Friday, August 19, 2011

ನಮ್ಮದಲ್ಲದ ಜೀವ

ಆರಕ್ಕರೆಯೆರೆದರೆಂತಿಹುದು ನಮ್ಮದಲ್ಲದ ಜೀವಕೆ
ಕೇಳಲು ಬಾರದು ಇನ್ನಷ್ಟನು;
ನೀಡಲು ಬಾರದು ಮತ್ತಷ್ಟನು;
ಆರ ನೆರಳಿಲ್ಲದೆ ಬೆಳೆದ ಜೀವ ಬಾಗಿರೆ,
ನೆರಳ ಬೆಚ್ಚಗಾವಿನಲ್ಲಿ ಪ್ರೀತಿಯ ಬಿಸಿಯನುಂಡುದು
ಮೆರೆದಷ್ಟೂ ನಡೆವುದೆಂಬ ಹಮ್ಮಿನಲಿ ಬಾಳ್ವುದು
ನೆಳಲಿನಾಸರೆ ತೊರೆದಾಗ
ಬಿಳಿಲು ಬಿಡದೆ ಬೀಳ್ವ ಮರವಾಗ್ವುದು.
ಹುಂಬ ಬಾಳ ಜಗ್ಗದೆಯೆ ಹೀರಿ ಹಿಗ್ಗಿ ನಡೆವುದು
ಸತ್ವವೆಲ್ಲ ಹೀರಿ ನಾತವನ್ನು ಬೀರಿ 
ಸುತ್ತ ನೆರಳ ತಂಪಿನಲಿ ತಂಗಲೆಂದು ಬಂದವರು-
ಬರುವವರೂ ಬಾರದಂತೆ ಮಾಡ್ವುದು.

No comments: