Tuesday, May 6, 2025
ಬರೆಯಬೇಕು ಅನ್ನಿಸಿತು. ಬರೆದುಕೊಂಡೆ!
Tuesday, May 31, 2022
ಕುಡಿಯರ ಕೂಸು - ಶಿವರಾಮ ಕಾರಂತ
ಏಲಕ್ಕಿ ಸೊಂಪಾಗಿ ಬೆಳೆಯುವ ಮಲೆಯ ಮೂಲ ನಿವಾಸಿಗಳೂ, ಅಲ್ಲಿನ ಮಲೆಯನ್ನು ಕೊಳ್ಳುವ ಧಣಿಗಳಿಗೆ ವಿಧೇಯರೂ ಆಗಿರುವ ಕುಡಿಯರು ಬಯನಿಯ ದಿಂಡು ತಿನ್ನುತ್ತಲೂ, ಗೆಡ್ಡೆ ಗೆಣಸು ಸೇವಿಸುತ್ತಲೂ, ಹರಿಯುವ ಜೀವನದಿಯ ತೊರೆಯಲ್ಲಿ ಮೀನು-ಏಡಿಗಳನ್ನು ಹಿಡಿದು, ಬೇಟೆಯಾಡಿ ಜೀವನ ಮಾಡಲು ಬಲ್ಲರು. ಅವರ ಇತರೆ ಅವಶ್ಯಕತೆಗಳಿಗೆ ಮಲೆಯ ಧಣಿಗಳಿಂದ ಬರುವ ಹಚ್ಚಡ, ಉಪ್ಪು, ಚಿಮಣಿ ಎಣ್ಣೆಯೇ ಸಾಕೆನ್ನುವಂಥವರು.
ಕಲ್ಲೊಂದಕ್ಕೆ ದೈವತ್ವವನ್ನು ಕೊಟ್ಟು ಆದರಿಸುವ ಮುಗ್ಧರು ತಮ್ಮ ಪೂಜಾರಿಯ ಮೈಮೇಲೆ ಬರುವ ಕಲ್ಕುಡ ದೈವಕ್ಕೆ ನೇಮದಿಂದಿರುತ್ತಾರೆ. ಇವರ ಜೀವನದಲ್ಲಿ ಕಲ್ಕುಡನ ಮಹಿಮೆ- ಆತನ ಒಲುಮೆಗಾಗಿ ಇವರೆಲ್ಲರ ನಿಷ್ಠೆ, ಇವೆಲ್ಲ ಕಲ್ಕುಡನು ಕಲ್ಲಿನಲ್ಲೋ, ಮೈದುಂಬುವ ಪೂಜಾರಿಯಲ್ಲೋ ಇಲ್ಲದೆ, ತಂತಮ್ಮ ಮನದ ಒಳಗಣ ತಿಳಿವಾಗಿ ತೋರುವುದು ಸುಸ್ಪಷ್ಟ.
ಮಳೆಗಾಲದಲ್ಲಿ ಕಾಡು ಸವರಿ ಕುಮರಿಯಲ್ಲಿ ಭತ್ತದ ಬೇಸಾಯ ಮಾಡುವ, ಉಳಿದಂತೆ ಹಲವು ಉರುಳುಗಳನ್ನು ಒಡ್ಡಿ ಬೇಟೆಯಾಡುವ ಇವರು ಒಬ್ಬರಿಟ್ಟ ಉರುಳಿಗೆ ಬಿದ್ದ ಪ್ರಾಣಿಯನ್ನು ಇನ್ನೊಬ್ಬರು ಕದಿಯಲು ಕೈ ಹಾಕದ ನಿಯಮದವರು. ಎಲ್ಲ ಮನುಷ್ಯರಂತೆಯೇ ಮಸೆಯುವ ಮಾತ್ಸರ್ಯ, ಅಧಿಕಾರದ ಆಸೆ ಇವರ ಜೀವನದಲ್ಲಿ ತಿರುವುಗಳನ್ನು ತರುತ್ತ ಮನೋರಂಜಕ ಅಧ್ಯಾಯಗಳನ್ನು ತೆರೆಯುತ್ತ ಹೋಗುತ್ತದೆ.
ಈ ಪುಸ್ತಕದಲ್ಲಿ ಮೂಡಿರುವ ನಿಸರ್ಗದ ವರ್ಣನೆ, ಕಾಡಿನ ಉತ್ಪನ್ನಗಳ ವರ್ಣನೆ, ಆನೆಗಳ ನಡವಳಿಕೆ, ಕರಡಿಯ ಬೇಟೆ, ನರಭಕ್ಷಕವಾಗುವ ಚಿರತೆಯ ಬೇಟೆ, ಇವ್ಯಾವುವೂ ಉದ್ದೇಶಪೂರ್ವಕವಾಗಿ ತೋರದೆ, ಕಥೆಗೆ ಪೂರಕವಾಗಿ ಎಂದು ಮಾತ್ರ ಕಾಣುವುದೇ ಈ ಕಥೆಯ ಅಂದವನ್ನು ಇನ್ನೂ ಹೆಚ್ಚಿಸಿವೆ.
ಇಲ್ಲಿ ಮೂಡಿ ಬಂದಿರುವ ಕುಡಿಯರ ಸರಳ ಜೀವನ, ಕನಿಷ್ಠ ಅವಶ್ಯಕತೆಗಳ ಬಗ್ಗೆ ಓದುವ ಈಗಿನ ಪೀಳಿಗೆಗೆ ಆಗಿನ ಸರಳತೆಯೇ, ಅವರ ಸ್ವಾವಲಂಬಿ ಜೀವನವೇ ಒಂದು ಕೌತುಕವಾಗಿ ಕಂಡು ಪುಸ್ತಕ ನಿರರ್ಗಳವಾಗಿ ಓದಿಸಿಕೊಂಡು ಹೋಗುವುದರಲ್ಲಿ ಸಂದೇಹವಿಲ್ಲ.
Saturday, January 16, 2021
Tandav : Amazon Web Series - A Review
Saturday, August 1, 2020
Shakuntala Devi
Being woman is not only about having a family, doing house-hold chores and raising kids, but also a balance that is hard to strike with what a woman wants in her life. Each movie is an experience and this one is not the one to be missed!
Four Stars for sure!
Saturday, May 2, 2020
Thappad: A Review ⭐⭐⭐1/2
![]() |
| PC: https://www.imdb.com/title/tt10964430/ |
Sunday, March 29, 2020
ಪುಸ್ತಕ ವಿಚಾರ- ಅಂಚು: ಎಸ್ ಎಲ್ ಭೈರಪ್ಪ
ಏಳು ವರ್ಷಗಳ ಹಿಂದೆ ಓದಲು ತಂದಿಟ್ಟುಕೊಂಡೂ, ಓದದೇ ಅರ್ಧದಲ್ಲೇ ಕೈಬಿಟ್ಟಿದ್ದ ಪುಸ್ತಕ - ಎಸ್ ಎಲ್ ಭೈರಪ್ಪನವರ "ಅಂಚು". ಸಂಕಲ್ಪವಿದ್ದರೂ ಸಂಕಲ್ಪವನ್ನು ಹಸಿರಾಗಿಟ್ಟು ಪುಸ್ತಕದ ಉದ್ದಗಲವನ್ನೂ ಓದುವ, ಓದಿದ್ದನ್ನು ವಿಶ್ಲೇಷಿಸಿ ಅರಗಿಸಿಕೊಳ್ಳುವ ಭಾವ ಬಹುಶಃ ಬಲಿತಿರದ ದಿನಗಳವು. ಬಸುರಿನಲ್ಲಿ ಹಿಡಿದ ಈ ಪುಸ್ತಕದ ಅಭಿವ್ಯಕ್ತಿಯ ಧ್ವನಿ, ಸನ್ನಿವೇಶಗಳ ಪೋಣಿಸುವಿಕೆ ನನ್ನ ತಾಯ್ತನದ ಹೊಸ್ತಿಲಿನ ದಿನಗಳಲ್ಲಿ ಅತಿ ಭಾವುಕತೆಯನ್ನು ತಂದು ಪಾತ್ರಗಳ ನೋವಿನೊಡನೆ ಸಮೀಕರಿಸಿಕೊಳ್ಳುವ ಮನಸ್ಥಿತಿಯೊಡೆದು ಪಕ್ಕಕ್ಕಿಟ್ಟಿದ್ದೆ; ದೂರವಿಟ್ಟು ಮರೆತಿದ್ದೆ. ವರ್ಷಗಳ ನಂತರ, ಇದೇ ಲೇಖಕರ "ಯಾನ" ಸಂವಾದವನ್ನು ಶತಾವಧಾನಿ ಗಣೇಶರು ನಡೆಸಿಕೊಡುವಾಗ ಪ್ರಶ್ನೋತ್ತರ ಸಮಯದಲ್ಲಿ ಶ್ರೋತೃಗಳೊಬ್ಬರು "ಅಂಚು"ವಿನಲ್ಲಿ ನಾಯಕಿ ಆತ್ಮಹತ್ಯೆಯ ಪ್ರಯತ್ನವನ್ನು ಇಡೀ ಪುಸ್ತಕದಲ್ಲಿ ಇಪ್ಪತ್ತೊಂದೋ ಇಪ್ಪತ್ಮೂರೋ ಸಲ ಮಾಡಿಕೊಳ್ಳುತ್ತಾಳೆ ಅನ್ನುವ ಅಂಶ ಚರ್ಚೆಗೆ ಬಂದಾಗ ಗಣೇಶರು ಹೇಳಿದ್ದ ಉತ್ತರದ ಭಾಗವೊಂದು ನಿಜಕ್ಕೂ ಚಕಿತಗೊಳಿಸಿತ್ತು - ಅಂಚು ಕಾದಂಬರಿ ಮದುವೆಯನ್ನೊಳಗೊಂಡ ನಂಬಿಕೆಯನ್ನು ಕಳೆಯುವಂಥದಲ್ಲ, ಮದುವೆಯಾಗಲು ಪ್ರೇರೇಪಿಸುವಂಥದ್ದು, ಮದುವೆಯ ತಳಹದಿಯಲ್ಲಿ ನಂಬಿಕೆಯನ್ನು ಗಟ್ಟಿಮಾಡುವಂಥದ್ದು ಅಂದದ್ದು ಮನಸ್ಸಿನಲ್ಲಿ ಉಳಿದಿತ್ತು. Tuesday, July 30, 2019
Vanara: Anand Neelakantan
Friday, March 22, 2019
Kesari ✮✮✮✮1/2
Wednesday, January 30, 2019
Manikarnika - The Queen of Jhansi ✮✮✮

Sunday, January 28, 2018
Padmaavat: An Onscreen Epos

Monday, July 31, 2017
Indu Sarkar: Movie Review

Saturday, July 29, 2017
Sita: Warrior of Mithila - Amish Tripathi : A Review
But the upbringing of Sita, her childhood, an insight into her character are definitely a welcome. I have many times wondered how Sita could survive in Dandakaranya for 14 years when in exile, bearing the hard way of forest dwelling if she was raised just like a delicate princess just to be married and live like a queen. Either she should have had an arduous training during her childhood which helped her to endure the exile, or her conviction to walk with her husband in all walks of life must be unshakable. And Sita being trained like a warrior also could be a possibility, which we do not get much to perceive much from the epic of Valmiki Ramayana.
But I somehow feel that Amish is great in explaining what happens with nature, forest, and animals more than what is happening to characters of his novel. His novels are gripping when he explains these in detail.
Like Scion of Ikshvaku, there is woven story about Sita’s Mithila too, and the way that small city is ruled by Sita’s Mother more than Janak, and the larger politics that happen in Sapt Sindhu makes us keep reading the book.
May be I liked Amish’s Shiva Trilogy since it was completely different from the Shiva Purana though difficult to digest Ganesh and Durga as Nagas. But this series seems to be totally just meant to satiate the whim of the author that is nowhere connected to Ramayana except names and places. He also addresses Sapt SIndhu as India a few times, which was non-existent in the Ramayana timeline.
But the reader will enjoy the book thoroughly if read as just another work of Amish. The city security features, war scenes, each bit in forest is a good read in the novel. Rest said, I am not liking this Ram Chandra Series a lot and I might rethink before picking his next book which he says that the same story will be from the perspective of Ravan. My question is, when the context of literary intricacy is not much, the author could elaborate only the non-repeating parts of the story, instead of rather putting the same parts of the story in another person’s perspective, unless their experience of the same situation is vastly different from what has already been told!
Tuesday, May 23, 2017
Fault In Our Stars: John Green
I quite keep questioning myself, why people take care of their beloved ones during their illness, without letting them go, without letting them struggle all on their own, or just leave them to their fate. The answer is in this book. How the relationships are bonded and why they are the way they are, is very well tried and explained in it. I’m yet to watch the movie that made “Fault in our stars” come to life, but am sure everything that is felt in the book is far more vivid than the movie has to show to me. Peter Van Houten, the imaginary author of the imaginary book “An Imperial Affliction” is a character built to stay, to weigh Hazel and Gus, several notches higher is all I can say!Wednesday, April 5, 2017
ಪೂರ್ಣಚಂದ್ರ ತೇಜಸ್ವಿ
![]() |
| ನಮ್ಮ ತೇಜಸ್ವಿ |
ಗುಂತಕಲ್ಲಿನ ಕಾಡುಗಳಲ್ಲಿನ ನರಭಕ್ಷಕ ಹುಲಿಗೆ ಈಗಲೂ ಕೆನೆತ್ ಆಂಡರ್ಸನ್ ಮಣ್ಣು ಕೊರೆದು, ಕಲ್ಲುಗಳನ್ನು ಸುತ್ತಲೂ ಹುಲಿಗೆ ಅನುಮಾನ ಬರದಂತೆ ದೂರದಿಂದ ತಂದು ಹರಡಿ ಕಾದು ಕುಳಿತಾಗ ಅವರ ಹಿಂದಿನ ಕಾಡಿನಿಂದ ಕೇಳಿಸಿದ ಗರ್ಜನೆ ಹತ್ತಿರವಾಗುತ್ತಾ ಹೋದಂತೆ ಉಗುರು ಕಚ್ಚುತ್ತ ಓದುತ್ತಿದ್ದ ಜ್ಞಾಪಕ. ಪಕ್ಷಿಯೊಂದು ಇವರೊಡನೆ ಮಾಡಿದ ಗೆಳೆತನದ ಕಾರಣವಾಗಿ ಕೊನೆಯುಸಿರೆಳೆದಾಗ ಕಣ್ಣೀರಾದ ನೆನಪು. ಚಂದ್ರನ ಮೇಲಿಳಿದ ಮಾನವನ ಕಥೆ ಹೇಳುವಾಗಲೋ, ಮಿಸ್ಸಿಂಗ್ ಲಿಂಕ್ ಗಾಗಿ ಹುಡುಕಾಟ ನಡೆಸುವಾಗ ಬೆರಗುಗೊಂಡು ಪುಸ್ತಕದಲ್ಲೇ ಇಳಿದು ಪುಸ್ತಕ ಓದಿದ್ದಲ್ಲ - ಪ್ರತಿ ಸಂಗತಿಯನ್ನೂ ನೋಡಿದ ಭಾಸ. ಅದೇ ಜುಗಾರಿ ಕ್ರಾಸ್ ನಲ್ಲಿನ ಹೇಲು ತುಂಬಿದ ಗುಂಡಿಯೊಳಕ್ಕೆ ಮೂಗು ಮುಚ್ಚಿ ಕೂರುವ ಸಂಗತಿ, ಕಿರಗೂರಿನ ಗಯ್ಯಾಳಿಗಳು ಕೆಲಸಕ್ಕೆ ಬಾರದ ಗಂಡಂದಿರನ್ನ ಬಯನೆ ಕಟ್ಟುಗಳಲ್ಲಿ ಭೂತ ಬಿಡಿಸಿದ ಸಂಗತಿ - ಓದಿ ಜೋರಾಗಿ ನಕ್ಕು, ಮನೆಯವರಿಗೆಲ್ಲ ಇವಳೇನು ಓದುತ್ತಿದ್ದಾಳೋ, ಹಾಸ್ಯದ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಳೋ ಅಂತ ಗೊಂದಲವಾಗಿದ್ದು ನೆನೆದರೆ ಈಗಲೂ ನಗು.
ಅವರ ಸುಲಭ ಬರವಣಿಗೆ ಹಾಗು ತುಂಬಾ relate ಆಗಿಸುವ ಶೈಲಿಯ ಪುಸ್ತಕಗಳಿಂದ ಎಷ್ಟೋ ಹೊಸ ಓದುಗರನ್ನು ಕನ್ನಡಕ್ಕೆ ತರುತ್ತಲೇ ಇರುವವರು ತೇಜಸ್ವಿ. ಹೆಚ್ಚೇನೂ ಹೇಳುವುದು ಇಲ್ಲ. ಯಾಕೆಂದರೆ, ಇನ್ನು ಮುಂದೂ ಓದಿಸಲಿಕ್ಕೆ ತೇಜಸ್ವಿಯವರೇ ಇಲ್ಲ. ಅವರೆಲ್ಲ ಪುಸ್ತಕಗಳನ್ನೂ ಬಿಡುವಾದಾಗ ಮತ್ತೆ ಮತ್ತೆ ಓದಿ ಖುಷಿ ಪಡೋಣ. ಈ ರೀತಿ ತೇಜಸ್ವಿಯವರು ಸದಾ ನಮ್ಮೊಂದಿಗೇ ಉಳಿಯೋದರಲ್ಲಿ ಸಂಶಯವೇ ಇಲ್ಲ.
Tuesday, February 14, 2017
ವ್ಯಾಲೆಂಟೈನ್ ಡೇ ನಮ್ಮ ಸಂಸ್ಕೃತಿಯಲ್ಲ
ವ್ಯಾಲೆಂಟೈನ್ಸ್ ಡೇ ಭರಾಟೆ ನೆನ್ನೆ ತಾನೇ ಮುಗಿದಿದೆ. ಆಭರಣದಂಗಡಿಗಳು, ಆನ್ ಲೈನ್ ಶಾಪಿಂಗ್, ಕೆಫೆ ರೆಸ್ಟೋರೆಂಟ್ ಗಳೆಲ್ಲಾ ತಂತಮ್ಮ ಲಾಭಕ್ಕೆ ಫೆಬ್ರವರಿ ಪೂರ್ತಿ ಕೆಂಪು ಬಿಳಿ ಕರಿ ಬಲೂನ್ಗಳನ್ನ ಮೆರೆಸಿದ್ದೇ ಮೆರೆಸಿದ್ದು. ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರೀತಿ (monitory ಪ್ರೀತಿ!) ಹಂಚಿಕೊಳ್ಳಿ ಅಂತ ಎಲ್ಲೆಲ್ಲಿ ನೋಡಿದರೂ ಜಾಹಿರಾತುಗಳು.Wednesday, January 11, 2017
Ajaya- Duryodhana's Mahabharata- By Anand Neelakantan

Thursday, October 20, 2016
One Indian Girl: Chetan Bhagat
Sunday, October 16, 2016
ನೀರ್ ದೋಸೆ :ಇಷ್ಟ್ ದಿನ ಆದ್ಮೇಲೆ ಮತ್ತೊಂದ್ ವಿಮರ್ಶೆ
ನೀರ್ ದೋಸೆನೋ ಮಸಾಲ್ ದೋಸೆನೋ ಅಂತ ಟೈಟ್ಲೆ ಕನ್ಫ್ಯೂಸ್ ಆಗೋ ಮಟ್ಟಿಗಿನ ಸಂಭಾಷಣೆ. ಓಪನಿಂಗ್ ದೃಶ್ಯಗಳಲ್ಲೇ ಪಕ್ಕಾ ದ್ವಂಧ್ವಾರ್ಥಗಳು. ಆದ್ರೆ ದತ್ತಣ್ಣ-ಜಗ್ಗೇಶ್ ಸಿನಿಮಾ ನೋಡ್ತಾ ಹೋದಹಾಗೆಲ್ಲಾ ಇಷ್ಟವಾಗ್ತಾ ಹೋಗ್ತಾರೆ. "ಸಪೂರ ಕಟಿ" ನೋಡ್ತಾ ಇದ್ಯಾಕಿಂಥಾ ಪಾತ್ರಕ್ಕೆ ಹರಿಪ್ರಿಯಾ ಒಪ್ಪಿದ್ರೋ ಅನ್ನಿಸುತ್ತೋ, ಅದೇ ಪಾತ್ರದ ಪ್ರಾಮುಖ್ಯ ಮುಂದೆ ಅರಿವಾಗ್ತಾ ಹೋಗ್ತದೆ. ಸಾಧಾರಣ ಜನರನ್ನ ನೀರ್ ದೋಸೆಯ ಎಳೆಯಿಂದ ಕಟ್ಟಿಕೊಟ್ಟಿರುವ ಚಿತ್ರ ಇದು. ಎಷ್ಟು ನಗಿಸುತ್ತೋ ಅಷ್ಟೇ ಒತ್ತರಿಸುವ ಫೀಲ್ ತರುವ ನಾಲ್ಕಾದರೂ ಸಂದರ್ಭಗಳು. ದತ್ತಣ್ಣ ತನ್ನ ಅಕ್ಕನನ್ನು ನೆನೆಸಿಕೊಳ್ಳುವ, ಅರ್ಥಮಾಡಿಕೊಂಡಿರುವ, ಕರ್ಮಗಳನ್ನು ನೆರವೇರಿಸುವ ಪರಿ-touchy ಮತ್ತು ಅರ್ಥಪೂರ್ಣ. ಜಗ್ಗೇಶ್ ಗೆ ತನ್ನ ತಂದೆಯೊಡನಿರುವ ಭಾವದ ನಂಟೂ ತಂದೆ-ಮಗನ ಮಧ್ಯೆ ಅಪರೂಪದ್ದು. ತಂದೆಯ ಪುಟ್ಟಪುಟ್ಟ ಆಸೆಗಳನ್ನೂ ಮರೆಯದೆ ನೆಮ್ಮದಿಯಾಗಿ ಕೊನೆ ಕ್ಷಣಗಳನ್ನು ಕಳೆವಂತೆ ಮಾಡುವುದು, ಕ್ಯಾಬರೆ ಡ್ಯಾನ್ಸರ್ ಹರಿಪ್ರಿಯಾಳ ಗತವನ್ನು ಕೆದಕದೆ ಆ ಸ್ವೇಚ್ಛೆಯ ಪಾತ್ರಕ್ಕೂ ನೀಡಿರುವ ಮಾನವೀಯ ಮೆರುಗು, ಮೂಲಾ ನಕ್ಷತ್ರದಲ್ಲಿ ಹುಟ್ಟಿ ಮೂವತ್ತಾರಾದರೂ ಮದುವೆಯಾಗದೆ ಉಳಿದು ಜಗ್ಗೇಶ್ ನನ್ನು ಇಷ್ಟಪಡುವ ಸುಮನ್ ಹಾಗು ಏನೇ ಆದರೂ ಹೆಣದ ಗಾಡಿಯ ಚಾಲಕನಿಗೆ ಮದುವೆ ಮಾಡಲಿಚ್ಛಿಸದೆ ಜಗ್ಗೇಶ್-ಹರಿಪ್ರಿಯಾ-ದತ್ತಣ್ಣನ ಗುಂಪು ಕಂಡು ಗಲಿಬಿಲಿಯಾಗಿ ಹೌಹಾರುವ ಅವಳ ಅಪ್ಪ - ಎಲ್ಲವೂ ಸರಳ ಸಂಬಂಧಗಳ ಜಟಿಲ ವ್ಯಕ್ತಿತ್ವಗಳಿಂದೇರ್ಪಡುವ ನವಿರು ಹಾಸ್ಯದ ಕಥೆ-ಅಗತ್ಯ ದ್ವಂದ್ವ ಸಂಭಾಷಣೆ. ಕಳೆದು ಹೋಗ್ತಿರೋ ಮಾನವೀಯ ಸಂಬಂಧಗಳನ್ನ, ಬದುಕಿನಲ್ಲಿ ಹತ್ತಿರವಾಗುವ ಜನಗಳನ್ನ ಹೇಗೆ ಸಹಜವೆನ್ನುವಂತೆ, ಸಂಬಂಧಗಳ ಮೌಲ್ಯ ಹಾಸ್ಯದಲ್ಲೂ ಉಳಿಸಿಕೊಂಡು ಬದುಕೋ ಸರಳತೆ ತೋರಿಸಿಕೊಡೋ ಸಿನಿಮಾ ಇದು.







