ಮಾಯದಾ ಮಾತಾಡಿ ಮರುಳಾಗಿ ಹದಗೊಳಲು ವಿಷವ ಉಣಿಸುವರೆಲ್ಲ
ಸತ್ಯವಾ ಸುಳ್ಳೆನಿಸಿ, ಮಾತಿನಾ ಮುಸುಗೆಳೆದು ಮತಿ
ಮಂಕುಗವಿಯಿತಲ್ಲ;
ಅರಗಿನರಮನೆ ಗಿಣಿಗೆ ಪಂಜರವೆಂಬುದರಿವಾಗಿಯೇ ಇಲ್ಲ
ಪ್ರೀತಿಯಾ ದೂಡಿ ತನಗೇ ತಿಳಿವಿದೆಯೆಂದು ಬೀಗಿ ಹೊರಟಿತಲ್ಲ
ಸಂಗಾತಿಯಿಂದೆನ್ನ ದೂರವಿರಿಸಲು ಎಲ್ಲ ಕಪಟಯೆಂದರಿಯದಲ್ಲ;
ದೂರವಾಗಿಹ ಸಂಗಾತಿ ಎಂತು ದನಿಮಾಡಿದರೂ ಕೇಳಲೊಲ್ಲ;
ಇನಿದನಿಯ ನೆನೆವು ಕಾಡದೆ ಜೀವ ತತ್ತರಿಸಿ ಸೊರಗಲಿಲ್ಲ
ಬರುವಾಗ ಬರಲೆಂದು ಕೈಚೆಲ್ಲಿ ಸಂಗಾತಿ ಸಮಯ ದೂಡಿತಲ್ಲ..
No comments:
Post a Comment