(ಇತ್ತೀಚಿನ ಪತ್ರಿಕೆಯೊಂದರ ಸಂದರ್ಶನದಲ್ಲಿ ಮರುಮತದಾನದ ಬಗ್ಗೆ ಭೈರಪ್ಪನವರ
ಅಭಿಪ್ರಾಯವನ್ನ ಕೇಳಿದಾಗ ಅವರ ಉತ್ತರ- "ನಾನು ೧೯೫೯ ರಲ್ಲಿ ಬರೆದ ಧರ್ಮಶ್ರೀ
ಕಾದಂಬರಿಯಲ್ಲಿ ಮರುಮತದಾನದ ಬಗ್ಗೆ ನನ್ನ ನಿಲುವು ಸ್ಪಷ್ಟವಾಗಿದೆ" ಎಂದು. ಅವರ ಈ
ಹೇಳಿಕೆಯನ್ನೋಡಿಯೇ ಧರ್ಮಶ್ರೀ -ಯನ್ನೋದಿದೆ. )

ಯಾವ ಚರ್ಚಾಪ್ರಾವೀಣ್ಯತೆಯನ್ನು ಮತಾಂತರವನ್ನ ಖಂಡಾತುಂಡವಾಗಿ ವಿರೋಧಿಸಲು ಬಳಸುತ್ತಿದ್ದನೋ ಆ ವಾಕ್ಶಕ್ತಿಯನ್ನು ಬಿಶಪ್ಪರು ಮತಾಂತರ ಪ್ರೇರೇಪಿಸಲು ಒತ್ತಾಯಿಸಿದಾಗ, ಮತಾಂತರಗೊಂಡದ್ದಕ್ಕೆ ಮರಣಶಯ್ಯೆಯಲ್ಲಿದ್ದ ತಂದೆಯಿಂದಲೂ ಮೌನ ನಿರಾಕರಣ ಕಂಡಾಗ, ಆತ ಅಪರಾಧೀ ಭಾವದಿಂದ ಕುಗ್ಗುತ್ತ ಹೋಗುತ್ತಾನೆ. ಒಡಹುಟ್ಟಿದ ತಂಗಿ ತನ್ನ ಹೆಂಡತಿಯನ್ನು ಅತ್ತಿಗೆಯೆಂದು ಸಂಬೋಧಿಸದೇ ಇದ್ದಾಗ ಏಳುವ ತಳಮಳ- ಹಿಂದೂ ಹಿತೈಷಿಗಳ ಮದುವೆಯೊಂದರಲ್ಲಿ ತನ್ನ ಹೆಂಡತಿಗೆ ಸಿಗುವ ಸಮಾನ ಆತಿಥ್ಯದಲ್ಲೂ- ತಮ್ಮ ಸಂಸ್ಕಾರ ಇದರಿಂದ ಬೇರೆಯಾಯಿತಲ್ಲ, ಎಂಥಹಾ ಸಮಾನ ಧರ್ಮೀಯರಂತೆ ಕಂಡರೂ ಆ ಸಂಸ್ಕೃತಿಯ ಭಾಗ ನಾವಲ್ಲದೇ ಹೋದೆವಲ್ಲ-ಎಂಬ ವಿರೋಧಾಭಾಸವಾಗಿ ತಳಮಳ ಮುಂದುವರೆಯುತ್ತದೆ.
ಹಿಂದೂ ಧರ್ಮದ ಬಗ್ಗೆ ಸ್ಪಷ್ಟ ಅರಿವು-ಒಲವಿದ್ದೂ, ಸಂದರ್ಭಕ್ಕೆ ಕಟ್ಟುಬಿದ್ದು ಕ್ರೈಸ್ತನಾಗುವ ಸತ್ಯನ ತಾಕಲಾಟವನ್ನ ಕಾದಂಬರಿ ಶಕ್ತವಾಗಿ ಮೂಡಿಸಿದೆ. ಮತಾಂತರ-ಮರುಮತಾಂತರಗಳ ಬಗ್ಗೆ ಚರ್ಚೆಯಾಗುತ್ತಿರುವ ಈ ಸಮಯ ಧರ್ಮಶ್ರೀ ಯ ಅಧ್ಯಯನಕ್ಕಂತೂ ತಕ್ಕುದಾಗಿದೆ.

No comments:
Post a Comment