Showing posts with label ಕನ್ನಡ ಸಿನಿಮಾ ವಿಮರ್ಶೆ. Show all posts
Showing posts with label ಕನ್ನಡ ಸಿನಿಮಾ ವಿಮರ್ಶೆ. Show all posts

Wednesday, January 30, 2019

Manikarnika - The Queen of Jhansi ✮✮✮

Jhansi Rani Lakshmibai, one of the key leaders of the Sepoy mutiny against British raj, strategically escaped twice from the British army, gave an arduous fight and was a nightmare to the Angrezi Sarkar until she chose her death by being a rebellion in a battle near Gwalior. 

Manikarnika Poster.jpg
As British officer Hugh Rose commented in his battle report, Jhansi Rani was the most dangerous of all Indian leaders. Our heart swells with pride when the story unveils on screen, and the battle tactics used at that time is commendable. Story is kept intact as much possible and the glorification of Rani as a personality seems apt in many frames.

This movie itself seems like a mark of respect for a leader's story which sprung through the hoodlum effort by British to erase her name in the History of India. The moment when Lakshmibai jumps off the fort of Jhansi while trying to save her heir  is enough to prove how outgoing and rebellious she could have been who survived battles and did not give in an opportunity for British for being captured alive. This sacrifice is what she believed will become a precedence and instilled an undying urge in Indians about Swaraj.

Now about the movie, Indian audience have watched Baahubali which has given us an excellent VFX that is lasting even after years of its release; we have watched Baajirao Mastani which featured Baajirao, a courtier of Jhansi empire; we have watched an excellent epos with a right mix of everything- VFX, story line, Direction, editing, scale, songs and performance in Padmaavat recently.

Manikarnika has everything, but lacks the same intensity of direction almost for the first 40 minutes. It is noticeable, had this movie been in the hands of a more experienced director, this could have been improvised here and there. I cannot conclude that the movie hasn't much to offer the audience as well, even in those first 40 minutes. But the direction seems a cracked spell at times during the movie which seems crackled further through poor VFX during few instances. Songs are amazing, which is as a matter of fact drew me to the theater. Shankar Ehsaan Loy are back with a bang, that has complimented Prasoon Joshi's lyrics so rightly. But what is lacking, is timing in the movie. Songs seem a bit too many in the movie which would have sounded even better if their gelling with the flow of the movie was better. Songs should always be rightly placed, and must compliment the movie rather than being an impediment to its flow, is what I believe.

Having said that, there is no doubt that the battle scenes, scenes with weaving battle strategics are commendable. Kangana Ranaut has proved yet again that she can mold into any character that comes to her in making. Supporting crew has done their job great. A one time watch, and lore to sing in bits for a long time, for sure.

✮✮✮File:The place from where Rani Lakshmibai jumped.jpg

Sunday, March 25, 2018

ರಾಜರಥ : ರಾಜಸ - ಸತ್ವ ಮತ್ತು ತಾಮಸ

★★★
ರಾಜರಥ - ಭಾಷೆಯಿರುವ ಮನಸ್ಸಿರುವ ಬಸ್ಸೊಂದು ನೋಡುವ ಮಂದಿ ಎದ್ದು ಶಿಳ್ಳೆ ಹೊಡೆಯಬೇಕೆನ್ನುವ ಹಾಗಿರುವ ಹೀರೋ ಎಂಟ್ರಿಗಾಗಿ ಕಾಯುತ್ತಿದೆ. ಈ ಬಸ್ಸಿನಲ್ಲಿ ಸಿಕ್ಕವರೆಲ್ಲಾ ಬೇರೆಲ್ಲೋ ಜೀವನದಲ್ಲಿ ಕಂಡವರೇ. ಒಬ್ಬೊಬ್ಬರು ಒಂದೊಂದು ಥರದವರು. ಗಡುಸೊಬ್ಬರಾದರೆ ಮತ್ಯಾರೋ ತಾಯಂಥಾ ಮನಸ್ಸಿನವರು. ಒಬ್ಬರು ಹೊಗಳುಬಾಕರಾದರೆ ಮತ್ತೊಬ್ಬರು ಸುಳ್ಳುಕೋರರು. ಇವರೆಲ್ಲರ ಮಧ್ಯೆ ಅಭಿ ಮತ್ತು ಮೇಘಾಳ ಪ್ರೇಮಕಥೆ. ನಾಲ್ಕು ವರ್ಷ ಒಟ್ಟಿಗೇ ಓದಿದರೂ ಹೇಳಿಕೊಳ್ಳಲಾಗದ ಅಭಿಯ ಪ್ರೀತಿ. 

ನವಿರು ಹಾಸ್ಯ - ಮುಚ್ಚಿಟ್ಟ ಪ್ರೀತಿಯ ಮಧ್ಯೆ ತೂಗಾಡುತ್ತ ಸಾಗುವ ಲೈಟ್ ಕಥೆಯ ಮಧ್ಯೆ ಮತ್ತೊಂದು ರಾಜಕೀಯ ಕಥೆಯ ಎಳೆ. ರಾಜಕೀಯದಲ್ಲಿ ಎಲ್ಲರೂ ದಾಳಗಳೇ. ಉರುಳಿಸಿದಂತೆ ಉರುಳುತ್ತಿಲ್ಲವೆಂದು ಅಂದುಕೊಳ್ಳುತ್ತಲೇ ರಾಜಕೀಯ ಚೌಕಾಬಾರದಲ್ಲಿ ಕಾಯಿಗಳು ನಡೆಯುತ್ತಲೇ ಹೋಗುವಂತೆ ಎಲ್ಲವೂ ಅಡವು ಇಲ್ಲಿ; ಕಾಲಕಾಲಕ್ಕೆ ಎಲ್ಲರೂ ತೊಡರು ಇಲ್ಲಿ. ರಜಸ್ಸು - ತಮಸ್ಸಿನ ರಾಜಕೀಯದ ನಡೆಯ ಮಧ್ಯೆ ಜನಜೀವನಕ್ಕಿರುವ ನಂಟು? ಎರಡೂ ಕಥೆಗಳಿಗಿರೋ ಬೆಸುಗೆ? ಅದು ತಿಳಿಯಲು ನೀವು ರಾಜರಥ ಹತ್ತಲೇಬೇಕು. ರಾಜರಥದಲ್ಲಿ ಬರುವ ಸಿನಿಕ್ಕು ಅಭಿಯ ಕಥೆಯಲ್ಲಿಲ್ಲ, ರಾಜಕಾರಣದ ತಿರುವುಗಳಲ್ಲಿದೆ. ಈ ಕುರಿತು ಏನೇ ಹೆಚ್ಚು ಹೇಳಲು ಹೋದರೂ it will be a spoiler. ನಿರೂಪನ ಕಥೆಗಿಂತಾ, ಆರ್ಯನ ಕಥೆಗಾಗಿಯೇ ರಾಜರಥ ಹತ್ತಬೇಕಿದೆ. 

ಹೊಸತಾದ ನಿರೂಪಣೆ, ಗಂಡಕ ಮಂಡೂಕ - ಹಾಡಿನಲ್ಲಿ ಅಷ್ಟಾಗಿ ಬಳಸದ ಕನ್ನಡ ಪದಗಳ ಬಳಕೆ ಯಾವ ಭಾಷೆಯ ಹಾಡೆಂದು ಪ್ರೇಕ್ಷಕನಿಗೆ ತಿಳಿಯುವಷ್ಟರಲ್ಲಿ ಹಾಡು ಮುಗಿದಿರುತ್ತದೆ ಅನ್ನುವುದೊಂದು ಬಿಟ್ಟರೆ, ಸಿನಿಮಾ ಮನೋರಂಜನೆಗೆ ಎಲ್ಲಿಯೂ ಕಡಿಮೆ ಮಾಡಿಲ್ಲ. ವಿನೂತನ ನಿರೂಪಣೆಯಿಂದಲೇ ಮನಸೆಳೆಯುವ ಚಿತ್ರ ಇದು. ವಿಶ್ವನಾಗಿ ಆರ್ಯ ನೆಗೆಟಿವ್ ಶೇಡ್ ನಲ್ಲಿ ಮಾಡಿರುವ ಅಭಿನಯ ಎಲ್ಲರಿಗಿಂತಲೂ ಹೆಚ್ಚು ಅಚ್ಚೋತ್ತುತ್ತದೆ. ಇನ್ನು ಭೋಜರಾಜ ಪಿಳಿಕುಳ ನ ಹಾಸ್ಯ, ವಿನಯಾ ಪ್ರಸಾದರ ಕೊಬ್ಬರಿ ಮಿಠಾಯಿ, ನೇಂದ್ರ ಬಾಳೆ ಪಚ್ಚಬಾಳೆ ಹಾಡು ನೆನಪಿನಲ್ಲುಳಿಯುತ್ತವೆ. ಅಂಕಲ್ ರವಿಶಂಕರ್ ಹಾಸ್ಯ, ಮಗದೊಂದು ಟ್ವಿಸ್ಟ್ ಗಾಗಿಯೇ ತುರುಕಲ್ಪಟ್ಟಿದ್ದಾರೆ ಅನ್ನಿಸದೆ ಇರದು. 

ಮೆಸ್ಸೇಜ್ ಇರುವ ಚಿತ್ರಗಳೆಲ್ಲಾ ಸೀರಿಯಸ್ ಸಿನಿಮಾಗಳೆಂದು ಬ್ರಾಂಡ್ ಆಗಬಾರದೆನ್ನುವ ಪ್ರಯತ್ನದಂತಿರುವ ಈ ಚಿತ್ರ ಮನೆಮಂದಿಯೆಲ್ಲಾ ಕೂತು ನೋಡಬಹುದಾದದ್ದು. ಕನ್ನಡದಲ್ಲಿ ಹಿಟ್ ಅನ್ನಿಸಿಕೊಳ್ಳುವುದಕ್ಕಿಂತಾ ತೆಲುಗಲ್ಲಿ ಹಿಟ್ ಆಗುತ್ತದೆನ್ನುವ instinct ಇದೆ. ಕಾದು ನೋಡೋಣ. A good watch.

Sunday, October 16, 2016

ನೀರ್ ದೋಸೆ :ಇಷ್ಟ್ ದಿನ ಆದ್ಮೇಲೆ ಮತ್ತೊಂದ್ ವಿಮರ್ಶೆ

Disclaimer: ಇಷ್ಟ್ ದಿನ ಆದ್ಮೇಲೆ ಈಗ್ಯಾಕೆ ನೋಡ್ಬೇಕನ್ನಿಸ್ತೋ ಗೊತ್ತಿಲ್ಲ. ಬಿಡುಗಡೆಯಾಗಿ ೬ವಾರ ಆದ್ಮೇಲೂ ಚಿತ್ರಮಂದಿರದ ತುಂಬಾ ಜನ ನೋಡಿ ಖುಷಿಯಾಯ್ತು. ನೋಡಿದೋರೆಲ್ಲ ಫೇಸ್ ಬುಕ್ಕಲ್ಲಿ "ನೋಡಿ. ಮಿಸ್ ಮಾಡ್ಬೇಡಿ" ಅಂತ ಹೇಳಿದ್ದು ಓದಿಯೇ ಹೋದ್ವೇನೋ. ಹುಡುಗಿಯೊಬ್ಬಳು ಐಟಂ ಸಾಂಗ್ ಥರ ಎಂಟರ್ಟೈನಿಂಗ್ ಸಂಭಾಷಣೆಗಳ ಸಿನಿಮಾ ಒಂದರ ವಿಮರ್ಶೆ ಬರೀತಿದ್ದಾಳೆಂದ ಮಾತ್ರಕ್ಕೇ ತಾವು ಪೂರ್ವಗ್ರಹಿಕೆ ಇಟ್ಟುಕೊಂಡು ನನ್ನ ಅಭಿಪ್ರಾಯ ಓದುವ ಅವಶ್ಯಕತೆಯಿಲ್ಲ ಅಷ್ಟೇ.  

2016 Kannada film Neer Dose poster.jpgನೀರ್ ದೋಸೆನೋ ಮಸಾಲ್ ದೋಸೆನೋ ಅಂತ ಟೈಟ್ಲೆ ಕನ್ಫ್ಯೂಸ್ ಆಗೋ ಮಟ್ಟಿಗಿನ ಸಂಭಾಷಣೆ. ಓಪನಿಂಗ್ ದೃಶ್ಯಗಳಲ್ಲೇ ಪಕ್ಕಾ ದ್ವಂಧ್ವಾರ್ಥಗಳು. ಆದ್ರೆ ದತ್ತಣ್ಣ-ಜಗ್ಗೇಶ್ ಸಿನಿಮಾ ನೋಡ್ತಾ ಹೋದಹಾಗೆಲ್ಲಾ ಇಷ್ಟವಾಗ್ತಾ ಹೋಗ್ತಾರೆ. "ಸಪೂರ ಕಟಿ" ನೋಡ್ತಾ ಇದ್ಯಾಕಿಂಥಾ ಪಾತ್ರಕ್ಕೆ ಹರಿಪ್ರಿಯಾ ಒಪ್ಪಿದ್ರೋ ಅನ್ನಿಸುತ್ತೋ, ಅದೇ ಪಾತ್ರದ ಪ್ರಾಮುಖ್ಯ ಮುಂದೆ ಅರಿವಾಗ್ತಾ ಹೋಗ್ತದೆ. ಸಾಧಾರಣ ಜನರನ್ನ ನೀರ್ ದೋಸೆಯ ಎಳೆಯಿಂದ ಕಟ್ಟಿಕೊಟ್ಟಿರುವ ಚಿತ್ರ ಇದು. ಎಷ್ಟು ನಗಿಸುತ್ತೋ ಅಷ್ಟೇ ಒತ್ತರಿಸುವ ಫೀಲ್ ತರುವ ನಾಲ್ಕಾದರೂ ಸಂದರ್ಭಗಳು. ದತ್ತಣ್ಣ ತನ್ನ ಅಕ್ಕನನ್ನು ನೆನೆಸಿಕೊಳ್ಳುವ, ಅರ್ಥಮಾಡಿಕೊಂಡಿರುವ, ಕರ್ಮಗಳನ್ನು ನೆರವೇರಿಸುವ ಪರಿ-touchy ಮತ್ತು ಅರ್ಥಪೂರ್ಣ. ಜಗ್ಗೇಶ್ ಗೆ ತನ್ನ ತಂದೆಯೊಡನಿರುವ ಭಾವದ ನಂಟೂ ತಂದೆ-ಮಗನ ಮಧ್ಯೆ ಅಪರೂಪದ್ದು. ತಂದೆಯ ಪುಟ್ಟಪುಟ್ಟ ಆಸೆಗಳನ್ನೂ ಮರೆಯದೆ ನೆಮ್ಮದಿಯಾಗಿ ಕೊನೆ ಕ್ಷಣಗಳನ್ನು ಕಳೆವಂತೆ ಮಾಡುವುದು, ಕ್ಯಾಬರೆ ಡ್ಯಾನ್ಸರ್ ಹರಿಪ್ರಿಯಾಳ ಗತವನ್ನು ಕೆದಕದೆ ಆ ಸ್ವೇಚ್ಛೆಯ ಪಾತ್ರಕ್ಕೂ ನೀಡಿರುವ ಮಾನವೀಯ ಮೆರುಗು, ಮೂಲಾ ನಕ್ಷತ್ರದಲ್ಲಿ ಹುಟ್ಟಿ ಮೂವತ್ತಾರಾದರೂ ಮದುವೆಯಾಗದೆ ಉಳಿದು ಜಗ್ಗೇಶ್ ನನ್ನು ಇಷ್ಟಪಡುವ ಸುಮನ್ ಹಾಗು ಏನೇ ಆದರೂ ಹೆಣದ ಗಾಡಿಯ ಚಾಲಕನಿಗೆ ಮದುವೆ ಮಾಡಲಿಚ್ಛಿಸದೆ ಜಗ್ಗೇಶ್-ಹರಿಪ್ರಿಯಾ-ದತ್ತಣ್ಣನ ಗುಂಪು ಕಂಡು ಗಲಿಬಿಲಿಯಾಗಿ ಹೌಹಾರುವ ಅವಳ ಅಪ್ಪ - ಎಲ್ಲವೂ ಸರಳ ಸಂಬಂಧಗಳ ಜಟಿಲ ವ್ಯಕ್ತಿತ್ವಗಳಿಂದೇರ್ಪಡುವ ನವಿರು ಹಾಸ್ಯದ ಕಥೆ-ಅಗತ್ಯ ದ್ವಂದ್ವ ಸಂಭಾಷಣೆ. ಕಳೆದು ಹೋಗ್ತಿರೋ ಮಾನವೀಯ ಸಂಬಂಧಗಳನ್ನ, ಬದುಕಿನಲ್ಲಿ ಹತ್ತಿರವಾಗುವ ಜನಗಳನ್ನ ಹೇಗೆ ಸಹಜವೆನ್ನುವಂತೆ, ಸಂಬಂಧಗಳ ಮೌಲ್ಯ ಹಾಸ್ಯದಲ್ಲೂ ಉಳಿಸಿಕೊಂಡು ಬದುಕೋ ಸರಳತೆ ತೋರಿಸಿಕೊಡೋ ಸಿನಿಮಾ ಇದು.

ಕಥೆಯ ಓಘ ಒಂದೇ ಸಮನಾಗಿಲ್ಲ. ಕೆಲವು ಕಡೆ ಅನಾವಶ್ಯಕವೆನ್ನಿಸುವಷ್ಟು ಉದ್ದದ ದೃಶ್ಯಗಳು. ಆದರೆ ಎಲ್ಲಕಡೆಯೂ ಸಿನಿಮಾ ಪ್ರೇಕ್ಷಕರ ಆಸಕ್ತಿ ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ. ನಿರೂಪಣೆಯೇ ಈ ಚಿತ್ರದ ಬಂಡವಾಳ. ಅಲ್ಲಿಗೆ ಕಥೆಯ ಪೂರ್ಣ ಹೆಚ್ಚುಗಾರಿಕೆ ವಿಜಯ ಪ್ರಸಾದ್ ಗೇ ಸಲ್ಲಬೇಕು. ದತ್ತಣ್ಣ ಅಂತೂ ಸಿಂಪ್ಲಿ ಸುಪರ್ಬ್. ಕಲಾವಿದರೆಲ್ಲರೂ ತಂತಮ್ಮ ಪಾತ್ರಗಳಲ್ಲಿ ಛಾಪೊತ್ತುತ್ತಾರೆ.

ಕೊನೆಗಂತೂ ನೀರ್ ದೋಸೆ ನೋಡಿದೋರ್ಯಾರಿಗೂ ಸಿನಿಮಾ ನಿರಾಸೆ ಅಂತೂ ಮಾಡೋದಿಲ್ಲ. ಮುಜುಗರ ತರಿಸುವ ಸಂಭಾಷಣೆಗಳೆಲ್ಲಾ ಕೊನೆಕೊನೆಗೆ ಇವು ಈ ಸಿನಿಮಾಗೆ ಅವಶ್ಯಕ ಅನ್ನಿಸುವಂಥಾ ಚಿತ್ರ. ನನ್ನ ಹಾಗೆ A ಸಂಭಾಷಣೆಗಳು ಅನ್ನುವ ಕಾರಣಕ್ಕೇ ಇನ್ನೂ ನೋಡದಿರೋ ಮಂದಿ ಇದ್ರೆ, ಆದಷ್ಟ್ ಬೇಗ ನೋಡಿ ಬನ್ನಿ. ಶುರುವಿನಲ್ಲಿ ಅತಿರೇಕ ಅನ್ನಿಸಿದರೂ ಸಿನಿಮಾ ಇಷ್ಟವಾಗದಿರಲು ಕಷ್ಟಸಾಧ್ಯ.

Monday, May 23, 2016

U-Turn - Kannada Movie Review


For people who are unaware, U-turn is a Pavan Kumar directed Kannada movie with English titles and subtitles. Well, that was a spoiler, I understand completely! Pun apart, it didn’t feel like I was watching a Kannada movie, though; since it has more English than needed. The director hasn’t let his grip loose anywhere which is a huge plus for the movie. Shraddha Srinath as an internist in Indian Express and Roger Narayan as the Sub-Inspector are the prime catch in the movie. Roger Narayan has in fact raised the hopes of the audience a lot, and definitely, I will look forward to his movies now. Dilip Raj and Radhika Chetan impress the viewers with however smaller their casting is. The story is a simple one, but the credit goes to Pavan Kumar again, in how nice he has woven the parallel scenes and put it all together in a rather curious way. But after half an hour of the movie, you can actually guess what is happening, and the events that you imagined unveils to be on screen. To be true, it doesn’t bore you anywhere at all and keeps you pinned to your seat.

It is an eye-opener for many thousands everyday, who jump signals or take U-turns where you are not supposed to. In a touchy story, the director shows you the possible effects of over-riding the traffic rules. It can be watched by any non-Kannadiga owing to the amount of English and its subtitles. The movie is seemed to be made for non-Kannadigas or at least people who are here and cannot understand Kannada sufficiently. A must watch for all Bangaloreans, I repeat.

Pick up courage and a few seconds of your precious busy time to warn the fellow peer bikers and drivers on the road if they are over-riding traffic rules. A simple signal jump can be disastrous if another person signal jumps from the unexpected corner. Take care of your lives while on the road, and care, for silly deeds can cost others’ lives too. That’s what the movie is about. In a thrilling way, though.

Happy watching!
P.S: I didn’t feel this movie requires a Kannada review J Hence, it’s all English.

Saturday, March 12, 2016

ಕಿರಗೂರಿನ ಗಯ್ಯಾಳಿಗಳು : ಸಿನಿಮಾ V/s ಕಥೆ

ಬಯಲುಸೀಮೆಯ ಪುಟ್ಟದೊಂದು ಹಳ್ಳಿ ಕಿರಗೂರಿನ ದೆವ್ವದಂಥಾ ಗಾಳಿಯೊಂದಿಗೆ ಶುರುವಾಗುವ ಚಿತ್ರಣ. ಭಯಂಕರ ಗಾಳಿಗೆ ಬುಡ ಕಿತ್ತು ಬೀಳುವ ದೊಡ್ಡ ಮರವಿದೆ- ಗಾಳಿಗಿಂತಲೂ ಜೋರಾದ ಗಯ್ಯಾಳಿಗಳ ಬೈಗುಳಗಳಿವೆ-ಥಳಿಸುವ ಹೆಂಡಂದಿರಿದ್ದಾರೆ - ಸರ್ಕಾರೀ ವಾಹನ ಬಂತೆಂದ ಕೂಡಲೇ ಅದ್ಯಾವ ಜನವೆಂದು ಕೂಡ ನೋಡದೆ ಪೇರಿ ಕೀಳುವ ಜನರಿದ್ದಾರೆ- ಹೆಣವೊಂದಕ್ಕೆ 3 ದಿನ ಇಲಾಜೆಂದು ದುಡ್ಡು ವಸೂಲಿ ಮಾಡುವ ವೈದ್ಯನಿದ್ದಾನೆ-ದೂರದೂರುಗಳಿಂದಲೂ ಹುಳುಕು ತೆಗೆಸಿಕೊಳ್ಳಲು ಬರುವ ಜನರಿದ್ದಾರೆ-ನಗೆಬುಗ್ಗೆ ಹರಿಸುವ ರೋಚಕ ಪಂಚಾಯಿತಿಯಿದೆ. ಇದರಲ್ಲಿ ಬಯಲುಸೀಮೆಯ ಜನರ ಮುಗ್ಧತೆ ಇದೆ- ಆ ಮುಗ್ಧತೆಯನ್ನು ದುರುಪಯೋಗಿಸಿಕೊಳ್ಳುವವರಿದ್ದಾರೆ- ಮಕ್ಕಳಿಗಾಗಿ ಕಾಯುವ, ಆದರೆ ಹೆಂಡಿರೆಂದರೆ ದುಡಿಯುವ ಎತ್ತುಗಳಂತೆ ಕಾಣುವ, ಸಂಜೆಯಾದರೆ ಸಾರಾಯಿ ಮೆದ್ದು ಓಲಾಡುವ ಗಂಡದಿರಿದ್ದಾರೆ- ಸಬ್ಸೀಡಿ ಆಸೆ ತೋರಿಸಿ ತಾನು ಹಚ್ಚಗಾಗುವ ಗ್ರಾಮಸೇವಕನಿದ್ದಾನೆ-ನಂಬಿಕೆಗೆ ಕಲ್ಲು ಹಾಕಿ ಉಪಾಯವಾಗಿ ಸ್ಟೇಷನ್ನಿಗೆ ಕರೆಸಿ ಥಳಿಸುವಂತೆ ಮಾಡುವ ಪೇದೆಯಿದ್ದಾನೆ-ಮುಗ್ಧ ಜನರ ಮೂಢ ನಂಬಿಕೆಗಳನ್ನು ಆಧರಿಸಿರುವ ಮಂತ್ರವಾದಿಯಿದ್ದಾನೆ-ಎಲ್ಲರೂ ಸೇರಿ ಬಿತ್ತುವ ಜಾತಿ ಜಗಳಗಳಿವೆ.

ತೇಜಸ್ವಿಯವರ ಕಥೆಯೊಂದು ತೆರೆಯ ಮೇಲೆ ಬರ್ತಿದೆ ಅಂತ ತಿಳಿದ ಕೂಡಲೇ ಬಿಡುಗಡೆಗೆ ಕಾಯಲು ಮೊದಲ್ಗೊಂಡವರಲ್ಲಿ ನಾನೂ ಒಬ್ಬಳು. Trailor ಬರುವ ಮುಂಚೆಯೇ ಕಥೆಯ ಪ್ರಸ್ತುತತೆಯ ಬಗ್ಗೆ, ಕಥೆಯನ್ನು ತೆರೆಯ ಮೇಲೆ ಬಿಡಿಸುವಲ್ಲಿನ ಸಾಧ್ಯಾಸಾಧ್ಯತೆಗಳ ಬಗ್ಗೆ ತುಂಬಾ ಸಂಶಯ ಪಟ್ಟಿದ್ದೆ. Trailorನಲ್ಲಿನ ಸಾಮ್ಸನ್ ಹಿಂದಿನ ಪೀಚಲು ಹಲಸಿನ ಮರ ನೋಡಿ ಇಷ್ಟೇನಾ ಅಂತ ನಿಡುಸುಯ್ದಿದ್ದೆ. ಕಥೆಯ ಮುಖ್ಯ ಭೂಮಿಕೆಯಲ್ಲಿರುವುದೇ ಒಂದು ಹೆಬ್ಬಲಸಿನ ಮರ. ಅದೂ, ತಿರುಪಿಕೊಂಡಿರುವ ಕಾಂಡದ ಕಡಿಯಲಾಗದ ಹೆಮ್ಮರ. ಕಾಲ್ಪನಿಕ ಸನ್ನಿವೇಶವಾದರೂ ತೆರೆಯ ಮೇಲೆ ತರುವುದು ಸಾಧ್ಯವಿರಲಿಲ್ಲವಾ ಅಂತ ಅನ್ನಿಸಿತ್ತು. ಏರಿಗಳೆಲ್ಲಾ  ಬರಡಾಗಿ ಆಮೇಲೆ ಎಚ್ಚೆತ್ತು ನೆಟ್ಟುಕೊಂಡಿರುವ ನೀಲಗಿರಿ ಮರಗಳ ಮಧ್ಯದ ಬಯಲುಸೀಮೆಯ ಹೊಲಗಳಲ್ಲಿ ಅಷ್ಟು ಭಾರೀ ಮರ ಬಂದೀತಾದರೂ ಎಲ್ಲಿಂದ, ಅಂದುಕೊಂಡು ಸುಮ್ಮನಾಗಿದ್ದೆ.

ನಿರ್ದೇಶಕಿ ಸುಮನಾ ಕಿತ್ತೂರು ಕಥೆಯನ್ನು ತೆರೆಗೆ ತರುವಲ್ಲಿ ಬಹುತೇಕ ಗೆದ್ದಿದ್ದಾರೆ. ಹಲವಾರು ಹಳ್ಳಿಗಳಲ್ಲಿ ಚಿತ್ರೀಕರಿಸಿ ತೇಜಸ್ವಿಯವರು ಕಟ್ಟಿಕೊಟ್ಟ ಕಲ್ಪನೆಯ ಕಿರಗೂರನ್ನು ಚಿತ್ರವಾಗಿ ತೋರಿಸಿದ್ದಾರೆ. ಅಗ್ನಿಶ್ರೀಧರ್ ಚಿತ್ರಕಥೆ wonderful. ಪ್ರತಿಯೊಬ್ಬ ಪಾತ್ರಧಾರಿಯೂ ಪಾತ್ರದೊಳಕ್ಕೆ ತಮ್ಮನ್ನು ಎರಕ ಹೊಯ್ದುಕೊಂಡಷ್ಟು ದಿವಿನಾಗಿ ಅಭಿನಯಿಸಿದ್ದಾರೆ. ಚಿಕ್ಕ ಪಾತ್ರವಾದರೂ ಪ್ರಕಾಶ್ ಬೆಳವಾಡಿಯವರ ಪಾತ್ರ ಹಾಗು ಸನ್ನಿವೇಶ ನೆನಪಿನಲ್ಲುಳಿಯುತ್ತದೆ. ಶ್ವೇತರವರು ಅಭಿನಯ ಹಾಗು ಆ language dialect ನಿಂದ ದಾನಮ್ಮನಾಗಿ,  ಮಾತಿಲ್ಲದಿದ್ದರೂ ಕಾಡುವ ಪಾತ್ರವಾಗಿ ಸೋನು, ಮರ ಕುಯ್ಯುವುದಕ್ಕಿಂತ ಹೆಚ್ಚಿನ ಬೊಗಳೆ ಕುಯ್ಯುವ ಸ್ಯಾಮ್ಸನ್ ಆಗಿ ಯೋಗಿ ಕಾಡುವ ಛಾಪೊತ್ತಿದ್ದಾರೆ. ಕಾದಿರುವವರ ಕುತೂಹಲಕ್ಕೆ ತಣ್ಣೀರೆರೆಚುವಂತೆ multiplexಗಳಲ್ಲಿ ಒಂದು ಮತ್ತೊಂದು show. ದೃಶ್ಯವೊಂದರ ಮಧ್ಯದಲ್ಲಿ ನೋಡುತ್ತಿರುವವರೆಲ್ಲಾ ಛೆ ಕಟ್ ಮಾಡಿದ್ದಾರೆ ಅಂತ ನಿಡುಸುಯ್ಯುವ ಮಟ್ಟಿಗೆ ಹಳ್ಳಿಗಾಡಿನ ಬೈಗುಳಗಳು mute. ಕಥೆಯನ್ನೋದಿ ಮನದಲ್ಲಿ ಕಟ್ಟಿಕೊಂಡ ಚಿತ್ರಕ್ಕಿಂತ ಚಿಕ್ಕ ಹೆಬ್ಬಲಸಿನ ಮರ. ಮೂಲ ಕಥೆಯಲ್ಲಿಲ್ಲದಿರುವ ಎರಡು ಪಾತ್ರ ಹಾಗು ಕೆಲವು ಸನ್ನಿವೇಶಗಳ ಜೋಡಣೆ. ಮೊದಲರ್ಧಕ್ಕಿಂತ ಉಳಿದರ್ಧದ ಉತ್ತಮ ಓಘ- ಇಷ್ಟೆಲ್ಲಾ ನ್ಯೂನತೆಗಳಿದ್ದರೂ ನೋಡುಗರನ್ನು ನಕ್ಕು ಸಾಕಾಗಿಸುವ ಚಿತ್ರ.
ಗಯ್ಯಾಳಿಗಳ  ಬಿಡುಗಡೆಗೂ ಮುನ್ನ ಮತ್ತೊಮ್ಮೆ ಪೂರ್ಣಚಂದ್ರ ತೇಜಸ್ವಿಯವರ ಕಥೆ ಓದಿಕೊಂಡು ತಯಾರಾಗಿದ್ದು ಸಾರ್ಥಕವಾಯ್ತು ಬಿಡಿ J

Monday, September 14, 2015

ಆಟಗಾರ : Movie Review

ಅಗಾಸ್ಥಾ ಕ್ರಿಸ್ಟಿ ರಚಿಸಿರುವ "And there were none" ಕೃತಿಯನ್ನು 1965ರಲ್ಲಿ ಹಿಂದಿಯ "ಗುಂನಾಮ್" ಚಲನಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಮೆಹಮೂದ್ ನ "ಹಮ್ ಕಾಲೇ ಹೈ ತೋ ಕ್ಯಾ ಹುವಾ" "ಗುಂನಾಮ್ ಹೈ ಕೋಯೀ" ಹಾಡುಗಳು ಇಂದಿಗೂ ಜನಪ್ರಿಯ. ಅದೇ ಸಿನಿಮಾದ ಇಂದಿನ ಕಾಲದ ಅವತರಣಿಕೆ ಈ "ಆಟಗಾರ" ಅನ್ನಿಸದೆ ಇರಲಾರದು.  
ಇಲ್ಲಿ ಜೀವನದ ಬೇರೆ ಬೇರೆ ಸ್ಥರಗಳಿಂದ ಬಂದ 10 ಜನರನ್ನ Big Boss ಮಾದರಿಯ ಆಟಗಾರ showಗಾಗಿ ಕರವಾರದಾಚೆಯ ಪುಟ್ಟ ದ್ವೀಪವೊಂದಕ್ಕೆ ಬಿಡಲಾಗುತ್ತದೆ. ಮೊಬೈಲ್ ಆಗಲೀ, ಇನ್ಯಾವುದೇ ಉಪಕರಣವನ್ನಾಗಲಿ ಜೊತೆಗೊಯ್ಯಲು show ಸಮ್ಮತಿಸಿರುವುದಿಲ್ಲ. ಮೊದಲ ದಿನ ನಗು, ಆಟಗಳಲ್ಲಿ ಕಳೆದುಹೋಗುತ್ತದೆ. ನಂತರ ಸರಣಿ ಕೊಲೆ ಶುರುವಾಗುತ್ತದೆ. ತಮ್ಮದೇ ನೆರಳಿಗೂ ಭಯಪಡುವ ಎಲ್ಲರೂ ಒಬ್ಬರನ್ನೊಬ್ಬರು ಅನುಮಾನಿಸುತ್ತಾರೆ. ಅವರನ್ನುಳಿದು ದ್ವೀಪದಲ್ಲಿ ಇರುವವರು ಯಾರು? ಕೊಲೆಗಾರ ಹೊರಗಿನವನೋ? ಒಳಗಿನವನೋ? ಬೇರೆ ಬೇರೆ ಜೀವನ ಸ್ಥಾಯಿಗಳಿಂದ ಬಂದವರೆಲ್ಲರೂ ಕೊಲೆಯಾಗಲು ಸಮಾನ ಪ್ರೇರಣೆ ಇರಬೇಕಲ್ಲವೇ? ಯಾರು ಆ common ಶತ್ರು? ಯಾಕಾಗಿ ಕೊಲೆಗಳು?- ಹುಡುಕುತ್ತ ಹೋಗುವುದೇ ಕಥೆ.


ಅನೂಪ್ ರ  ಸಂಗೀತ ಇಂಪಾಗಿದೆ. ನಿರ್ದೇಶಕ ಚೈತನ್ಯರ ಪ್ರಯತ್ನ ಶ್ಲಾಘನೀಯ. ಸತ್ಯ ಹೆಗ್ಗಡೆ ಯವರ ಛಾಯಾಗ್ರಹಣ ಈ ಸಿನಿಮಾದ ಜೀವಾಳ. ಹೆಚ್ಚು ಬಂಡವಾಳ ಬೇಡದೇ ಇರುವ ಆಕ್ಷನ್ ಹಾಗು ಕಥೆ ಆಟಗಾರನದ್ದು. ಚಿರಂಜೀವಿ ಸರ್ಜಾ, ಪರೂಲ್, ಮೇಘನಾ ಸುಂದರ್ ರಾಜ್, ಅನು ಪ್ರಭಾಕರ್ ಎಲ್ಲರ ಅಭಿನಯವೂ ಪುಟಕ್ಕಿಟ್ಟ ಹಾಗಿದೆ. ಸ್ವಲ್ಪ ಮಾತ್ರ ಇರುವ ಅನಂತ್ ನಾಗ್ ರ ಪಾತ್ರ ಕಥೆಗೊಂದು ಜೀವ ತುಂಬುತ್ತದೆ. ರವಿಶಂಕರ್ ತಮ್ಮ ಇನ್ಸ್ಪೆಕ್ಟರ್ ಪಾತ್ರಕ್ಕೆ ಒಪ್ಪುವಂಥಾ ಸಂಭಾಷಣೆ ಹಾಗು ಅಭಿನಯದಿಂದ ಮನಸೆಳೆಯುತ್ತಾರೆ.

One time must watch ಸಿನಿಮಾ. ಎಲ್ಲರೂ ಅಡಗಿರುವ ಕ್ರೌರ್ಯದ ಪ್ರತೀಕವೇ. ಆ ಹತ್ತು ಜನರಲ್ಲೊಬ್ಬರ ಮನದಾಳದಲ್ಲಿ ಎಲ್ಲೋ ನಮ್ಮನ್ನು ನಾವು ನೋಡಿಕೊಳ್ಳಬಲ್ಲೆವೇನೋ. ಅಪರೂಪಕ್ಕೆ ನೋಡಿದ ನಂತರವೂ ಆಲೋಚನೆಗೆ ದೂಡುವ, ಕಾಡುವ ಕಥೆಗಳ ಸಿನಿಮಾಗಳಲ್ಲಿ ಇದೂ ಒಂದು.


Thursday, August 6, 2015

ರಂಗಿತರಂಗ: ವಿಮರ್ಶೆಯಲ್ಲ; ಮೆಚ್ಚುಗೆ

ಬಣ್ಣದ ಅಲೆಗಳು- ರಂಗಿತರಂಗ. ತುಳುನಾಡ ಸೀಮೆಯ ಮಳೆಯಲ್ಲಿ ತೊಳೆದು ಬಣ್ಣ ಬಳಿದಂತಿರುವ ಹಚ್ಚ ಹಸಿರು, ಬ್ರಹ್ಮರಾಕ್ಷಸ ವಾಸವಾಗಿರುವ ನಂಬಿಕೆ ಉಳಿಸಿಕೊಂಡ ಆ ಸಿರಿ ಮೊಳಕೆಗಳು ಇಣುಕುವ ತಳಗಾಣದ ಬಾವಿ, ಯಕ್ಷಗಾನದ ಸದ್ದು -ಇವುಗಳಲ್ಲಿ ಅದ್ದಿ ತೆಗೆದ ಸವಿ ಈ ಚಲನಚಿತ್ರಕ್ಕೆ. ಅನುಪ್ ಭಂಡಾರಿ ಇದರ ನಿರ್ದೇಶನ ಮತ್ತು ಹಾಡುಗಳ ಸೂತ್ರಧಾರರು. ಈ ಇಲೆಕ್ಟ್ರಾನಿಕ್ ಯುಗದಲ್ಲಿ ನಾವೆಲ್ಲಾ ಮರೆತೇ ಬಿಟ್ಟಿರುವ Post- ಕರೆವ-ಓಲೆ --ಕರೆಯೋಲೆಯ ಬಗ್ಗೆ ಹಾಡು ಕೇಳಲು ಇಂಪು- ಅರ್ಥಗರ್ಭಿತ. ಅರ್ಥ ಕಳೆದುಕೊಂಡರೂ ಜನಪ್ರಿಯವಾಗಲೇಬೇಕೆಂಬ ಹಟಕ್ಕೆ ಬಿದ್ದವರಂತೆ, ಮನಸ್ಸಿಗೆ ತೋಚಿದ್ದನ್ನೆಲ್ಲಾ ಗೀಚಿ ಅದೇ ಸಾಹಿತ್ಯವೆನ್ನುವ ಪರಮ ಅಸಹ್ಯಿಗಳ ಮಧ್ಯೆ ಅನುಪ್ ಭಂಡಾರಿಯ ಸಾಹಿತ್ಯ (ಉದಾಹರಣೆ:"ಕರದಲ್ಲಿ ಕಲಮಾ ಹಿಡಿದು ಕರಿಶಾಹಿ ಬರೆದೋಲೆ") ತೊಳೆದ ಮುತ್ತಿನಂತೆ ಕಾಣುವುದು ಸತ್ಯ. ಇತರೆ ಹಾಡುಗಳೂ ಮತ್ತೆ ನೆನೆಸಿಕೊಂಡು ಗುನುಗುವಂತಿವೆ.

ರಂಗಿತರಂಗ ಅನ್ನುವುದು ಅನಷ್ಕು ಹೆಸರಿನಲ್ಲಿ ಕಥಾನಾಯಕ ಹೊರತರಬೇಕೆಂದಿರುವ ಕಾದಂಬರಿ. ಕಮರೊಟ್ಟು ಅನ್ನುವ ನಾಲ್ಕಾರು ಮನೆಗಳ ಊರಿಗೆ ಹೆಂಡತಿಯೊಂದಿಗೆ ಬರುವ ನಾಯಕ ಅಲ್ಲಿನ ಪೋಸ್ಟ್ ಮಾಸ್ಟರ್ ಮತ್ತು ಹೈಸ್ಕೂಲ್ ಹೆಡ್ ಮಾಸ್ತರರೊಂದಿಗೆ ಗೆಳೆತನ ಮಾಡುತ್ತಾನೆ. ಬಂದ ಕ್ಷಣದಿಂದಲೂ ಅಧೀರಗೊಳಿಸುವ ಘಟನೆಗಳು ಕಮರೋಟ್ಟುವಿನಲ್ಲಿ ನಡೆಯುತ್ತಲೇ ಇರುತ್ತವೆ. ಆ ಗ್ರಾಮದಲ್ಲಿ ಇರುವ ಪ್ರಭಾವಿ ವ್ಯಕ್ತಿಗಳ ವಿರೋಧವನ್ನೂ ನಾಯಕ ಗೌತಮ್ ಎದುರಿಸಬೇಕಾಗುತ್ತದೆ. ಮುಂದೇನಾಗುತ್ತೆ? - ನೋಡಿ ತಿಳೀರಿ. 

ಇತ್ತೀಚಿಗೆ ಬಂದ ಭಯ-ಭೀಭತ್ಸ ಚಿತ್ರಗಳಲ್ಲಿ ರಂಗಿತರಂಗ ಅತ್ಯುತ್ತಮ. ನಿರೂಪ್ ಭಂಡಾರಿ ಸಹಜ ಅಭಿನಯದಲ್ಲಿ ಗೆದ್ದಿದ್ದಾರೆ. ಮೊದಲರ್ಧದಲ್ಲಿ ರಾಧಿಕ ಚೇತನ್ ಅಭಿನಯ ಇಷ್ಟವಾದರೆ ಉಳಿದರ್ಧದಲ್ಲಿ ಅವಂತಿಕಾ ಶೆಟ್ಟಿ ಮನಗೆಲ್ಲುತ್ತಾರೆ. ಅರವಿಂದ್ ರಾವ್ ಖಡಕ್ ಮತ್ತು corrupt ಪೋಲಿಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ಸಾಯಿಕುಮಾರ್ ನಟನೆಯ ಬಗ್ಗೆಯಂತೂ ಎರಡು ಮಾತಿಲ್ಲ. ಸಂವೇದನಾಶೀಲ ಸಾಹಿತ್ಯ ಹಾಗು ನಟನೆ ಈ ಚಿತ್ರದ ಜೀವಾಳ. ಪ್ರೇಕ್ಷಕರನ್ನು ದೃಶ್ಯಗಳು ಕೆಲವಾರು ಬಾರಿ ಬೆಚ್ಚಿ ಬೀಳಿಸುತ್ತವೆ.

ರಂಗಿತರಂಗಕ್ಕೆ IMDB ranking 9.5. ಈ ವರ್ಷದ ಅತ್ಯುತ್ತಮ ranking. ಬಾಹುಬಲಿ ತೆರೆಗೆ ಬರುವ ವಾರದ ಮುಂಚೆಯಷ್ಟೇ ಈ ಹೊಸ ಮುಖಗಳ ಚಿತ್ರ ಬಂದದ್ದು ಹಲವಾರು ಜಿಲ್ಲಾಕೆಂದ್ರಗಳಿಂದಲೂ ರಂಗಿತರಂಗ ಎತ್ತಂಗಡಿಯಾಗಲು ಕಾರಣವಾಗಿದೆ. ಬಾಹುಬಲಿಯ ನಂತರ ಬಜರಂಗಿ ಭೈಜಾನ್, ಇನ್ನು ಮುಂದೆ ಶ್ರೀಮಂತುಡು ಗುಂಗು, ಹೊಸ ಕನ್ನಡ ಚಿತ್ರಗಳ ಮಳೆ. ಇಷ್ಟೆಲ್ಲ ಸಹಿಸಿಕೊಂಡೂ ಜನರ ಬಾಯಿಂದ ಬಾಯಿಗೆ ಹರಡುತ್ತ, ಮಾಲ್ ಗಳಲ್ಲಿ ಇರುವ ಎರಡು ಮತ್ತೊಂದು ಅವಕಾಶದಲ್ಲಿ ಪ್ರತಿ ಪ್ರದರ್ಶನಕ್ಕೂ ಹೌಸ್ ಫುಲ್ ಕಾಣುತ್ತ ನಡೆಯುತ್ತಿರುವ ರಂಗಿತರಂಗಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಅಂತ ಹಾರೈಸೋಣ. ಕನ್ನಡ ಸಿನಿಮಾಗಳೆಂದರೆ ತುಚ್ಛವಾಗಿ ಕಾಣುವ ಮಂದಿ ನೋಡಲೇ ಬೇಕಾದ ಚಿತ್ರ. ಮೆಚ್ಚದಿರಲು ಸಾಧ್ಯವಾದರೆ ಮಾತ್ರ ಮಾತಾಡಿ... 