ಒಲ್ಲೆನಿಸಿದಾಗ ಬರುವುದಲ್ಲ ಕವನ,
ಭಾವವಿರದೆ ಬರುವುದಲ್ಲ ಕವನ,
ಮನದಾಳದ ಭಾವನೆಗಳ ತಿಳಿಬೆಳಕು
ಬಳುಕುತ್ತ ವೈಯ್ಯಾರದಿ ಬರುತಿರಲು,
ಭಾವವಾ ಮೈದುಂಬಿಕೊಂಡು ಹಾಳೆಯೊಳು
ಝಾರಿಯಂತೆ ಮೆಲ್ಲಗೆ,
ಎಲ್ಲಿಯೂ ನಿಲ್ಲದೆ
ಹರಿಯುವುದೇ ಕವನ.
ಅವ್ಯಕ್ತ ಮಾತೊಂದು ಮರೆಯದೆ ಕಾಡಿದಾಗ,
ಅದೇ ಚಿಂತನೆ ತುಂಬಿದ ಮನ ಮಿಡಿದಾಗ;
ಬೆಂಬಿಡದೆ ಕಾಡಿದ ಭಾವಗಳ ಕವನ,
ಕಟ್ಟಿ ಕೊಡುವವು ಅದಕೆ ರಾಗಗಳ ಮನನ.
ತೊರೆ, ಝರಿ, ಪ್ರಕೃತಿಯ ಮಡಿಲಲ್ಲಿ;
ನಿಂತು ದಣಿದರೂ ಕಾಯುತ್ತ ಕಡಲಲ್ಲಿ;
ಮಾನಸ ಕಡಲ ಮಂಥನವಾಗದೆ ಉಕ್ಕಲಾರವು ಕವನ.
No comments:
Post a Comment