Monday, June 8, 2015

ರನ್ನ : ಭಾರ್ಗವ - ಚಂದು ಮತ್ತು ಮಿಕ್ಕೆಲ್ಲವೂ...


ಭಾರ್ಗವನಾಗಿ ತಾತನ ಕಣ್ಬೆಳಕಾಗಿರುತ್ತಾನೆ; ತಮ್ಮ ಕಂಪನಿಯ shares ಬಾಚಿಕೊಂಡವನಿಗೆ ಮಾಡ್ರನ್ ಭಾರ್ಗವ ರಾಮನಂತೆ ಫೈಟ್ ಮಾಡಿ ಬುದ್ಧಿ ಕಲಿಸುತ್ತಾನೆ. ಚಂದುವಾಗಿ ಮುನಿಸಿಕೊಂಡ ಸೋದರತ್ತೆಯ ಮನೆ ಸೇರಿ ಡ್ರೈವರ್ರಾಗಿ ಮನಗೆಲ್ಲುತ್ತಾನೆ; ಕಡೆಗೆ ದೂರಾದ ಅತ್ತೆಯನ್ನು ಓಲೈಸಿ ತಾತನ ಮನೆಗೆ ಕರೆತರುತ್ತಾನೆ. 
Hit out or Get out.. ಇವನಾರಡಿ cut out !!! 



ಸುದೀಪನ Family photo ನಿಂದ ಶುರುವಾಗ್ತಾ ಕಥೆ ಪಕ್ಕಾ ಕುಟುಂಬ ವಾಚಿನಿ (Watch-ಇನಿ) ಅಂತ ಗೊತ್ತಾಗ್ಹೋಗ್ತದೆ. ತೆಲುಗುವಿನ ಅತ್ತಾರಿಂಟಿಕಿ ದಾರೇದಿ ಯ ಯಥಾವತ್ ಚಿತ್ರಣವಾದರೂ ಸುದೀಪ್ ತನ್ನ ಎಂದಿನ ಅಭಿನಯಪರತೆಯಿಂದ ಗಮನ ಹಿಡಿದಿಟ್ಟುಕೊಳ್ಳುತ್ತಾರೆ. (ರನ್ನ ನೋಡಿದ ಮರುದಿನವೇ ಅತ್ತಾರಿಂಟಿಕಿ ದಾರೇದಿ ನೋಡಿಯೇ ಈ ಮಾತು ಹೇಳಿದೆ) ತಾತನ ಪಾತ್ರದಲ್ಲಿ ಪ್ರಕಾಶ್ ರಾಜ್ ಮಿಂಚಿದ್ದಾರೆ. ಆತನಿಗೆ ಎಂಥಹಾ ಪಾತ್ರಭೂಮಿಕೆ ದೊರೆತರೂ ಅದಕ್ಕೆ ನ್ಯಾಯ ಒದಗಿಸುವಲ್ಲಿ ಗೆದ್ದೇ ಗೆಲ್ಲುತ್ತಾರೆ. ಆದರೆ ಇಲ್ಲಿ 75 ವರ್ಷದ ಹುಟ್ಟಿದಹಬ್ಬ ಅಂತ ಹೇಳಿಸೋ ಬದಲು 70 ಅಂದಿದ್ದರಾದ್ರೂ ಚೆನ್ನಾಗಿತ್ತೇನೋ ಅಂತ ಅನ್ನಿಸದೆ ಇರಲಿಲ್ಲ. ಅತ್ತೆಯ ಪಾತ್ರಧಾರಿ ಮಧುಬಾಲಳೇ ಇಲ್ಲಿ ಅತ್ಯಂತ ದೊಡ್ಡ disappointment. ಆಕೆ ಅಭಿನಯ ಮರೆತಿದ್ದಾರೋ, ಅಥವಾ ತೀರಾ ಸಣ್ಣಗಾಗಿ ಆಕೆ ತೋರಿದ ಅಭಿನಯ ಕ್ಯಾಮೆರ ಮುಂದೆ ಕಂಡಿಲ್ಲವೋ ತಿಳೀಲಿಲ್ಲ. 

ಇದು ನಿರ್ದೇಶಕನ ಸಿನಿಮಾ ಅಂತ ಎಲ್ಲರೂ ಒಪ್ಪಬೇಕಾದದ್ದು. ಎಲ್ಲ ದೃಶ್ಯಗಳೂ ವಾಹ್ ವಾಹ್! "ವಿಷ್ಣುವರ್ಧನ ಮತ್ತೊಮ್ಮೆ ನಮ್ಮ ಮಧ್ಯೆ" ಅಂತ ತೋರಿಸಲೇ ಬೇಕು ಅನ್ನುವಂತೆ ಸಿಂಹದ ಗ್ರಾಫಿಕ್ಸ್ ಗೆ ಅಂಟಿಕೊಂಡ ಹಾಗೆ ಕಾಣ್ತಿದೆ ಅನ್ನೋದೊಂದು ಬಿಟ್ರೆ, ಸಿನಿಮಾ ಬೊಂಬಾಟ್. ಸಿಂಹದ ಅನಿಮೇಷನ್ ಮುಂದಿನ ಚಿತ್ರಗಳಲ್ಲಾದರೂ ಅತಿಯಾಗದಿರಲಿ ಅಂತ ಹಾರೈಸಬೇಕಷ್ಟೇ. ಭಟ್ಟರ "ಸೀರೆಲಿ ಹುಡುಗೀರ ನೋಡಲೇ ಬಾರದು" ಒಂದು ಸೆನ್ಸೇಷನ್ ಹಾಡಂತೂ ಹೌದು. Lyrics, ಸಂಗೀತ ಒಂದು ತೂಕವಾದರೆ ಛಾಯಾಗ್ರಹಣ ಹಾಗು ಸುದೀಪ್ ಅಭಿನಯ ಅದನ್ನೇ ಸರಿಗಟ್ಟಬಲ್ಲ ತೂಕ!

ಚಿಕ್ಕಣ್ಣ ತಮ್ಮ ಸಹಜ ನಟನೆಯಿಂದ ಇಷ್ಟವಾಗುತ್ತಾರೆ. ತೆಲುಗು ಅವತರಣಿಕೆಯಲ್ಲಿ ಅಲಿ ಪಾತ್ರಕ್ಕಿಂತ ಚಿಕ್ಕಣ್ಣನ ಪಾತ್ರಪೋಷಣೆ ಹೆಚ್ಚಿದೆ; ಸಂಭಾಷಣೆಯೂ ಸಾಂದರ್ಭಿಕವಾಗಿದೆ.  The fun that is cherry on the cake!

ಕಿಚ್ಚ ಸ್ವಾಮಿ ಜೈ ಜೈ ಹಾಡಲ್ಲಿ ಸುದೀಪ್ ಅಭಿನಯ awesome ಆದರೂ ಮನಸ್ಸಲ್ಲುಳಿಯುವುದು ಸಾಧುಕೋಕಿಲ ಪರದಾಟ. ಬ್ರಹ್ಮಾನಂದಂ ಪಾತ್ರವನ್ನು ಮಾಡಿರೋ ಸಾಧುಕೋಕಿಲ wonderful. ಅಹಲ್ಯೆ ಅಮಾಯಕಿ ಅಲ್ಲ - ನಾಟಕದಲ್ಲಿ ಏನೇ ಪಾತ್ರ ಮಾಡಲು ಹೋದರೂ ಕೊನೆಗೆ ಎಲ್ಲರಿಂದಲೂ ಬಡಿಸಿಕೊಳ್ಳುವ ಸಾಧು ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸೋದು ಸತ್ಯ!

ಸಿನಿಮಾ ಕೊನೆಯಲ್ಲಿ ಚಿತ್ರೀಕರಣದಲ್ಲಿನ ತಪ್ಪುಗಳ ಸದ್ಬಳಕೆ(!) ಆಗಿದೆ. ಸಿನಿಮಾ ಮುಗಿದ ಮೇಲೂ ನಗಿಸಿದ್ದಾರೆ ನಿರ್ದೇಶಕರು. ಕನ್ನಡಕ್ಕಂತೂ ಇದು ಹೊಸ ಪ್ರಯತ್ನ. ಅತ್ಯುತ್ತಮ ಛಾಯಾಗ್ರಹಣ ಮತ್ತು ಸ್ಟಂಟ್ಸ್ ಸಿನಿಮಾದ ಬೆಲೆ ಹೆಚ್ಚಿಸಿವೆ. ಸುದೀಪ್ ಸಿನಿಮಾ ಆಗಿರೋದ್ರಿಂದ ನಾಯಕಿಯರ ಅಭಿನಯ ಚೆನ್ನಾಗಿದ್ದರೂ ಮಬ್ಬಾಗಿ ಕಂಡಿದ್ದು ಸಹಜ. ಒಟ್ನಲ್ಲಿ ನೋಡಲೇ ಬೇಕಾದ ಚಿತ್ರ. ಕನ್ನಡದ ಮಟ್ಟಿಗೆ ದೊಡ್ಡ ಪ್ರಯತ್ನ. ಸುದೀಪ್ ಕಟ್ಟರ್ ಅಭಿಮಾನಿಗಳು ಕಡಿಮೆ ಅಂದರೆ ಎರಡು ಸಾರಿ ನೋಡಿ.. ಥೇಟ್ ನಂಥರ!!  

No comments: