Wednesday, December 29, 2010

ಹೋದವಳು ಮತ್ತೆ ಬಂದು..

ನನ್ನ ಗೆಳತಿ
ಪ್ರೀತಿಯೊಡತಿ
ಒಲುಮೆಯಿಂದ ಎಲ್ಲರನ್ನು
ಗೆದ್ದು ನಗಿಸಿ ತಾನೇ ಸೂಸಿ
ಹಾಲು ನಗೆಯ ಚೆಲ್ಲಿ
ಅದೇ ಬೆಳದಿಂಗಳಲ್ಲಿ ತಾನೇ
ಮರೆಯಾದ ಹುಡುಗಿ ಏಕೆ
ಹೀಗೆ ಆಗೀಗ ನೆನಪಿನಲ್ಲಿ
ಬಂದು ಕಾಡಿ ಇರುವನಿನ್ನು
ಮನಕೆ ಸಾರಿ ಇಣುಕಿ ಇಣುಕಿ
ನಡೆವೆಯಲ್ಲ ನೆನೆವಿನಲ್ಲಿ
ಚೂರು ಕೂಡ ಮಾಸದೆ..

.

One need not be experienced in love to love the loved ones....

Tuesday, December 28, 2010

ಪ್ರೀತಿ ಸಂಭಾಷಣೆ..

ನಿನ್ನಯ ಗೆಳೆತನ ಎಷ್ಟು ಚೆನ್ನ;
ಮೀರಿಹುದು ಹೊನ್ನ ಹೊಳಪನು
ನಿನ್ನ ಒಲವಲಿ ಮನವು ನನ್ನ;
ನಗೆಯ ಮಳೆಯಲಿ ಕುಣಿಸಿದೆ

ನಾ ನಿನ್ನ ಕಂಡಂದು
ಅದೇ ನನ್ನ ಸುದಿನ
ಪ್ರೀತಿ ತುಂಬಿ ನನ್ನ ಹೊತ್ತು
ಜಗಕೆಲ್ಲ ನೀ ತೋರಿದೆ!

ಬಂದೆ ಏಕೆ ನನ್ನ ಬಾಳಲಿ
ಭಾವದ ಜೊತೆ ಬೆರೆಯಲು
ನಿಂದೆ ಏಕೆ ನನ್ನ ಮನದಲಿ
ಪ್ರೀತಿಯ ಅಮೃತ ಉಣಿಸಲು

ಜಗಕೆ ಚಂದಿರನಾದರೆ
ನೆಮ್ಮದಿಗೆ ನನಗೆನ್ನ ದೊರೆಯು
ಹಂಗಿನರಮನೆ ಒಲ್ಲೆನ್ನುವನೆ ಹೊರತು
ನನ್ನ ಪ್ರೀತಿಯ ಸೆಲೆಯನೆಂದೆಂದಿಗೂ  ಅಲ್ಲ

ಅರಳಿಹ ಹೂವೊಳು ಹರಿವ ಸವಿಜೇನು ನೀ
ನಿನ್ನ ಸವಿಯೆ ಬಂದ ಮನ್ಮಥ ದುಂಬಿ ನಾ..!!
ನಿನ್ನ ನುಡಿಯೆ ಬಲುಚಂದ..!
ಸವಿದಂತೆಲ್ಲ ಸವಿ ಸಿರಿಗಂಧ.!
ಗೆಜ್ಜೆ ಹಿಡಿದ ಕಾಲೆಜ್ಜೆ ನೋಟ
ಘಲ್ ಘಲೆಂಬ ನಿನ್ನ ನಡಿಗೆಯ ಆಟ
ಮನದಿ ಮೂಡಿಸೆ ಮಧುರ ಗಾನ...!!

ನಿಮ್ಮ ಪ್ರೀತಿಗೆ ಶರಣು ಬಂದಿಹೆನು
ನಿಮ್ಮೊಳು ನಾ ಒಂದಾಗಲು,
ನಿಮ್ಮೊಡನೆ ಕಡೆಯುಸಿರಿನ ತನಕ
ಕೂಡಿ ಹೆಜ್ಜೆಯಿಡಲು..

ಮುತ್ತ ಕೊಟ್ಟು ಮರತಿಹೆ ನೀನು
ಹಕ್ಕಿಯೇ ಇಲ್ಲದೆ ಬಂಜರು ಬಾನು
ನಿನ್ನನೆ ನೆನಸುತ ಎಣಿಸಿಹೆ ಉಸಿರನು
ನೋಡಲು ಬಾರೆಯ ನನ್ನನು ನೀನು
ಬಾರೆಯ ನನ್ನನು ಕಾಣಲು..!!

ಬಾರದೆ ಹೋಗಲು ನಾನು,
ಚಂದಿರನಿಲ್ಲದೆ ಚಕೋರಿಯೇನು?
ನಿಮ್ಮನು ಬಿಟ್ಟು ಬಾಳಲಿ ಹೇಗೆ?
ಈರ್ವರೊಳು ಹೃದಯಗಳು ಬೆಸೆದಿರಲು....

ಕನಸಿನಲ್ಲು ಸೊಗಸಕಾಣೊ ಅಪ್ರತಿಮ ಪ್ರೀತಿ ನೀನು..!!
ನಿನ್ನ ನೊಂದ ಮನವನಿನ್ನು ನಾನೆಂದೂ ನೋಯಿಸೆನು..
ಮನದ ಬಡಿತ ಮರೆಯಾದೀತು, ನಿನ್ನ ಮರೆತ ಮರುಕ್ಷಣವೆ..!!
ಪ್ರೀತಿ ತುಂಬಿ ಬಯಸುವೆ ನಿನ್ನ, ಸೇರಿ ಮಾಡಲು ಬಾಳುವೆ..!!

ಅಬ್ಬಾ ನನ್ನೊಲವೆ!!
ಅದೆಂಥಹ ಮೋಡಿ ಮಾಡಿಹೆ ನೀನು
ಕ್ಷಣದೊಳು ನೋವ ಮರೆಸಿ
ಪ್ರೀತಿ ಅರಳಿಸುವ ಆ ವಿದ್ಯೆ
ನಿನಗೆ ಮಾತ್ರ ಕರಗತ...

ನಿನ್ನ ಮಿಡಿತಕೆ ಮನ ಕರಗಿದೆ...
ನಿನ್ನ ಗುಂಗಲಿ ಜಗವೆ ಮರೆಯಾಗಿದೆ...
ನನ್ನ ಸುತ್ತಲು ನೀ ಸುತ್ತಿದಂತಿದೆ..
ನನ್ನ ಕಾಣಲು ನೀ ಕುಳಿತಂತಿದೆ..
ಇದ ಕೇಳಿ ಬಂದಿಹೆನು ನಾ...
ನಿನ್ನ ತನುವಿನ ಬಂಧನಕೆ...!!

 
ಒಮ್ಮೆ ನನ್ನ ಕೈ ಹಿಡಿದು ನೋಡು...
ನನ್ನ ಜೀವನ ನೀ ಇಲ್ಲದಿರೆ ಬರಡು!

 
ಹಿಡಿದಿಹ ಕೈ ಎಂದಿಗೂ ಬಿಡೆನು
ನಿಮ್ಮಿಂದೆಂದಿಗೂ ದೂರ ಹೋಗೆನು...

ಹೃದಯದಿ ಸಂಧಿಸಿ ನೀ
ಆ ಬಾಹುಗಳಲ್ಲಿ ಬಂಧಿತೆ ನಾ
ಬಾಹುವೆಂಬ ಬಾಹುವಷ್ಟೇ ಅಲ್ಲ
ಅದು ಪ್ರೀತಿ ಸೆರೆಯು
ಪ್ರೇಮದಾಸರೆಯು
ಬೇಕೆಂದರೂ ನಾ
ಹೊರಬರಲಾರೆ ನಾ
ನನ್ನ ಇನಿಯನ ನೆನೆವಿನಿಂದ...

.

If there's anything in this world which is most delicate yet the strongest, its TRUST

Friday, December 24, 2010

ಬಿಸಿಲ ನಿದ್ದೆ

ಕಂಗಳೇನೋ ಮಲಗಿದಂತೆ
ರೆಪ್ಪೆ ಮುಚ್ಚಿ ಸರಿವುದು
ಆದರೂನು ಕನಸಿನಲ್ಲೂ
ಭರ್ತಿ ಬೆಳಕು ಕಾಣ್ವುದು

ತೇಲಿದಂತೆ ಕನಸ ಅನಿಸಿಕೆ
ಜಾರಿದಂತೆ ಕನವರಿಕೆ
ಅಂತೂ ನಿದ್ದೆಯಲ್ಲಿ ಬಿದ್ದು
ಕಣ್ಣ ಪೂರ್ತಿ ಮುಳುಗದೇ

ತುಂಬುಗಣ್ಣ  ನಿದ್ದೆ ಮಾಡಿ
ಆದರೂನು ಬಿಸಿಲ ನಿದ್ದೆ
ಹಾತೊರೆವ ಅತಿಗೆಲ್ಲ
ಬರಿಯ ತೇಲು ನಿದ್ದೆಯೇ!!

Friday, December 17, 2010

ವಸಂತ

ಇಬ್ಬನಿ ತಂಪಿನ ಹಾಗೆ
ಕಿರುಗೆಜ್ಜೆ ಇಂಪಿನ ಹಾಗೆ
ಪ್ರೀತಿ ಎಂಬೋದು ಮಾಗಿ ಕಾಲದಲ್ಲೂ
ಟಿಸಿಲ ತುಂಬೆಲ್ಲ ಹೂ ಬಿಡುವ ಬಳ್ಳಿ
ಕಂಪ ಪಸರಿಸಿ
ಅರಳಿದೆ ಹೂ
ಜಡಿ ಸೋನೆಯಲಿ...

Wednesday, December 8, 2010

ಈಗೀಗ!!!

ಪ್ರೀತಿ ಅನುಭೂತಿ ಅದು ಮಧುರವು,
ಹೊಟ್ಟೆಯೊಳು  ಚಿಟ್ಟೆ ಹಾರಿದಂತೆ!
ನೆನಪ ಕಾತರತೆ ಅಷ್ಟೇ ದಾರುಣ!!
ಮರಿ ದುಂಬಿ ತೂರಿ ತೂರಿ ಒದ್ದಾಡಿದಂತೆ :) :)