ಅಶ್ವತ್ಥರು ಅಸ್ತಂಗತ... ಇದ್ದಕ್ಕಿದ್ದಂತೆಯೇ ಹೀಗಾಯ್ತು ಅಂತ ಅಲ್ಲದಿದ್ರೂ, ಅವರು ಇನ್ನೂ ಬದುಕಬೇಕಾದವರು ಅಂತ ಭಾವಗೀತೆ ಆಸ್ವಾದಿಸಿ ಬಲ್ಲ ಪ್ರತಿಯೊಬ್ಬರ ಮನಸ್ಸಿನಲ್ಲೂ ಸುಳಿದಿರೋ ವಿಚಾರ.. ಆ ಸುದ್ದಿ ಕೇಳಿದಾಗಿನಿಂದ ಇದೇ ಸಾಲು ಮತ್ತೆ ಮತ್ತೆ ನೆನಪಾಗ್ತಿದೆ..., " ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರಾ ಚಿತ್ತ.... ". ಹಾಡಾಗಿ ಅವರು ಪ್ರತಿ ಕೇಳುಗನ ಮನದಲ್ಲಿ, ಗುರುವಾಗಿ ಅವರು ಪ್ರತಿ ಹಾಡುಗಾರನ ಮನದಲ್ಲಿ ಗಟ್ಟಿ ನೆಲೆಯೂರಿರೋ ಜೀವ. ಅಶ್ವತ್ಥರ ಹಾಡುಗಾರಿಕೆಯ ನಕಲು ಯಾವತ್ತಿಗೂ ಕಷ್ಟವೇ.. ಅಶ್ವತ್ತರ ಹೆಸರು ಎಂದಿಗೂ ಚಿರಾಯು...
ಕೇಳಿದ ಹಾಡುಗಳನ್ನೇ ಆಗಲಿ, ಅವರ ಸಿರಿ ಕಂಠದಲ್ಲಿ ಕೇಳಿದರದೇನೋ ಹರುಷ, ಸಾಲಿನಾ ಭಾವಕ್ಕೊಂದು ಹೊಸ ಅರ್ಥ...
No comments:
Post a Comment