Monday, March 1, 2010

ಪ್ರೀತಿ

ಪ್ರೀತಿ ಹುಚ್ಚು ಪಟ್ಟು ಹಿಡಿದು
ತ್ಯಾಗ ಹೆಚ್ಚೋ ಪ್ರೀತಿ ಮೆಚ್ಚೋ
ಅಂತ ಕೂಡ ತಿಳಿಯದೇನೆ
ಯಾರ ಒಲುಮೆ ಯಾರ ನಲುಮೆ
ಜಗಕೆ ಏನು ತಿಳಿಸದಾಗಿ
ಧ್ವಂದ್ವದಲ್ಲಿ ಬಿದ್ದು ಮುಳುಗಿ
ಕಾಡಿದಂಥ ನೂರು ಚಿಂತೆ
ಒಂದೇ ಇಚ್ಛೆಯಿಂದ ಮಣಿದು
ನುಗ್ಗಿ ಮುಂದೆ ಎದ್ದು ಕ್ಷಣದಿ
ಕನಸ ತುಳಿದು ಕನಸಿನೆಡೆಗೆ
ನಡೆವುದೇನೆ ಜೀವನ...

No comments: