ಬೀಳಲಾರದ ಜಾಗೆಯೊಳು ಮತ್ತೊಂದು ಪಾತ್ರ
ಬಿದ್ದ ನಂತರ ಮೇಲೇಳಲಿನ್ನೊಂದು ಪಾತ್ರ ;
ದಣಿವಾರಿಕೆಗೊಂದು, ಆರಿದಮೇಲಿನ್ನೊಂದು
ಏತನ್ಮಧ್ಯೆ ಸುಮ್ಮಗಾದಾಗ ಕಮ್ಮಗಾದೊಂದು ಪಾತ್ರ ;
ಮುಖವಾಡದ ಜೀವನ ಬೆರೆಸಿದೆ
ವ್ಯಕ್ತಿತ್ವದೊಳು ಬೆರಕೆಯ ಸತ್ವ
ಪಾತ್ರ ಮಾಡದೆ ಬದುಕಿಲ್ಲ
ನಾಟಕೀಯತೆ ಇಲ್ಲದ ನಿಜಾಂಶವಿಲ್ಲ ;
ಕಂಡವರಿಗೊಂದು ಬಾಳು,
ಒಳಗಡೆ ಇದ್ದರಿರಲಿ ಕೋಟಿ ಬೀಳು ;
ತೋರಗೊಡದೆ ಹೋದರಾಯಿತು
ಸುಳ್ಳ ಸತ್ಯವೆಂ ಉಳಿಸಿ ಕಡೆದರಾಯಿತು
ನಂಬಿದವರು ಪಾತ್ರವೆನ್ನರು- ನಿಜವ ತಿಳಿದವರು ಸತ್ಯವೆನ್ನರು
ಕಣ್ಣ ಬಿಗಿದಪ್ಪಿ ಮುಚ್ಚಿ ಇದೇ ನಿಜವೆಂಬರು
ಗಾರುಡಿಗರಾಟಕ್ಕೆ ನಿತ್ಯ ಬಲಿಯಾದಾರು !!!