Wednesday, July 29, 2009

ಸ್ನೇಹ

ದಿಕ್ಕೊಂದೇ ಅದು ಗಮ್ಯವಾದರೂ ತಲುಪಲು ರಹದಾರಿ ನೂರಾರು
ದಶ ದಿಕ್ಕುಗಳು ಸಾಲವು ಪಯಣಕೆ
ಮುಂದೆ ಚಲಿಸುತ್ತಲಿ ನೋಡಿ ಸವಿದು ಸರಿದಂತೆ ಕಾನನ
ಸ್ನೇಹಿತರು ಆಯಾಸಗಾಣದಂತೆ ತಂಪೆರೆಯಲು ಬಂದ ಗಂಧರ್ವ ಮಾನವರು
ಯಶದ ಪಯಣಕ್ಕೆ ಸ್ನೇಹದ ಪನ್ನೀರು ಚಿಮುಕಿಸಿಹೊಸ ಓಜಸ್ಸನ್ನು ನಲ್ಮೆಯಿಂದ ನೀಡುವರು
ಹೀಗೆ ಪ್ರತಿ ಪ್ರಗತಿಯೂ ಎಷ್ಟೋ ಸ್ನೇಹಿತರ ದೇಣಿಗೆ
ಅರ್ಪಿಸುವೆ ನಾ, ಅದಕವರಿಗೆನ್ನ
ಜತನದಿಂ ಮನದಿ ಮೊಗೆದ ಒಲುಮೆಯನ್ನು...

Monday, July 13, 2009

ಹಾರೈಕೆ

ಕರವಿಡಿದು ಪೊರೆವ ದೈವ,
ನೀ ಕರಮುಗಿದು ಕರೆದರೆ ಬಾರದಿರುವನೆ?
ಕೇಳಿದ ವರ ತಾನು ಕರುನಿಣಿಸದಿರುವನೆ?
ಯಶ ಸಿಗಲಿ ನನ್ನ ನಲ್ಮೆಯ ಸ್ನೇಹಿತನಿಗೆ..
ನಗುತಿರಲಿ ಎಂದಿಗೂ ಭರವಸೆಯ ನಗೆ..

Sunday, July 12, 2009

ಮರೆವಿರದ ಮಾತು

ದಿನಗಳೆಷ್ಟು ಕಳೆದರೂ,
ಮನಗಳೆಷ್ಟು ಮುರಿದರೂ,
ಕಳೆದ ಕಾಲವಷ್ಟೆ ಅಲ್ಲ,
ಬರಿಯ ಮಾತು ಅಷ್ಟೆ ಅಲ್ಲ,
ನೆನೆದ ಮನದ ದಾರಿ ಕೂಡ
ವಿಪ್ಲವಿಸದೆ ಸರಿ ಹೋಗದು.
ಇದುವೇ ನಿಜವು ಆದರೂನು,
ಭಾವ ಕುಸುಮ ಸೊರಗಿಯೂನು,
ಸಮಯದ ಕಳುವು ತಿಳಿದರೂನು,
ಮನವು ಬೆಳಕಗಾಣದು...