Thursday, April 18, 2013

ಮಾಯಾ ಛಾಯೆ

ಒಡಲಾಳದಲೊಂದು ಪಾತ್ರ 
ಒಡಂಬಡಿಕೆಗೊಂದು ಪಾತ್ರ ;
ಬೀಳಲಾರದ ಜಾಗೆಯೊಳು ಮತ್ತೊಂದು ಪಾತ್ರ 
ಬಿದ್ದ ನಂತರ ಮೇಲೇಳಲಿನ್ನೊಂದು ಪಾತ್ರ ;

ದಣಿವಾರಿಕೆಗೊಂದು, ಆರಿದಮೇಲಿನ್ನೊಂದು 
ಏತನ್ಮಧ್ಯೆ ಸುಮ್ಮಗಾದಾಗ ಕಮ್ಮಗಾದೊಂದು ಪಾತ್ರ ;
ಮುಖವಾಡದ ಜೀವನ ಬೆರೆಸಿದೆ 
ವ್ಯಕ್ತಿತ್ವದೊಳು ಬೆರಕೆಯ ಸತ್ವ 

ಪಾತ್ರ ಮಾಡದೆ ಬದುಕಿಲ್ಲ 
ನಾಟಕೀಯತೆ ಇಲ್ಲದ ನಿಜಾಂಶವಿಲ್ಲ ;
ಕಂಡವರಿಗೊಂದು ಬಾಳು,
ಒಳಗಡೆ ಇದ್ದರಿರಲಿ ಕೋಟಿ ಬೀಳು ;

ತೋರಗೊಡದೆ ಹೋದರಾಯಿತು 
ಸುಳ್ಳ ಸತ್ಯವೆಂ ಉಳಿಸಿ ಕಡೆದರಾಯಿತು 
ನಂಬಿದವರು ಪಾತ್ರವೆನ್ನರು- ನಿಜವ ತಿಳಿದವರು ಸತ್ಯವೆನ್ನರು
ಕಣ್ಣ ಬಿಗಿದಪ್ಪಿ ಮುಚ್ಚಿ ಇದೇ ನಿಜವೆಂಬರು 
ಗಾರುಡಿಗರಾಟಕ್ಕೆ ನಿತ್ಯ ಬಲಿಯಾದಾರು !!!

4 comments:

Unknown said...

Very Nice suppu!!!

BIG Fan....:)

Badarinath Palavalli said...

ಬದುಕು ಸಾವಿರ ಪಾತ್ರಗಳ ರಂಗ ಶಾಲೆ, ಒಮ್ಮೆ ನಾವೇ ನಾಯಕ ಮತ್ತೊಮ್ಮೆ ನಾವೇ ಕಾಳ ನಾಯಕ! ಅರ್ಥೈಸಿಕೊಳ್ಳುವ ಮನಸ್ಸುಗಳ ವ್ಯಾಪ್ತಿಗೆ ಭಾವಾರ್ಥ ನಮ್ಮ ಪಾತ್ರ.

ಒಳ್ಳೆಯ ಕವನ.

http://www.badari-poems.blogspot.in/

Sheela Nayak said...

ಫೇಸ್ಬುಕ್ಕಿನಿಂದ ಕನ್ನಡ ಬ್ಲಾಗ್, ಅಲ್ಲಿಂದ ಸುಂದರ ಕವಿತೆಯ ಒಡತಿಯ ಬ್ಲಾಗ್ ನತ್ತ.. ವ್ಯರ್ಥವಾಗಲಿಲ್ಲ ಮತ್ತೆ ಬಾಲ್ಯದ ಸುಂದರ ನೆನಪುಗಳು ಮುಂಗಾರು ಮಳೆಯಂತೆ ಹನಿಸಿ ಮನವನು ತಂಪುಗೊಳಿಸಿದವು.
ನಾ ಬರಹಗಾರ್ತಿಯಲ್ಲ.. ಭಾವಗಳ ನೆಲೆಯಲ್ಲಿ ಅಳೆದು ಪೋಣಿಸಿದ ಶಬ್ದಗಳ ಮತ್ತೆ ಮೆಲ್ಲುವೆನು. ಸೀದಾ ಹೃದಯದೊಳಗಿಳಿಯಿತು ನಿಮ್ಮ ಕವನ ಸುಪ್ರಭಾ!

Unknown said...

congrats for best writing of the month prize. keep
it up!