ಪ್ರೀತಿ ಸಿಂಧುವಾಗಿ ಬಾಳು
ಇಹದ ಚೆಲುವ ಸೂರೆಗೊಂಡು
ಮಡಿಲ ಹಕ್ಕಿಯಾಗಿ ಇಂಪು
ಮೋಡ ಸರಿದು ಬೆಳಕು ತಬ್ಬಿ
ನಾದವೊಂದು ಹರುಷದುಂಬಿ
ಮರೆಯ ಪರದೆ ಸರಿಸಿ ಮನದೆ
ಇಹದ ಚೆಲುವ ಸೂರೆಗೊಂಡು
ಮಡಿಲ ಹಕ್ಕಿಯಾಗಿ ಇಂಪು
ಹಚ್ಚಗಿರಲಿ ಒಲವ ಹಸಿರು
ಪ್ರೀತಿಗೊಂದೆ ದಿನವು ಬೇಡ
ಚಣವ ಮರೆತು ಸನಿಯದಲ್ಲಿ
ಲೀನವಾಗು ಹೃದಯದಲ್ಲಿ
ಬೆರೆತು ಸರಿವ ಕಾಲವೆನಲಿ ಪರಾಕು ಪ್ರೀತಿಗೆ!
ನಾದವೊಂದು ಹರುಷದುಂಬಿ
ಮರೆಯ ಪರದೆ ಸರಿಸಿ ಮನದೆ
ಹರಡಿ ನಗುವ ತೆರದಿ ಚಣದೆ
ಮುಗಿಲನೆಲ್ಲ ಒಲುಮೆಯ ಚಿತ್ತಾರವೊಂದು ತುಂಬಲಿ!!
2 comments:
chendada kavana
dhanyavaadagalu seetaramravarige
Post a Comment