ಜೀವ ಪೋಪುದು, ಸೇರಲು ಭೂಮವ!
ಯಮ ತಾ ಬಿಡದೆ ಹೊಂಚನೀವನು;
ಮರದ ಮೆರೆಯಾಗಿರಲೇನು
ಮನೆಯ ಕದವಿಕ್ಕಿದೊಡೇನು
ಹೋಪ ಜೀವ ನಂಬಿದವಗೆಲ್ಲ
ನಿರ್ವಂಚನೆಯಿಂ ವಂಚಿಪನು
ರಕುತ ಚೆಲ್ಲಿದರು ಸರಿಯೆ
ದೇಹ ದಹಿಸಿದರು ಸರಿಯೆ
ಅಂತು ಅಂತಗಾಣಿಸಿ ದೇಹಕೆ
ದ್ವೈತವ ಗಾಳಿಗೆ ತೂರಿಪನು
ಜೀವವಿಲ್ಲದೆ ತಡಿಕೆ ದೇಹಕೆ
ಬೆಲೆ ಕೊಂಚವೂ ಇಲ್ಲ ಆ
ಜೀವ ಯಾರ ಜೀವವಾಗಿತ್ತೊ
ಆರ ಸೈರಣೆಗಾರ ಮನ್ನಣೆಗಾರ
ನೆನಹಿಗದು ಪಾತ್ರವಾಗಿತ್ತೊ
ಜೀವವೊಂದೂ ಪರಿಗಣನೆಗೆ
ಮಾತ್ರ ಪಾತ್ರಮಾಗದೆ
ಭೂಗರ್ಭದೊಡಲಾಳದಿಂ
ಸೇರಿ ತಾನೊಂದು ಆತ್ಮ-
ಮಾತ್ರಮಾಗಿ ತಾರೆಗಳಲಿ
ಮಿನುಗಿ ಅನಂತವಾಗಿಹುದು..
ಯಮ ತಾ ಬಿಡದೆ ಹೊಂಚನೀವನು;
ಮರದ ಮೆರೆಯಾಗಿರಲೇನು
ಮನೆಯ ಕದವಿಕ್ಕಿದೊಡೇನು
ಹೋಪ ಜೀವ ನಂಬಿದವಗೆಲ್ಲ
ನಿರ್ವಂಚನೆಯಿಂ ವಂಚಿಪನು
ರಕುತ ಚೆಲ್ಲಿದರು ಸರಿಯೆ
ದೇಹ ದಹಿಸಿದರು ಸರಿಯೆ
ಅಂತು ಅಂತಗಾಣಿಸಿ ದೇಹಕೆ
ದ್ವೈತವ ಗಾಳಿಗೆ ತೂರಿಪನು
ಜೀವವಿಲ್ಲದೆ ತಡಿಕೆ ದೇಹಕೆ
ಬೆಲೆ ಕೊಂಚವೂ ಇಲ್ಲ ಆ
ಜೀವ ಯಾರ ಜೀವವಾಗಿತ್ತೊ
ಆರ ಸೈರಣೆಗಾರ ಮನ್ನಣೆಗಾರ
ನೆನಹಿಗದು ಪಾತ್ರವಾಗಿತ್ತೊ
ಜೀವವೊಂದೂ ಪರಿಗಣನೆಗೆ
ಮಾತ್ರ ಪಾತ್ರಮಾಗದೆ
ಭೂಗರ್ಭದೊಡಲಾಳದಿಂ
ಸೇರಿ ತಾನೊಂದು ಆತ್ಮ-
ಮಾತ್ರಮಾಗಿ ತಾರೆಗಳಲಿ
ಮಿನುಗಿ ಅನಂತವಾಗಿಹುದು..
No comments:
Post a Comment