ಒಮ್ಮೆ ಸೋತ ಪ್ರೀತಿ ಅಂದು
ಗೆಲುವ ರೂಪ ಧರಿಸಲೆಂದೆ
ಮಿಡಿವ ಹೃದಯ ತಡಕಿದಂದು
ಮನದಿ ಮತ್ತೆ ಮೂಡಿ ಬಾರದೆ?
ಬಂದ ಪ್ರೀತಿ ಚೆಲ್ಲಿ ಸವಿಯ
ಕಹಿಯನೆಲ್ಲ ಸರಿಸಿ ತೊಡೆದು
ರಂಗವಲ್ಲಿ ಹಾಕಿದೆದೆಯ ಮರದಿ
ನಗುವಸಂತ ಚಿಗುರಲು
ಮಂಕು ಹಿಡಿದ ಮೋಡ ಕರಗಿ
ಮೆಲ್ಲ ಬರುವ ರವಿಯು ತಾನು
ಜ್ವಲಿಸಿ ಬೆಳಗಿ ನಭದಲೆಲ್ಲ
ಜಗಕೆ ಪ್ರೀತಿ ಸಾರಿ ತೋರ್ವನು..