ಸಮಯ ಜಗ್ಗಿ ಸರಿಯಲೊಲ್ಲ
ತನ್ನ ಪಟ್ಟು ಸಡಿಲವಿಲ್ಲ
ಗೋಗರೆದರೂ ಇನಿದನಿಯಲಿ
ಆ ಕರಾರು ಸಡಿಲವಿಲ್ಲ
ಗಂಟೆ ಹಲವು ಸರಿದ ಮೇಲು
ಕೊನೆಯ ಘಳಿಗೆ ಚಲಿಸಲೊಲ್ಲ
ಕಾದ ಮನಕೆ ತಂಪನೀವ
ಚಣವು ಅದುವೆ ಬಾರದೆ
ಇಲ್ಲಿವರೆಗೆ ಕಾದ ಸಮಯ
ನೂರು ಘಳಿಗೆ ಕಳೆದರೂನು
ಕೊನೆಯ ಘಳಿಗೆ ಮನಕೆ ಅದುವೆ
ಆದರೂನು ಅದರ ಸೊಲ್ಲ
ಕೆಳ್ವರಾರು ಇನಿತು ಮೆಲ್ಲ
ಓಡುತಿರುವ ಕಾಲಕೆ ಲಗಾಮ-
ನೆಂತು ಬಿಗಿಸಲಿ?
ಅಂತು ಕಾದ ಸಮಯ ಬಂತು
ಸೋತ ಮನಕೆ ಒಲವ ಪಾನ
ಇನಿಯ ಬರುತ ಹರುಷ ತಂದ
ಯುಗವದೀಗ ಚಣವದಾಗ-
ಬಾರದೇಕೆ ಎನುತ ಚಿತ್ತ
ನಲಿದು ನಗುತ ಕುಣಿವುದು!!
2 comments:
Well said ....
thank u @ manjunath..
Post a Comment