(ನನ್ನನ್ನೂ ಒಳಗೊಂಡು ಎಲ್ಲ ಫೇಸ್ ಬುಕ್ಕಿಗಳಿಗೆ- ತಮ್ಮ ಮತದಾನದ ನಿರ್ಣಯವನ್ನು ಇತರರಿಗೂ ಹಂಚಲು ಹೊಂಚುವ ನಮ್ಮೆಲ್ಲರಿಗೂ ಅರ್ಪಣೆ!!!! )
ಬಂತು ಬಂತು ಎಲೆಕ್ಷನ್ನು- ಗೆಲ್ಲಿಸಿ ನಮ್ಮದೇ ಸೆಲೆಕ್ಷನ್ನು
ಹೇರಿವೆವು ನಮ್ಮ ನಿಲುವನ್ನು- ಪಕ್ಕಕಿಡಿ ನಿಮ್ಮ ವಿಚಕ್ಷಣೆಯನ್ನು
ನಮ್ಮ ನಾಯಕ ಉತ್ತಮನು- ಇರುವರಲಿ ಸರ್ವೋತ್ತಮನು!!
ರಣಭೂಮಿಯಿಲ್ಲಿ ಸಿದ್ಧ- ಜನರ ವೋಟಿಗೆ ಬದ್ಧ
ನೀಡುತೀವಿ ಚಂದ್ರಬಿಂಬ- ಹರವಿ ನಿಮ್ಮ ಅಂಗಳದಾ ತುಂಬ
ಬದಲಾವಣೆಯ ಗಾಳಿ ಖಾತ್ರಿ- ತುಳುಕದು ತುಂಬಿಬಂದ ಪಾತ್ರಿ
ಇಂದ್ರ ಚಂದ್ರ ಎಲ್ಲ ಅವನೆ- ಅಭಿವೃದ್ಧಿಯೇ ಒಂದೇ ಸಮನೆ
ಇರಬಹುದಿದು ಬರಿ ನಮ್ಮ ಧೋರಣೆ- ಆಗಬಾರದೇಕೆ ನಿಮ್ಮ ಎಣಿಕೆಗೂ ಸ್ಫುರಣೆ?
ನಮ್ಮವ ಮಾಡಿದರೆ ಪದಗ್ರಹಣ- ಪ್ರಶಾಸನದ ತುಂಬೆಲ್ಲ ಸುಶಾಸನ
ನಮ್ಮವ ತುಳಿದರೆ ಗದ್ದುಗೆ- ಪ್ರತಿ ಕೈಗೂ ಶಕ್ತಿಯ ಸಜ್ಜಿಗೆ
ನಮ್ಮವನಾದರೆ ಪ್ರಧಾನಿ- ಭ್ರಷ್ಟಾಚಾರಕೆ ಹಿಡಿಯುವ ಸಾಣಿ
ಕುಟ್ಟುತೀವಿ ಲೈಕುಗಳನು- ಕಮೆಂಟುತೀವಿ ಸ್ಮೈಲುಗಳನು
ನಮ್ಮ ಲೈಕೆ ನಮಗೆ ಬೆಷ್ಟು- ಉಳಿದವೆಲ್ಲ ಬರಿಯ ವೇಷ್ಟು!

No comments:
Post a Comment