Showing posts with label kannadapoem. Show all posts
Showing posts with label kannadapoem. Show all posts

Wednesday, July 13, 2022

ಗುರುವೋ ಅಂತರಾತ್ಮವೋ!

ಗುರು ಪೂರ್ಣಿಮೆಯ ಮುಂಜಾವು
ಗುರುವಿನಾ ಕರುಣೆ ಕಣ್ಣ ಬೆಳಗುತಲಿರಲಿ,
ಮನದಲ್ಲಿ ಗುರುವಿನೆಡೆಯ ಭಕುತಿ
ಗುರಿ ತೋರುವಂತಿರಲಿ,
ಎಡವಿ ಬೀಳುವ ಮುನ್ನ
ತೋಚದಿದ್ದ ಹೊರಗಣ್ಣ-
ಗುರುವಿನ ಕರಣ ಒಳಗಣ್ಣ ತೆರೆಯುವಂತಿರಲಿ,
ಬೈತಿಟ್ಟ ಒಳಗಿನ ಬೆಳಗು 
ಹೊರಲೋಕಕೆಲ್ಲ ತಾನು 
ಮತ್ತೆ ತೋರುವಂತಿರಲಿ,
ಹಗಲೆನದೆ ಕತ್ತಲೆನದೆ
ಅನುದಿನವು ನಿನ್ನ ಬಗೆಗಿನ ಆಸ್ಥೆ -
ನನ್ನ ಮರುಳ ಮಾಚಿ ಸರಿದೋರುವಂತಿರಲಿ!