Tuesday, February 14, 2012

ಒಲುಮೆಯ ಬೆಳಕು

ಪ್ರೀತಿ ಸಿಂಧುವಾಗಿ ಬಾಳು
ಇಹದ ಚೆಲುವ ಸೂರೆಗೊಂಡು
ಮಡಿಲ ಹಕ್ಕಿಯಾಗಿ ಇಂಪು
ಗಾನವೊಂದ ಉಲಿದಿದೆ...!

ಹಚ್ಚಗಿರಲಿ ಒಲವ ಹಸಿರು
ಪ್ರೀತಿಗೊಂದೆ ದಿನವು ಬೇಡ
ಚಣವ ಮರೆತು ಸನಿಯದಲ್ಲಿ
ಲೀನವಾಗು ಹೃದಯದಲ್ಲಿ
ಬೆರೆತು ಸರಿವ ಕಾಲವೆನಲಿ ಪರಾಕು ಪ್ರೀತಿಗೆ!

ಮೋಡ ಸರಿದು ಬೆಳಕು ತಬ್ಬಿ
ನಾದವೊಂದು ಹರುಷದುಂಬಿ
ಮರೆಯ ಪರದೆ ಸರಿಸಿ ಮನದೆ
ಹರಡಿ ನಗುವ ತೆರದಿ ಚಣದೆ
ಮುಗಿಲನೆಲ್ಲ ಒಲುಮೆಯ ಚಿತ್ತಾರವೊಂದು ತುಂಬಲಿ!!