Vague Insights...
ಕಾಡಿದ ಭಾವಕೆ ಮಾತು ಬಂದಾಗ..
Thursday, December 10, 2009
ರೈತನು
ಕಾಲ ಉರುಳಿಯೂ ಸಂಸ್ಕೃತಿಯ ಪ್ರತೀಕ,
ಜಾನಪದ-ಸರಳ ಜೀವನದ ದ್ಯೋತಕ;
ಸಂಬಂಧಗಳ ಮೆಲುನಗುವು
ಕೃಷಿಕನ ಮನೆ-ಮನದೊಳಿನ್ನೂ ಜೀವಂತ.
ಜಾವದೊಳೆದ್ದು ಜೀವದಣಿಸಿ
ಹೊಂಗನಸ ಮುಂದೂಡಿ
ಕಾಯಕದಿ ದೈವ ಕಾಣುವ ಕಲೆ
ಇವನಿಗೆ ಕರಗತ..
ಉತ್ತು
ಬಿತ್ತು ಜೀವ ತೇಯ್ದು,
ಫಸಲು ಬರಲು
ನಗೆಯ ಹೊನಲು
ಮನೆಯ
ತುಂಬೆಲ್ಲ ಹರಿವುದೋ..
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment