ಕತ್ತಲಲ್ಲು ಪ್ರೀತಿ ಹೊಳಪ ಕಾಯ್ದುಕೊಂಡಿರೆ
ಚಿಲುಮೆ ಕಂಡ ತೆರದಿ ಬಾಹು ತಾನು ಬಿಡಿಸಿರೆ
ಮಿಂಚಿನ ನಗೆ ಸಂಚು ತೋಳ ಚಾಚಿ ಕಾದಿರೆ
ತಬ್ಬಿಕೊಳಲು ಹೋದರದುವೆ ಮಾಯವಾಗಿದೆ
ಇನಿಯನೆಂದುಕೊಳಲು ಬರಿಯ ದಿಂಬೆ ಸಿಕ್ಕಿದೆ!!!!!
ರಾಜರು ಸಾಮಾನ್ಯವಾಗಿ ತಂದೆಯ ಹೆಸರಿನಿಂದ ಗುರುತಿಸಲ್ಪಟ್ಟರೆ ಶಾತವಾಹನರನ್ನು ಸೋಲಿಸಿ
ಅಮರಾವತಿಯನ್ನಾಳಿದ ಹಿಂದೂ ಧರ್ಮೀಯರೂ ರಘುವಂಶೀಯರೂ ಆದ ಇಕ್ಷ್ವಾಕು ವಂಶಸ್ಥರು ಕೂಡ ಬೌದ್ಧ
ರಾಜರಂತೆ (ಗೌತಮಿ ಪುತ್ರ ಯಜ್ಞ ಶತಕರ್ಣಿ, ಗೌತಮಿ ಪುತ್ರ ವಿಜಯ ಶತಕರ್ಣಿ..) ತಾಯಿಯ ಹೆಸರಿನಿಂದ ಗುರುತಿಸಲ್ಪಡುತ್ತಾರೆ.
ಎರಡನೇ ಬುದ್ಧನೆಂದು ಪ್ರಖ್ಯಾತರಾದ ನಾಗಾರ್ಜುನ ಆಚಾರ್ಯರ ಜೀವನದ ಬಗ್ಗೆ ಸ್ಥೂಲವಾಗಿ ಬೆಳಕು
ಚೆಲ್ಲಲಾಗಿದೆ. ಮೊದಲ ಕಥೆ ಅಮರಾವತಿಯನ್ನು ಆಳಿದ ಶಾತವಾಹನರು ಹಿಂದೂ ಧರ್ಮೀಯರಾಗಿದ್ದೂ ಜೈನ ಸ್ತೂಪಗಳ,
ವಿಶ್ವವಿದ್ಯಾಲಯ ಸ್ಥಾಪನೆ ಹಾಗು ಜೈನ ಧರ್ಮಕ್ಕೆ ಪ್ರೋತ್ಸಾಹ, ಅದರ ಪ್ರಚಾರಕ್ಕೆ ಕಾರಣವಾಗಿದ್ದು
ಏಕೆಂದು ಹೇಳುತ್ತಾ ಇತಿಹಾಸವನ್ನು ಕಥೆಯಾಗಿ ಬಿಚ್ಚಿಡುತ್ತದೆ. ಇತಿಹಾಸವನ್ನು ಕಂಠಪಾಠ ಮಾಡಿ
ಕಾಟಾಚಾರಕ್ಕೆ ಪಾಸಾದ ನಮಗೆ ಹೀಗೆ ಇತಿಹಾಸವನ್ನು ಕಥೆಯಾಗಿ ತೋರಿಸಿ ಕುತೂಹಲ ಕೆರಳಿಸಿದ್ದರೆ ಇನ್ನಷ್ಟು
ಉತ್ಸುಕತೆಯಿಂದ ಓದುತ್ತಿದ್ದೆವೇನೋ ಎನ್ನಿಸದೆ ಇರಲಿಲ್ಲ.
ನನ್ನ ತಂದೆ ಈ ಪುಸ್ತಕವನ್ನ ತಂದ ಕೂಡಲೇ ಹೆಸರಿನ ಅರ್ಥವೇ ಆಗಲಿಲ್ಲ. ಇದೊಂದು ೩ ಕಥೆಗಳ ಸಂಕಲನ.
ಕಲ್ದವಸಿ ಅನ್ನೋ ಕಥೆ ಅವುಗಳಲ್ಲಿ ಕಡೆಯದು. ಶ್ರೀ ರಾಮಾಯಣ ದರ್ಶನಂ ರಚಿಸುವಾಗ ಕುವೆಂಪುವಿಗೆ
ಪ್ರೇರಣೆಯಾದ ಹಲವು ಸಂದರ್ಭಗಳಲ್ಲಿ ಒಂದರ ಬಗ್ಗೆ ಹೇಳುತ್ತಾ ಲೇಖಕರು ನಮ್ಮನ್ನು ರಾಮಾಯಣದ
ವೈಭವೀಕರಣದ ಪ್ರಸ್ತುತತೆಯ ಬಗ್ಗೆ ಚಿಂತನೆಗೆ ದೂಡಿಬಿಡುತ್ತಾರೆ. ತನ್ನ ಗಂಡನೊಂದಿಗೆ ವನವಾಸಕ್ಕೆ
ಹೋಗದೆ ಭಾವನೆಗಳನ್ನು ಹತ್ತಿಕ್ಕಿ ಕಾದ ಊರ್ಮಿಳೆ ಕಲ್ಲಿನಂತಹಾ ತಪಸ್ವಿನಿಯಾಗಿ, ಸೀತಾರಾಮರ
ಹೃದಯದಲ್ಲಿ ಲಕ್ಷ್ಮಣನ ಸ್ಥಿತಿಗೆ ನೆನಪಾಗಿ ವನವಾಸದಲ್ಲಿನ ಪರ್ಣಶಾಲೆಯ ಬಳಿಯ ಕಲ್ಲುಬಂಡೆಯಾಗಿ
ನಿಲ್ಲುತ್ತಾಳೆ. ಆಕೆಯೇ ಕಲ್ದವಸಿ. ಇಲ್ಲಿ ಮನಮಂಥನಕ್ಕೆ ಅವಕಾಶವಿದೆ. ಮತ್ತೆ ಮತ್ತೆ ಕೇಳಿ, ಓದಿ,
ಹೇಳಿದ ರಾಮಾಯಣದ ತಿರುಳು ಮತ್ತೊಮ್ಮೆ ಒರೆಗಲ್ಲಿಗೆಳೆಯಲ್ಪಡುತ್ತದೆ. ಕಾಲಗರ್ಭದಲ್ಲಿ ಹೂತು ಹೋದ
ವೈಚಾರಿಕತೆ ತಾನೇ ಮೈವೆತ್ತು ಬಂದಂತಿದೆ.