ಮಲಗುವಾ ಮುನ್ನ ಕಣ್ ತೂಗಿ ಬಂದಿತ್ತು
ಆದರೀಗ ರೆಪ್ಪೆ ಕೂಡದೇಕೋ..
ಶಕುನ ಲೊಚಗುಟ್ಟಿ ಹಲ್ಲಿ ಕಿವಿಮಾತನ್ನು
ಹೇಳಿತ್ತು ಇನಿಯನಿರದಿರೆ ಹೀಗೆಯೇ..
ಆಗೀಗ ಬಂದಿತ್ತು ಮಳೆಯೆನ್ನಲು
ಗುಡುಗು ಸಂದೀತು ಸೊಡರೆನ್ನಲು
ಗಾಳಿ ಬರಿ ತಂಪನ್ನೆ ಸೂಸುತಿರಲು..
ಗಂಧ ಗಾಳಿಯೊಳಿಲ್ಲ- ಪತಿಯ ತೆಕ್ಕೆಯೊಳಿಲ್ಲ;
ದ್ವಾದಶಿಯ ಬೆಳದಿಂಗಳುಂಡ ಚಕೋರಿ
ನೀ ಬರಿ ಒಂಟಿಯೇನೆನ್ನುತಿಹುದು..
No comments:
Post a Comment