೇಗೆಂಬುದನ್ನು ಮನಸ್ಸಿಗೆ ಅರಿವಾಗುವಂತೆ ತೋರಿಸಿಕೊಟ್ಟಿದೆ. ಯಾನ ಎಷ್ಟೇ ಅಪಾಯಕಾರಿಯಾದರೂ ಪ್ರಕೃತಿಯೊಂದಿಗೆ ಸಮ್ಮಿಳಿತ ಮನಸ್ಥಿತಿ ಹಾಗೂ ಸಂದರ್ಭವಿದ್ದಲ್ಲಿ ಜೀವಸಂಕುಲ ಹೇಗೆ ಹಾನಿಗೊಳಗಾಗದು ಎಂದು ಅರಿವು ಮೂಡಿಸುವ ಪಯಣ ಕೊನ್ ಟಿಕಿಯ ಯಾನ. ನೀವು ಪ್ರಕೃತಿ, ಪರಿಸರ ಕುರಿತ ಕಥೆ-ವಿಷಯಗಳನ್ನು ಇಷ್ಟಪಡುವವರಾಗಿದ್ದಲ್ಲಿ ಈ ಅದ್ಭುತ ಯಾನ ಪುಸ್ತಕ ಮರೆಯಲಾರದ ಓದು.

೨೦೧೨ರಲ್ಲಿ ಕೊನ್ ಟಿಕಿ ವಿಶುಯಲ್ ಡಾಕ್ಯುಮೆಂಟರಿ ಸಹ ಬಿಡುಗಡೆಯಾಗಿದೆ. ಆಸ್ಕರ್ ಪ್ರಶಸ್ತಿ ಕೂಡ ಬಂದಿರುವ ಸಿನಿಮಾ ಅಂತ ಈ ಪುಸ್ತಕ ಓದಿ browse ಮಾಡಿದ ನಂತರ ತಿಳೀತು. Trailor ಅಂತೂ ಪುಸ್ತಕದಲ್ಲಿ ಕಲ್ಪಿಸಿಕೊಂಡದ್ದು ಹಾಗೆ ಹಾಗೇ ಜೀವಂತವಾದ ಹಾಗಿದೆ. ಅದನ್ನಿನ್ನೂ ನೋಡಲಿಕ್ಕೆ ಕಾಯ್ತಿದ್ದೇನೆ.. ಸಾಧ್ಯವಾದಷ್ಟು ಬೇಗ....