ಚಿತ್ರ ಕೃಪೆ : http://www.mayurveena.com |
ವೀಣೆ ಹಿಡಿದು ದೇವಿಯಂತೆ ಬಂದೆ ನೀನು ಬಾಳಲಿ
ತಟಸ್ಥಗಿವಿಯ ಮರುಳು ಮನಕೆ ವೀಣೆ ಸ್ವರವು ಕೇಳಿತು
ಕಲೆಯ ಕಲ್ಪ ಜಡದ ಕಿವಿಯೊಳಾಲಾಪವ ಧ್ವನಿಸಿತು
ಎಲ್ಲಿ ಹುದುಗೆ ಬಿಡದೆ ಭಾವ ಕಂಪನಗಳು ಏಳಲು
ದಣಿವು ಜಾರಿ ಸ್ವನವ ಹೀರಿ ಮಧುರ ರಾಗದುಂಬಲು
ತೇನೆಹಕ್ಕಿ ಗಾನ ಕೇಳೆ ಮೆಲ್ಲನದುವು ಉಲಿಯಲು
ಅಲ್ಲೆ ಕಾಂಬ ಹಸುವದೊಂದು ಕೊರಳ ಗಂಟೆ ಧ್ವನಿಸಲು
ನಿನ್ನ ಬೆರಳ ಮೋಡಿ ಮತ್ತೆ ವೀಣೆಯಲ್ಲಿ ಸ್ಫುರಿಸಲು
ಸುಯ್ದು ಸುಳಿವ ಗಾಳಿ ಕೂಡ ಕೇಳಲದನು ನಿಲ್ಲಲು
ಆಲಾಪದಿ ಮುಳುಗೇಳೆ ಭಕ್ತಿ ಚಿಮ್ಮುವಂದದಿ
ಷಡ್ಜಕಿಳಿಯುವಲ್ಲಿ ಅರೆರೆ! ದೇವ ಕಂಡ ತಾನದಿ!
ಧನ್ಯನೆಂದೆ ಮನದೊಳೆಲ್ಲ ಆರ್ದ್ರ ಭಾವ ತುಂಬಿದೆ
ಕೈಯ್ಯ ಹಿಡಿದು ಗಾನದೇವನನ್ನೆ ಚಣದಿ ತೋರಿದೆ!
(ಗೋರೂರು ರಾಮಸ್ವಾಮಯ್ಯಂಗಾರರ "ಊರ್ವಶಿ"ಯಿಂದ ಪ್ರೇರಿತ)
No comments:
Post a Comment