ಅವತರಣಿಕೆಯಂತೆ ವಿನ್ಯಾಸ ಪ್ರತಿ ವರ್ಷವೂ ಹೊಸವು...
ಒಂದರ ನಂತರ ಒಂದು ಅಂಗಡಿಯ ಸುತ್ತುವುದೇನು
ಕೊಳ್ಳುವ ಕೆಲವು ರಾಖಿಗೆ
ಎಲ್ಲವನು ಬೆಳಕಿಗೆ ಹಿಡಿದು ತಿರುತಿರುಗಿಸಿ ನೋಡಿದ್ದೇನು
ಇದರ ಬಣ್ಣ ಚಂದ ಅದರ ನಮೂನೆಯೊಂದು ಇನ್ನೂ ಚಂದ
ಮುಂದಿನ ಅಂಗಡಿಯಲ್ಲಿ ಇನ್ನೂ ಚೆನ್ನಾದುದಿದ್ದರೆ ?
ಇದ ಬಿಡಲೂ ಇಷ್ಟವಿಲ್ಲ - ಒಮ್ಮೆಗೇ ಕೊಳ್ಳಲೂ ಮನ ಒಲ್ಲ...
ಕೊನೆಗೆ ಪ್ರತಿ ಅಂಗಡಿಯಲ್ಲು ಒಂದೇ ರಾಖಿಗೆ ಆಯ್ಕೆಯ ಭಾಗ್ಯ
ಬೇಕಲ್ಲವೇ ಇನ್ನು ಚೆನ್ನಾದುದೊಂದು?...
ಎಲ್ಲ ರಾಖಿಯ ಕೊಂಡಾಯ್ತು ಹಾ!
ಎಂದು ಸಮಾಧಾನಿಸುವ ಮೊದಲೇ,
ಕೊಂಡದ್ದಕ್ಕಿಂತ ಕಡಿಮೆ ಬೆಲೆಯ ರಾಖಿ,
ಮಿಂಚುವ ಅದಾವುದೋ ರಾಖಿ,
ನಾ ಕೊಂಡದ್ದಕ್ಕಿಂತ ವಿಭಿನ್ನ-ವಿಶಿಷ್ಟ ರಾಖಿ
ಕಣ್ಣಿಗೆ ರಾಚಿ ಉತ್ಸಾಹ ಕಡಿಮೆ ಮಾಡಬೇಕೆ?
No comments:
Post a Comment