Friday, October 30, 2009

ಪಯಣ

ಶರಣು ಬರುವೆವು ಇಹಲೋಕಕೆ
ಆತ್ಮನಾ ಇರುವು ಮರೆತು
ಮನಬಂದಂತೆ ಬದುಕಿ
ತಿರುಗಿ ನೋಡಿದರೆ ನಮ್ಮದೇನೂ ಛಾಪಿರದಂತೆ;
ಎತ್ತ ನೋಡಿದರತ್ತ ಪಾಪ ರಾಚುವುದು
ಪುಣ್ಯವೆಲ್ಲೋ ಸಂದಿ-ಗೊಂದಿಯಲ್ಲಿಷ್ಟು-
ಕಂಡರದೇ ಹೆಚ್ಚು.

ಪಯಣ ಹೊರಡುತ ಪರಲೋಕಕೆ
ಬಾಯ್ಕಿತ್ತ ಹಲ್ಲಿಯಂತೆ
ಲೋಚಗುಟ್ಟುವೆವೋ ಅದೂ ಇಲ್ಲವೊ!
ಸುಖಾಸುಮ್ಮನೆ ದೇವರ ನೆನೆದು
ಕಡೆಯ ಬಾರಿ, "ಮುಕ್ತಿ, ದೇವಾ!!" ಎಂದರಚುವುದ ಮರೆಯೆವು.

No comments: