Monday, September 14, 2015

ಆಟಗಾರ : Movie Review

ಅಗಾಸ್ಥಾ ಕ್ರಿಸ್ಟಿ ರಚಿಸಿರುವ "And there were none" ಕೃತಿಯನ್ನು 1965ರಲ್ಲಿ ಹಿಂದಿಯ "ಗುಂನಾಮ್" ಚಲನಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಮೆಹಮೂದ್ ನ "ಹಮ್ ಕಾಲೇ ಹೈ ತೋ ಕ್ಯಾ ಹುವಾ" "ಗುಂನಾಮ್ ಹೈ ಕೋಯೀ" ಹಾಡುಗಳು ಇಂದಿಗೂ ಜನಪ್ರಿಯ. ಅದೇ ಸಿನಿಮಾದ ಇಂದಿನ ಕಾಲದ ಅವತರಣಿಕೆ ಈ "ಆಟಗಾರ" ಅನ್ನಿಸದೆ ಇರಲಾರದು.  
ಇಲ್ಲಿ ಜೀವನದ ಬೇರೆ ಬೇರೆ ಸ್ಥರಗಳಿಂದ ಬಂದ 10 ಜನರನ್ನ Big Boss ಮಾದರಿಯ ಆಟಗಾರ showಗಾಗಿ ಕರವಾರದಾಚೆಯ ಪುಟ್ಟ ದ್ವೀಪವೊಂದಕ್ಕೆ ಬಿಡಲಾಗುತ್ತದೆ. ಮೊಬೈಲ್ ಆಗಲೀ, ಇನ್ಯಾವುದೇ ಉಪಕರಣವನ್ನಾಗಲಿ ಜೊತೆಗೊಯ್ಯಲು show ಸಮ್ಮತಿಸಿರುವುದಿಲ್ಲ. ಮೊದಲ ದಿನ ನಗು, ಆಟಗಳಲ್ಲಿ ಕಳೆದುಹೋಗುತ್ತದೆ. ನಂತರ ಸರಣಿ ಕೊಲೆ ಶುರುವಾಗುತ್ತದೆ. ತಮ್ಮದೇ ನೆರಳಿಗೂ ಭಯಪಡುವ ಎಲ್ಲರೂ ಒಬ್ಬರನ್ನೊಬ್ಬರು ಅನುಮಾನಿಸುತ್ತಾರೆ. ಅವರನ್ನುಳಿದು ದ್ವೀಪದಲ್ಲಿ ಇರುವವರು ಯಾರು? ಕೊಲೆಗಾರ ಹೊರಗಿನವನೋ? ಒಳಗಿನವನೋ? ಬೇರೆ ಬೇರೆ ಜೀವನ ಸ್ಥಾಯಿಗಳಿಂದ ಬಂದವರೆಲ್ಲರೂ ಕೊಲೆಯಾಗಲು ಸಮಾನ ಪ್ರೇರಣೆ ಇರಬೇಕಲ್ಲವೇ? ಯಾರು ಆ common ಶತ್ರು? ಯಾಕಾಗಿ ಕೊಲೆಗಳು?- ಹುಡುಕುತ್ತ ಹೋಗುವುದೇ ಕಥೆ.


ಅನೂಪ್ ರ  ಸಂಗೀತ ಇಂಪಾಗಿದೆ. ನಿರ್ದೇಶಕ ಚೈತನ್ಯರ ಪ್ರಯತ್ನ ಶ್ಲಾಘನೀಯ. ಸತ್ಯ ಹೆಗ್ಗಡೆ ಯವರ ಛಾಯಾಗ್ರಹಣ ಈ ಸಿನಿಮಾದ ಜೀವಾಳ. ಹೆಚ್ಚು ಬಂಡವಾಳ ಬೇಡದೇ ಇರುವ ಆಕ್ಷನ್ ಹಾಗು ಕಥೆ ಆಟಗಾರನದ್ದು. ಚಿರಂಜೀವಿ ಸರ್ಜಾ, ಪರೂಲ್, ಮೇಘನಾ ಸುಂದರ್ ರಾಜ್, ಅನು ಪ್ರಭಾಕರ್ ಎಲ್ಲರ ಅಭಿನಯವೂ ಪುಟಕ್ಕಿಟ್ಟ ಹಾಗಿದೆ. ಸ್ವಲ್ಪ ಮಾತ್ರ ಇರುವ ಅನಂತ್ ನಾಗ್ ರ ಪಾತ್ರ ಕಥೆಗೊಂದು ಜೀವ ತುಂಬುತ್ತದೆ. ರವಿಶಂಕರ್ ತಮ್ಮ ಇನ್ಸ್ಪೆಕ್ಟರ್ ಪಾತ್ರಕ್ಕೆ ಒಪ್ಪುವಂಥಾ ಸಂಭಾಷಣೆ ಹಾಗು ಅಭಿನಯದಿಂದ ಮನಸೆಳೆಯುತ್ತಾರೆ.

One time must watch ಸಿನಿಮಾ. ಎಲ್ಲರೂ ಅಡಗಿರುವ ಕ್ರೌರ್ಯದ ಪ್ರತೀಕವೇ. ಆ ಹತ್ತು ಜನರಲ್ಲೊಬ್ಬರ ಮನದಾಳದಲ್ಲಿ ಎಲ್ಲೋ ನಮ್ಮನ್ನು ನಾವು ನೋಡಿಕೊಳ್ಳಬಲ್ಲೆವೇನೋ. ಅಪರೂಪಕ್ಕೆ ನೋಡಿದ ನಂತರವೂ ಆಲೋಚನೆಗೆ ದೂಡುವ, ಕಾಡುವ ಕಥೆಗಳ ಸಿನಿಮಾಗಳಲ್ಲಿ ಇದೂ ಒಂದು.


No comments: