ರಸಹೀನ ರಾತ್ರಿಯೊಳು ವಿದ್ಯುತ್ ಅಡಚಣೆ!
ಕ್ಷಮಿಸಿಬಿಡಿ ಎಂದಾರೂ ಗೋಳ ಕೆಳ್ವರಿಲ್ಲ;
ಶ್ವಾನರಾಗದಿಂಚರ ಕರ್ಣದುಂಬಿರಲು,
ಕೇಳುತಲಿ ಆ ಕರ್ಕಶದಿಂಪನು..
ಈ ಮಧ್ಯ ಸೊಳ್ಳೆಯ ನಾದವೀಣೆಗೆ,
ತಲೆದೂಗದೆ ತಾ ಕೊಡವಿಹೆನು!
ಇನಿಯನ ಸಂದೇಶ ಓದಲಾಗದು,
ಕಡಿವುದು ಹಾ! ಸೊಳ್ಳೆ! ಎಲೆಲೆ!! ನೀನೆಲ್ಲೆ?!
ಕತ್ತಲಲಿ ಸೊಳ್ಳೆಯೊಡನೆಂಥ ಸರಸ?
ಹೊಸಗಲು ಕಂಡರೆ ತಾನೇ ಮರುಳುಗಣ್ಣಿಗೆ ?
ಮುಸುಗೊದ್ದು ಮಲಗಲು ಉಸಿರು ನಿಂತೀತೆಂಬ ಭಯ!
ಅಬ್ಬ!! ಅಂತೂ ಬಂತು ಹೋಗಿದ್ದ ವಿದ್ಯುತ್ತು,
ಮತ್ತೆ ಕಾಣೆಯಾದರದೆ ವಿಪತ್ತು!!
ಕ್ಷಮಿಸಿಬಿಡಿ ಎಂದಾರೂ ಗೋಳ ಕೆಳ್ವರಿಲ್ಲ;
ಶ್ವಾನರಾಗದಿಂಚರ ಕರ್ಣದುಂಬಿರಲು,
ಕೇಳುತಲಿ ಆ ಕರ್ಕಶದಿಂಪನು..
ಈ ಮಧ್ಯ ಸೊಳ್ಳೆಯ ನಾದವೀಣೆಗೆ,
ತಲೆದೂಗದೆ ತಾ ಕೊಡವಿಹೆನು!
ಇನಿಯನ ಸಂದೇಶ ಓದಲಾಗದು,
ಕಡಿವುದು ಹಾ! ಸೊಳ್ಳೆ! ಎಲೆಲೆ!! ನೀನೆಲ್ಲೆ?!
ಕತ್ತಲಲಿ ಸೊಳ್ಳೆಯೊಡನೆಂಥ ಸರಸ?
ಹೊಸಗಲು ಕಂಡರೆ ತಾನೇ ಮರುಳುಗಣ್ಣಿಗೆ ?
ಮುಸುಗೊದ್ದು ಮಲಗಲು ಉಸಿರು ನಿಂತೀತೆಂಬ ಭಯ!
ಅಬ್ಬ!! ಅಂತೂ ಬಂತು ಹೋಗಿದ್ದ ವಿದ್ಯುತ್ತು,
ಮತ್ತೆ ಕಾಣೆಯಾದರದೆ ವಿಪತ್ತು!!
No comments:
Post a Comment