ಬೊಚ್ಚು ಬಾಯ ನಗೆಯ ಕಣ್ಣ
ಅಜ್ಜಿ ನೆನೆವಲಪ್ಪಿ ಬಂದು
ಬಾಲ್ಯವೆಲ್ಲ ನೆನಪ ತಂದು
ಕಣ್ಣಾಲಿ ತೇವ ಮಾಡಿದಳೋ
ಚೌಕಾ ಬಾರಾ ಆಡುತಲಿ
ಗೆಲಬೇಕು ನಾನೇ ಅಲ್ಲಿ
ಅಜ್ಜಿ ಮಾತ್ರ ನಗುತ ಸುಮ್ಮನಿರಬೇಕು
ಹೊಟ್ಟೆ ತಬ್ಬಿ ಮಲಗಲು ಬೇಕು
ನಿದ್ದೆ ಬಾರದಿರೆ ಕಥೆಯ ಕೇಳಲು ಬೇಕು
ಅಮ್ಮನಿಗಿಂತ ಅಜ್ಜಿಯೇ ಮೇಲು
ಅದಕೆ ಏನೋ ಮಲಗಲು..
ನೀರುಣಿಸುತ ಗಿಡಗಳಿಗೆ
ಚಿಕ್ಕ ಕಪ್ಪೆ ತೋರಿಸಿ ನಲಿಯಲು
ಪೂಜೆಗಾಗಿ ಹೂ ಕೊಯ್ಯಲು
ಅಜ್ಜಿಯಲ್ಲದೆ ಇನ್ನಾರು ಸರಿಯದಕೆ?
ಅಮ್ಮ ಕೋಪಿಸಿ ಒದೆಗಳು ಬೀಳಲು
ಅಜ್ಜಿಯ ಬೆಂಬಲ ಸಾಕೆನಗೆ
ಮೆಲ್ಲಗೆ ದೊಡ್ಡ ಹೊಟ್ಟೆ ಹಿಂದೆ ಸರಿದು
ಅಮ್ಮ ಸುಮ್ಮನಾಗುವುದ ನೋಡಲೆನಗೆ
ಆಯುಧ ಪೂಜೆಯ ದಿನವಂತೂ
ವಿಭೂತಿ-ಮಂಗಳದ್ರವ್ಯ ಹಿಡಿದು
ಗಂಟೆ ಬಾರಿಸುತ್ತ ಅಜ್ಜಿ ಹಿಂದೆ
ಸ್ವಿಚ್ ಬೋರ್ಡಿಗು ಪೂಜಿಸುವ ಸಂಭ್ರಮ
ಹುಣಿಸೆ ಉಂಡಿಯ ಕುಟ್ಟಿ ಮಾಡಿ
ಖಾರ ಹೆಚ್ಚಾಗೆ ಮೂಗ ಎಳೆಯುತಲಿ
ಚಪ್ಪರಿಸೊ ಸವಿ ಈಗೆಲ್ಲಿ?
ಉಂಡಿ ಕುಟ್ಟಿ ಕೊಟ್ಟ ಅಮ್ಮಮ್ಮನು ಈಗೆಲ್ಲಿ?
1 comment:
its too good
Post a Comment