ಇನಿಯನ ಕಾಣದೆ ಮನ ಕಾತರಿಸಿರೆ
ಸಂಜೆ ದೀಪವ ಹೀಗೆ ಹೊತ್ತಿಸದಿರೆ
ಇರುಳಿನೊಳು ಬೆಳಕಿಲ್ಲ
ಸಂಜೆಯೊಳು ಸೊಡರಿಲ್ಲ
ಒರತೆಯನಾರೋ ಬತ್ತಲು ಬಿಟ್ಟಿರೆ
ಓ ಕಾಲವೇ ಸಾಕಿನ್ನು!
ಒಲವನೋರೆಹಚ್ಚಿದ ದೂರವ
ನಲ್ಲನ ಸೇರಲಾಗದ ಗಾವುದವ
ಕರೆ ಬಂದಿಹುದು-ಮನದ ಕರೆ ಬಂದಿಹುದು..
ಸೇರಲೋಸುಗ ಎನ್ನ ಪ್ರಾಣವ
ಪ್ರಾಣಕಿಂತ ಪ್ರಾಣವಾದೆನ್ನ ಜೀವವ..
No comments:
Post a Comment