Friday, August 31, 2012

ಒಗ್ಗಟ್ಟಿನ ಗಮ್ಮತ್ತು!!


ಒಗ್ಗಟ್ಟಿನಲ್ಲಿ ಬಲ ಅಂತ ಎಲ್ಲರೂ ಹೇಳ್ತಾರೆ. ಆದರೆ ಒಗ್ಗಟ್ಟು ಯಾವುದಲ್ಲಿದ್ದರೆ ಚಂದ? ಇದನ್ನ ಹೇಳಿಕೊಟ್ಟೋರು  ಸ್ವಲ್ಪ ಕಮ್ಮಿಯೇ. ಹಾಗಾಗಿ ನಮನಮಗೆ ಹೇಗೆ ಬೇಕೋ ಹಾಗೆಲ್ಲ ಅರ್ಥೈಸಬಹುದು ಇದನ್ನ. 

ಒಕ್ಕೂರಲಿನಲ್ಲಿ ಹೇಳಿದ್ದೆವು... "ಸಿಸ್ಟರ್... ಪ್ಲೀಸ್ ಬಿಡಿ ಸಿಸ್ಟರ್.." ಉಂಡದ್ದೆಲ್ಲ ಕರಗಿ ಹೋಗಿ ಕಣ್ಣಂಚಲ್ಲಿ ಅಳು. ಎದುರಿಗೆ ಬೆತ್ತ ಹಿಡಿದ ನಮ್ಮ ಕಾನ್ವೆಂಟಿನ ಹೆಡ್ ಮಿಸ್ಟ್ರೆಸ್. ನಮ್ಮ ಕರುಣಾಜನಕ ಮುಖಗಳನ್ನು ನೋಡಿಯಾದರೂ ಒಳಗೆ ಬಿಡಬಾರದಾ ಅನ್ನಿಸ್ತಿತ್ತು.. ಆದರೆ ಅವರ ಕಣ್ಣಲ್ಲಿ ಸಡಿಲವಿಲ್ಲದ ಬಿಗಿ! ಆ ಕೋಪಕ್ಕೂ  ನಾವೇ ಕಾರಣಕರ್ತರಾಗಿದ್ದೆವು. 
ಸ್ನೇಹಿತ ನಿಖಿಲ್ ಒಡನೆ ಮಾತಾಡುವಾಗ ನೆನಪಾದದ್ದು ಇದು..
ಹೈಸ್ಕೂಲಿನಲ್ಲಿದ್ದಾಗೊಮ್ಮೆ ನನ್ನ ಸಹಪಾಠಿಯ ಗೃಹಪ್ರವೇಶ ಇದ್ದುದರಿಂದ ಕ್ಲಾಸಿನ ಎಲ್ಲ ಹುಡುಗರೂ ತಂತಮ್ಮ ಸೈಕಲ್ಲುಗಳೊಡನೆ ಊಟಕ್ಕೆ ಹೋಗಿದ್ದವರು, ಮಧ್ಯಾನ್ಹ ಊಟದ ಸಮಯ ಮುಗಿದ ನಂತರ ಶಾಲೆಗೆ ವಾಪಸ್ ಬಂದರು. ನಮ್ಮ ಹೆಡ್ ಮಿಸ್ಟ್ರೆಸ್ ತುಂಬಾ ಶಿಸ್ತಿನವರಾದ್ದರಿಂದ, ಇಡೀ ಕ್ಲಾಸಿಗೆ punishment ಆಯ್ತು. ಮಂಡಿಗಾಲಿನ ಮೇಲೆ  ನಿಲ್ಲೋ ಶಿಕ್ಷೆ. ದುರ್ಗದ ಬಿಸಿಲಿನ ಝಳ ಬೇರೆ!
ಒಂದು ಪಿರಿಯಡ್ ಮುಗಿಯುವವರೆಗೆ ಹಾಗೆ ನಿಲ್ಲಿಸಿದ HM, ನಂತರ ಮನ ಕರಗಿ, ಹುಡುಗಿಯರಿಗೆ ಒಳಹೋಗಬಹುದೆಂದು ಹೇಳಿ ಕಳಿಸಿದರು. ಆದರೆ ನಾವು ಮಾತ್ರ, ಎಲ್ಲರನ್ನೂ ಕ್ಲಾಸಿಗೆ ವಾಪಸ್ ಕಳಿಸಿದರೆ ಆಗ ಹೋಗುತ್ತೇವೆಂದು ಹಠ ಹಿಡಿದೆವು. 
ಕಡೆಗೆ ನಮ್ಮ ಬೇಡಿಕೆಗೆ HM ಮಣಿಯಲೇ ಬೇಕಾಯಿತೆನ್ನಿ! ಸ್ವಲ್ಪ ಹೊತ್ತು ತಡೆದ ನಂತರ, ನನಗೆ ನೆನಪಿದ್ದಂತೆ, ಬಹುಶಃ ಎಲ್ಲರಿಗೂ ಕೈ ಮೇಲೆ ಬೆತ್ತದಿಂದ ಎರಡೆರಡು ಕೊಟ್ಟೇ ಕಳಿಸಿದ ನೆನಪು! ಒಗ್ಗಟ್ಟಿನ ಬೆಲೆ ಇದೇಯೇ????  ಅಂತ ಹಲುಬಿದ ನೆನಪು  

ಅಗ್ರಿ ಯ ಡಿಗ್ರಿ ಮಾಡುವಾಗಂತೂ ಒಗ್ಗಟ್ಟಿನ ಶ್ರೀರೂಪ ಕಂಡುಕೊಂಡಿದ್ದು ಹೀಗೆ..
ಮಾರನೆಯ ದಿನ ಇಂಟರ್ನಲ್ ಪರೀಕ್ಷೆ.
ರಾತ್ರಿ ಹನ್ನೆರಡರ ವರೆಗೆ ವಿದ್ಯುತ್ ಇಲ್ಲ! ಛೆ! ಏನು ಮಾಡೋದು? ಓದಲಾಗಲಿಲ್ಲ! ,
Portions ತುಂಬಾ ಹೆಚ್ಚಿದೆ, ಮುಗಿಸಲಾಗಲಿಲ್ಲ!,
ಕ್ಲಾಸಿನಲ್ಲೊಬ್ಬಳು ಚರ್ಚಾಸ್ಪರ್ಧೆಗೆ ಹೊರಡುತ್ತಿದ್ದಾಳೆ, ಹೇಗೆ ತಾನೇ ಪಾಠ ಓದಿಯಾಳು?,
ಅಲ್ಲಿ ಯಾರಿಗೋ ಸ್ಪೋರ್ಟ್ಸ್ ಹತ್ತಿರದಲ್ಲಿದೆ, ವಿಶ್ವವಿದ್ಯಾಲಯ ಪ್ರತಿನಿಧಿಸಬೇಕು ಅವನು, ಸಹಾಯ ಮಾಡಬೇಡವೇ?
ಮೇಲಿನ ಎಲ್ಲ ಕಾರಣಗಳಿಗೂ ಪರೀಕ್ಷೆಯನ್ನೇ ಮುಂದೂಡಿಸಿ ಬಿಡುತ್ತಿದ್ದೆವು..
ತುಂಬಾ ಜನ ಯುವೋತ್ಸವಕ್ಕೆ ಹೊರಟಿದ್ದಾರೆ, ಅವರಿಲ್ಲದ ಪಾಠ ಅದೆಂಥಾ ಪಾಠ?,
crop production ಕ್ಲಾಸ್ನಲ್ಲಿ ನಡು ಬಗ್ಗಿಸಿ ಕೆಲಸ ಮಾಡಿ ಸುಸ್ತಾಗಿದೆ, 
ಮತ್ಯಾರೋ ಆಸ್ಪತ್ರೆ ಸೇರಿದ್ದಾರೆ, ನಾವು ನೋಡಲು ಹೋಗದಿದ್ದರೆ ಆಗುತ್ತದೆಯೇ?
ಸ್ನೇಹಿತೆಯ ಹುಟ್ಟು ಹಬ್ಬ, ಎಲ್ಲರೂ ಮಂಡ್ಯಕ್ಕೆ ಹೋಗಿ ಪುಟ್ಟದಾದರೂ ಸರಿ, ಪಾನಿ-ಪೂರಿ ಯ ಪಾರ್ಟಿಯಾದರೂ ಆಗಬಾರದೇ?
ಕ್ಲಾಸುಗಳನ್ನು ಕ್ಯಾನ್ಸಲ್ ಮಾಡಲು ಇವೆಲ್ಲಾ ನಮ್ಮ ನೆಪ.. ಕೊನೆಗೆ ನಮ್ಮ ಒತ್ತಾಯಕ್ಕೆ ಮಣಿದು ನಮ್ಮ ಅಧ್ಯಾಪಕರುಗಳು ಏನಾದ್ರೂ ಮಾಡ್ಕೊಳ್ಳಿ, ಅಂತ ಬಿಟ್ಟದ್ದೂ ಉಂಟು. ಆಗೆಲ್ಲಾ ಇದು ಒಗ್ಗಟ್ಟಿನಿಂದಲೇ ಅಂತ ಗೊತ್ತಿರಲಿಲ್ಲ. ನಿಧಾನವಾಗಿ ಒಗ್ಗಟ್ಟಿನ ಬಲ ಅರಿವಾಗಲು, ಅದರ ಬಳಕೆ ಇನ್ನೂ ಚುರುಕುಗೊಂಡಿದ್ದಂತೂ ನಿಜ..  

ಒಗ್ಗಟ್ಟಿನಲ್ಲಿ ಬಲ ಅಂತ ಎಲ್ಲರೂ ಹೇಳ್ತಾರೆ. ನಮನಮಗೆ ಹೇಗೆ ಬೇಕೋ ಹಾಗೆಲ್ಲ ಅರ್ಥೈಸಬಹುದು ಅದನ್ನ. 
ನಾನಂತೂ ಹೀಗಷ್ಟೇ ಅರ್ಥ ಮಾಡಿಕೊಂಡಿರೋದು! 
ಅರ್ಥವೋ, ಅನರ್ಥವೋ.. ಒಟ್ಟಿನಲ್ಲಿ ಒಗ್ಗಟ್ಟಿನಲ್ಲಿ ಸದಾ ಬಾಲವಿದೆ !!  

Saturday, August 18, 2012

A Zest For Power

Yes I feel Alive!
As I had been waiting for this
Yes! This, the Power
The air of it is Sweet;
It is Colossal
A worthy time to Revamp halting mind
And to bring the smoothness to a jerking halt

As brain rejoices with joy
For it had been a 'worth-while' wait
For returning the vested might
To glare with all its power!


Monday, August 13, 2012

Masala Puri (Masalpuri)

Sweet chutney
Needed: (per plate)

For Masala of Masal puri-
  • Clove- 1
  • Cinnamon-a small small small piece
  • Nutmeg-very minute piece
  • Pepper corns-2-3
  • Green Chutney
  • Jeera-a tsp

-Roast all these in a thick bottomed pan, and grind.

Garlic juice of 2 cloves
Boiled till very soft, peeled and completely mashed up potato-1
Mixie all of these together.
A small cup of peas-soaked overnight n pressure cooked till soft (but do not allow to be mashed up, thou)
Cook the ground mixture with peas till required consistency. It should not be either too liquid or too thick. Lets say, it should be syrupy in consistency.

For assembling:
Puris-5-6
Sweet chutney- Cook dates (5) n tamarind-a small ball separately till tender. add a half tsp of roasted jeera powder, 1tbsp jaggery and wet grind them to get a flowy consistency.
and
Green chutney- green chilly-1, a fistful of coriander leaves, and mint leaves (pudina) each, salt to taste, lemon juice-a few drops. wet grind them.
-about 1 tsp each

For Garnish:
Grated carrot- 2 tbsp
Finely chopped Onion- 2 tbsp
Coriander finely chopped- 1tsp
Sev- 4 tbsp

 Assembling:
Crush puris with hand coarsely and put 2 ladles of masala mixture.
Add sweet and green chutneys
Garnish with onions,tomatoes, carrot, sev and coriander leaves
Serve hot.
Tuesday, August 7, 2012

Sprouts chat


This weekend was a Rakhi weekend for me. Except for I could not tie Rakhi to my elder brother who’s not in town; I had a weekend blast with my younger brothers.  
For the occasion, I had prepared this unique healthy chat and everyone at home enjoyed it thoroughly.  
Needed: (Per Plate)
Pre- soaked and Sprouted green grams- a handful
Pre- Soaked, Sprouted and boiled Black grams – a handful
Finely chopped-Onion- 1, Coriander leaves- a small bunch, Tomato-1 small
Spices- Chat masala, Amchur powder, Chilly powder, Salt, Black salt, Roasted Jeera powder
A little jaggery syrup (put jaggery & water on low flame till its syrupy in consistency)
A squeeze of lemon juice
A handful of Sev to garnish
Optional-A fist-full of rolled oats- roasted

Procedure:
AAAAAh! There’s none. Just mix up everything. Add all the above spices according to taste, mix a little jaggery syrup, and garnish with Sev.. U’l have a healthily delicious chat when u’r done..  

Saturday, August 4, 2012

Custard Biscuit Pudding


Custard is one thing which I like to consume, in either warm or cold form. I googled for custard recipes n finally remixed custard biscuit pudding cake from http://www.sharmispassions.com/ to make my own pudding.
Its a quick & easy recipe, can be consumed warm or chilled too. I couldn't resist till its chilled. I just started munching one stack of biscuit pudding the moment its assembling was done. Warm taste was awesome too :) 
Its a must try for all custard lovers :)

Needed:
Custard - 1 ½  tbsp (Vanilla flavour)
Milk- 250ml (5stacks can be creamed with this)
Sugar- As per taste- I used 3 tbsp
Ghee- 1 tsp
Biscuits- 4 per stack.
Banana/Apple thin slices - 3 per stack 
Instant Coffee Powder (Bru)/ Filtered Coffee Decoction
A little chocolate syrup/Boost/ Bournvita powder

Add custard powder to few spoons of cold Milk and dissolve till it’s a smooth paste without lumps. Place a thick bottomed container on low flame and boil the remaining milk with added sugar. Keep stirring intermittently. Add the milk dissolved with custard to the boiling milk and continue to stir constantly. The custard will start thickening. Add ghee to the mixture at this stage. Continue cooking till it becomes a thick paste of creamy consistency. Switch off fire and allow it cool down to room temperature.


Assembling:
Place a slice of fruit on the biscuit and spread custard generously over it. For the next layer, dip the biscuit for a second in 2-3 spoons of coffee decoction and repeat the process of stacking one above the other. 4 layers’d be just fine. Top layer would not require fruit slice. I used Britannia Marie Gold for the base and top layer, and used 2 Britannia Vita Marie Gold for the layers in middle. On the top layer, sprinkle a little boost powder and instant coffee powder. Refrigerate for 2-3 hrs and enjoy the yum taste of custard biscuit pudding. 

Note: If you’re using rectangle biscuits like Parle-g or Krack jack you can lay four or six biscuits in one layer and make it appear like a cake.  

Here is its variant with Parle G Biscuits..
Thursday, August 2, 2012

ರಾಖಿಯ ಆಯ್ಕೆ!!


ರಾಖಿಯೆಂದರೆ ಮುಗಿಯದ ಸಂಭ್ರಮ
ಅವತರಣಿಕೆಯಂತೆ ವಿನ್ಯಾಸ ಪ್ರತಿ ವರ್ಷವೂ ಹೊಸವು...
ಒಂದರ ನಂತರ ಒಂದು ಅಂಗಡಿಯ ಸುತ್ತುವುದೇನು
ಕೊಳ್ಳುವ ಕೆಲವು ರಾಖಿಗೆ 
ಎಲ್ಲವನು ಬೆಳಕಿಗೆ ಹಿಡಿದು ತಿರುತಿರುಗಿಸಿ ನೋಡಿದ್ದೇನು
ಇದರ ಬಣ್ಣ ಚಂದ ಅದರ ನಮೂನೆಯೊಂದು ಇನ್ನೂ ಚಂದ 
ಮುಂದಿನ ಅಂಗಡಿಯಲ್ಲಿ ಇನ್ನೂ ಚೆನ್ನಾದುದಿದ್ದರೆ ?
ಇದ ಬಿಡಲೂ ಇಷ್ಟವಿಲ್ಲ - ಒಮ್ಮೆಗೇ ಕೊಳ್ಳಲೂ ಮನ ಒಲ್ಲ... 
ಕೊನೆಗೆ ಪ್ರತಿ ಅಂಗಡಿಯಲ್ಲು ಒಂದೇ ರಾಖಿಗೆ ಆಯ್ಕೆಯ ಭಾಗ್ಯ
ಬೇಕಲ್ಲವೇ ಇನ್ನು ಚೆನ್ನಾದುದೊಂದು?...
ಎಲ್ಲ ರಾಖಿಯ ಕೊಂಡಾಯ್ತು ಹಾ!
ಎಂದು ಸಮಾಧಾನಿಸುವ ಮೊದಲೇ,
ಕೊಂಡದ್ದಕ್ಕಿಂತ ಕಡಿಮೆ ಬೆಲೆಯ ರಾಖಿ, 
ಮಿಂಚುವ ಅದಾವುದೋ ರಾಖಿ,
ನಾ ಕೊಂಡದ್ದಕ್ಕಿಂತ ವಿಭಿನ್ನ-ವಿಶಿಷ್ಟ ರಾಖಿ
ಕಣ್ಣಿಗೆ ರಾಚಿ ಉತ್ಸಾಹ ಕಡಿಮೆ ಮಾಡಬೇಕೆ?  

Wednesday, August 1, 2012

ಕಲಿಕೆ

ಮಂಜು ಬಿದ್ದಂತೆ ಹಬ್ಬಿದಾ ನೀರವತೆ
ಈ ಮುಗಿಲಿಗೂ ಬಡಿದಿರುವಂತೆ ಮಂಕು
ಮೆಲ್ಲಗೆ ಕವಿದಿವೆ ಬಿಡೆನೆನ್ನುವ ಗೊಂಚಲ ಮೋಡ
ಬೇಡವೆನ್ನುವ ಕಾಲ ಕಳೆಯದೆ ಕಾಡಿಹುದು
ಬಾರೆನೆನಿಪ ಕಾಲಕೆ ನಾ ಸುಮ್ಮನೆ ಹಾತೊರೆದಿಹೆ
ಕಯ್ಯ ತುಂಬಿಹ ಹಣತೆ ಸೊಡರು ತುಯ್ದಾಡಿ
ಹರದಾರಿಗಳು ನೂರಾರು ಸಾವಿರವಿರಲು
ತಾಳ್ಮೆಯ ಕೊಂಡಿ ಜತನ ಮಾಡಿಹೆ
ಬೇಸರಗಳು ನೂರುಂಟು ಬದುಕಿನಲಿ
ಈಸಿ ಗೆಲ್ಲುವುದೆ ಜಾಣನಾ  ಪಥವೆಂದು
ಎಡವುತ್ತಲಾದರು ಸರಿಯೆ ಮುಂದೆ ಸಾಗಿರಲು
ಅಣಕದಿಂ ನಕ್ಕು ಸಮಯ ಮಾತ್ರ ಮೋಜ ತಾ ನೋಡಿದೆ