Friday, June 29, 2012

Thinkisi....

ಒಬ್ಬಾತ ಕೊಳವೊಂದರಿಂದ ನೀರು ಕುಡಿಯಲು ಹೋಗುತ್ತಾನೆ. ದೂರದಲ್ಲಿದ್ದ ವ್ಯಕ್ತಿಯೊಬ್ಬ ಕೂಗುತ್ತಾನೆ... "ಯೆಜ್ಮಾನ್ರೆ!   ಇದೇ ನೀರಲ್ಲಿ ಎಮ್ಮೆ-ದನ ಗಲೀಜು ಮಾಡಿವೆ! ನೀರು ಕುಡೀಬೇಡಿ!!". ಕುಡಿಯೆ ಹೊರಟವನು " What? I cant understand kannada. I'm staying in karnataka for 10 yrs now and still havent found a bit of need to learn it! Speak in english na..... " ಎನ್ನುತ್ತಾನೆ.. ಅದಕ್ಕೆ ಇನ್ನೊಬಾತ, " Drink from both hands dude!!! You can drink more!!" ಅನ್ನುತ್ತಾನೆ.


ಹೀಗಿರ್ಬೇಕ್ರೀ ಕನ್ನಡದ ಮೇಲಿನ ಅಭಿಮಾನ. ತಮ್ಮದೇ ಭಾಷೆಯ ಬಗ್ಗೆ ಅನವಶ್ಯ ದುರಭಿಮಾನ ತೋರಿಸೋರ ಮುಂದೆ, ಕನ್ನಡವನ್ನ ಸೆಟೆಸಿ ನಿಲ್ಲಿಸಿ. ಅದು ನಿಮ್ಮ ಮರ್ಯಾದೆಗೆ ಕಿರೀಟವೇ ಹೊರತು ಅವಮಾನವಲ್ಲ. ಕನ್ನಡವನ್ನು ಬಾಳಲುಗೊಡಿ.... ಕೆಲಸದ ಸ್ಥಳಗಳಲ್ಲಿ, ಅನವಶ್ಯ ಸಂದರ್ಭದಲ್ಲೂ, ಇಂಗ್ಲಿಷ್ ಅಥವಾ ಇನ್ನ್ಯಾವುದೇ ಭಾಷೆಯ ಉಪಯೋಗ ಬಿಡಿ. ತಲೆ ಎತ್ತಿ ಕನ್ನಡ ಮಾತಾಡ್ತಾ ಮಾಲ್ ನಲ್ಲಿ ತಿರುಗಾಡಿ. ಕ್ಷೀಣಿಸ್ತಿರೋ ಕನ್ನಡಕ್ಕೆ ಒಂದು ಬಾಳು ಕೊಡಿ. ಗಾಂಚಾಲಿ ಬಿಡಿ., ಕನ್ನಡ ಮಾತಾಡಿ!

No comments: