ತಾಯಲ್ಲದಿದ್ದರೇನು
ಇರುವೆ ನಾ ನಿನ್ನ ಸಂಗಡ
ದೂರದ ಬಾಳುವೆಯ ಕಟ್ಟಿಕೊಡಲು ನಾನಿಲ್ಲವೇನು?
ನಾನಿಲ್ಲವೇನು? ನಾನಿಲ್ಲವೇನು?
ನಿದಿರೆ ಬಾರದಿರೆ
ಹೂಮನಸು ನೋಯದಂತೆ
ಕಥೆ ಹೇಳಿ ಲಾಲಿ ಹಾಡ ಹಾಡಲು ತಾಯಾಗುವೆ
ಬೆಚ್ಚನೋದಿಸಿಹೆ ಎಂದೂ ಬೆಚ್ಚದಿರು
ನಾನಿಲ್ಲವೇನು? ನಾನಿಲ್ಲವೇನು?
ಇರುವ ತಾಯಹೆಸರ
ಕನಲದಂತೆ ಬಾಡದಂತೆ
ಹಚ್ಚಗೆ ಸ್ಮರಿಸುವಂತೆ ಹೇಳುತಲೇ ಹೋಗುವೆ
ಆ ದಿನಗಳೊಳು ಅನುದಿನ ನಡೆದುದು
ಮರಳಿ ಬಿಕ್ಕದಿರು,
ನಾನಿಲ್ಲವೇನು? ನಾನಿಲ್ಲವೇನು?
ಹೃದಯ ಮಿಡಿಯದ ತಾಯಿ
ಒಲವ ತೋರದೆ
ಒಲಿಯದೆ ಅರಸಿದ ಕಥೆಯ ಎಷ್ಟು ಕೇಳಿದರೇನುಂಟು ಸವಿಯು?
ಮಲಗು ಕಂದಮ್ಮ ತಾಯಲ್ಲದಿರೇನು
ತಂದೆ ನಿನ್ನ ಭುವಿಗೆ ನಾನೂ
ಮಡಿಲು ಬೆಚ್ಚಗಿರೆ ಸುಖವಷ್ಟೆಯೇ
ದೂರದ ಬಾಳುವೆಯ ಕಟ್ಟಿಕೊಡಲು ನಾನಿಲ್ಲವೇನು? ನಾನಿಲ್ಲವೇನು?
No comments:
Post a Comment