ಕನಸು ಹುಟ್ಟಾಕಿ ನೀ ಅಂದು ದೂರ ನಿಂದೆ
ಇಂದು ಎನ್ನ ಮನದಿನಿಯ ನೀ ಎನ್ನ
ನಿನ್ನ ಹೃದಯ ಬಂಧಿಯಾಗಿಸಿಹೆ-
ಒಂದಾಗಿ ನಿಂತಿಹೆ ಸಂಗಾತಿಯಾಗಿ,
ಕಾಲವೂ ಎನ್ನೊಡನೆ ಕೈ ಬೆಸೆವೆನೆಂದು.
ಬದುಕನಿನ್ನು ಒಲವಿನಿಟ್ಟಿಗೆ ಹೊತ್ತು ಕಟ್ಟಬೇಕಿದೆ,
ಭವಿಷ್ಯದ ಭಾಷ್ಯ ತುಂಬಿ ಬರೆಯಬೇಕಿದೆ
ಹೊಸ ಬಾಳ ಹೊಸ್ತಿಲು ದಾಟಿ ಆಗಿ,
ತೋರಣ ಕಟ್ಟುತ ಅದನು ಸಿಂಗರಿಸೆ ಬಾಕಿಯಿದೆ
ಶರಣು ಇನಿಯನೆ,
ಬದುಕಿನುದ್ದಕು ಒಡನಿರುವೆನೆಂದ ಭಾಷೆಗೆ
ಅಭಿವಂದನೆ ಎಮ್ಮ
ಕನಸ ಬೆಳಕಾಗಿಸಿ ನಡೆವೆವೆಂಬ ಚೈತನ್ಯಕೆ..