ಮಾತು ಮಾತಿಗೂ ಕಹಿಯೇಳದ ಮುನಿಸು
ಯಾರೇನೇ ಅಂದರು ಸರಿಯೆ
ಮತ್ತೆ ಅಲ್ಲೇ ಮುಗುಳುನಗುವಂತಿರೆ
ಮತ್ತೆ ಅವರನೇ ಅರಸುತ ಪ್ರೀತಿ ಸುರಿಸಿರೆ
ಎಲ್ಲ ಬೇಸರ ಆಟ ಮುಗಿಯುವ ತನಕ;
ದಿನವು ಕಳೆಯುವ ತನಕ;
ಮರುದಿನದಿ ಮತ್ತೆ ಕೂಡಿಯಾಡುವ ತವಕ
ಹಂಗಿಲ್ಲ; ಮಾತಿನಾ-ಮೌನದಾ ಛಡಿಯೇಟಿಲ್ಲ
ಮಾತಿಗಿಂತ ಬರಿದುರಿಯ ಮೌನ ಲೇಸೇನಲ್ಲ
ಮತ್ತೆ ಮತ್ತೆ ನೆನೆದು ಕೊರಗುವ ತಾವೇ ಇಲ್ಲ
ಬೆಳೆದುಬಿಟ್ಟೆವು ನಾವು ನಮ್ಮ ಒಳಗಿನ ಮಗುವು
ಎಂದೋ ಸತ್ತು ಗರ್ಭದೆ ಹೂತು ಹೋಗಿರೆ
ಬರಿ ಕೆದಕಿ ನೋಡುವ ಚಾಳಿಯೆಮಗೆ
ಇತರರಂದಿಂದ್ದೆಲ್ಲ ಹೌದೌದು.. ತಮಗೇ !
ಬೆದಕುವೆವು ನಾವು ಕಾಲವೂ ಯಾವುದನ್ನೋ
ಮರೆತೇವೇನು ನಾವು ಅನ್ವರ್ಥ ಕ್ಷಣಗಳನ್ನೂ...
ಮುಗಿಲು ನೆರೆತರೆ ಅದುವ ಬಿಡಿ ನಮ್ಮ
ಕೂದಲೇ ನೆರೆತು ತಲೆಯುರುಳುವ ಸರಿಗೆ;
ಬೈತಿಟ್ಟೇ ಇಡುವೆವು ಅನವರತ ಕಳೆದದ್ದನ್ನ;
ನಡೆಯದಿದ್ದ ಅತಿರಂಜಿತ ಕಲ್ಪಿತವನ್ನೂ!!
ಕಲ್ಪಿತಕ್ಕೆ ಬಣ್ಣ ಬೆರೆಸಿ ಕೊರಗಲು ಮರೆತರೆ ಹಾ!!!
ಭುವಿಯೊಳು ಬೆಳೆದೆವೆಂಬುದಕ್ಕರ್ಥವಾದರೂ ಉಂಟೇ!!!