
ಪ್ರೀತಿ ಹಿಡಿದಷ್ಟೂ ಚಂದ..
ಹಿಡಿದಿಡಿದು ಪಡೆದಷ್ಟೂ ಚಂದ...
ಆ ತಿಳಿ ಗಾಳಿಯು ಮೋಡದ ಒಳಗೆ ಹೊಗಲಾರದೆ ದಬ್ಬಿ ತಿರುಗಿ ಬಿಮ್ಮಗೆ ಕೋಪಿಸಿ ನಿಂತಾಗ,
ಮೆಲ್ಲಗೆ ಮೋಡ ಒಡೆದು ಮಳೆಯಾಗಿ ಗಾಳಿಯ ಬಿಸುಪ ತಣಿಸಿದಂತೆ ಪ್ರೀತಿ..
ನೋವಾಯಿತು ದಣಿವಾಯಿತು ದಾಹವಾಗಿರಲು ಕಾಡಿಸಿ ಸಿಗುವ
ಸಿಹಿ ಜೇನ ಒಡಲಲಿ ತುಂಬಿಕೊಂಡ ಲತೆಯೊಂದು ಗಂಟಲಿಗೆ ಸೋಂಕಿದಂತೆ ಪ್ರೀತಿ..
ಎನ್ನವನು ಇನ್ನೇನು ಮನದ ತುಮುಲ ಭಾವದೊದಿಳಿಳಿಯುವ ಮುನ್ನ ನನ್ನ ಸೇರಿದುದು, ಅದೇ ಪ್ರೀತಿ..
....
No comments:
Post a Comment